»   » ಪುನೀತ್ ಯಾರೇ ಕೂಗಾಡಲಿ ರಿಲೀಸ್ ಯಾವಾಗ?

ಪುನೀತ್ ಯಾರೇ ಕೂಗಾಡಲಿ ರಿಲೀಸ್ ಯಾವಾಗ?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯಾರೇ ಕೂಗಾಡಲಿ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿರುವ ಅವರ ಪ್ರೇಕ್ಷಕರಿಗೆ ಉತ್ತರ ಸಿಕ್ಕಿದೆ. ಬಹುಶಃ ಈ ಚಿತ್ರ ಡಿಸೆಂಬರ್ ಕೊನೆಗೆ ತೆರೆಕಾಣುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು.

ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿ ಭಾವನಾ. ತಮಿಳಿನ ಪೊರಾಲಿ ಚಿತ್ರದ ರೀಮೇಕ್ ಆದರೂ ಕನ್ನಡದಲ್ಲಿ ಹೇಗೆ ಮೂಡಿಬಂದಿರಬಹುದು ಎಂಬ ಕುತೂಹಲ ಪುನೀತ್ ಅಭಿಮಾನಿಗಳಿಗೆ ಇದ್ದೇ ಇದೆ.

ಪೊರಾಲಿ ಚಿತ್ರವನ್ನು ನಿರ್ದೇಶಿಸಿದ್ದ ಸಮುದ್ರ ಖಣಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಡಿಸೆಂಬರ್ 21ಕ್ಕೆ ತೆರೆಕಾಣುವ ಸಾಧ್ಯತೆಗಳಿವೆ. ಹುಡುಗರು ಚಿತ್ರದ ಬಳಿಕ ಮತ್ತೊಮ್ಮೆ ಲೂಸ್ ಮಾದ ಯೋಗೇಶ್ ಅವರು ಪುನೀತ್ ಗೆ ಈ ಚಿತ್ರದಲ್ಲೂ ಸಾಥ್ ನೀಡಿದ್ದಾರೆ.

ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಅಚ್ಯುತ ಕುಮಾರ್, ರಾಕೇಶ್ ಅಡಿಗ, ಸಾಧು ಕೋಕಿಲ, ಶೋಭರಾಜ್, ಚಾರ್ಮಿ, ಸಿಂಧು, ಲಕ್ಷ್ಮಿ ಹೆಗಡೆ, ಮೈಕೋ ನಾಗರಾಜ್ ಹಾಗೂ ಸುರೇಶ್ ಚಂದ್ರ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

ವರನಟ ಡಾ.ರಾಜ್ ಕುಮಾರ್ ಅಭಿನಯದ ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಜಯಪ್ರಿಯ ಗೀತೆ "ಯಾರೇ ಕೂಗಾಡಲಿ ಊರೇ ಹೋರಾಡಲಿ...". ಈ ಹಾಡಿನ ಸಾಲನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
Power Star Puneeeth Rajkumar's upcoming film Yaare Koogadali slated for release on 22nd December 2012. The film written and directed by Samuthirakani, starring Puneeth Rajkumar, Yogesh and Bhavana in the lead roles.
Please Wait while comments are loading...