twitter
    For Quick Alerts
    ALLOW NOTIFICATIONS  
    For Daily Alerts

    'ಪುನೀತ ಪರ್ವ': 'ಗಂಧದ ಗುಡಿ' ಪ್ರೀ ರಿಲೀಸ್ ಇವೆಂಟ್ ಲೈವ್ ಎಲ್ಲಿ ನೋಡಬಹುದು?

    |

    ಪುನೀತ್ ರಾಜ್‌ಕುಮಾರ್, ಕೊನೆಯ ಬಾರಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿರುವ 'ಗಂಧದ ಗುಡಿ' ಡಾಕ್ಯು-ಸಿನಿಮಾ ಇದೇ ತಿಂಗಳ 28 ರಂದು ತೆರೆಗೆ ಬರಲಿದ್ದು, ಈ ಸಂಬಂಧ ದೊಡ್ಮನೆ ಕುಟುಂಬದವರು ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಇಂದು (ಅಕ್ಟೋಬರ್ 21) ಆಯೋಜಿಸಿದ್ದಾರೆ.

    'ಪುನೀತ ಪರ್ವ' ಹೆಸರಿನ ಈ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯೋತ್ತಮರು ಸೇರಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಹಲವು ಸಚಿವರು, ನೆರೆಹೊರೆಯ ಚಿತ್ರರಂಗದ ಗಣ್ಯರು, ಪ್ರಮುಖರು ಸಹ ಆಗಮಿಸಲಿದ್ದಾರೆ. ಕೆಲವರಂತೂ ಈಗಾಗಲೇ ಬೆಂಗಳೂರಿಗೆ ತಲುಪಿಯಾಗಿದೆ.

    ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವು ಅಕ್ಟೋಬರ್ 21 ರ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದ್ದು, ಸುಮಾರು 30 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

    Puneetha Parva: Gandhada Gudi Pre Release Event Where To Watch Live

    ಆದರೆ ರಾಜ್ಯದ, ದೇಶದ, ವಿದೇಶದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಹ ಈ ಅದ್ಧೂರಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಅವರಿಗಾಗಿ ಲೈವ್ ವ್ಯವಸ್ಥೆಯನ್ನು ಮಾಡಲಾಗಿದೆ.

    'ಫಿಲ್ಮಿಬೀಟ್ ಕನ್ನಡ' ಯೂಟ್ಯೂಬ್ ಚಾನೆಲ್‌ನಲ್ಲಿ (https://www.youtube.com/c/FilmiBeatKannada1) ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ 'ಪಿಆರ್‌ಕೆ ಆಡಿಯೋ' ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮದ ಲೈವ್ ಪ್ರಸಾರವಾಗಲಿದೆ. ಇನ್ನೂ ಕೆಲವು ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗಗಳ ಯೂಟ್ಯೂಬ್ ಚಾನೆಲ್ ಹಾಗೂ ಬಹುತೇಕ ಎಲ್ಲ ಟಿವಿ ಮಾಧ್ಯಮಗಳಲ್ಲಿಯೂ ಲೈವ್ ಪ್ರಸಾರವಾಗಲಿದೆ.

    ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅಭಿಮಾನಿಗಳಿಗಾಗಿ ವಿಶೇಷ ವ್ಯವಸ್ಥೆಯನ್ನು ದೊಡ್ಮನೆ ಕುಟುಂಬ ಈಗಾಗಲೇ ಮಾಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬಿಳಿ ಬಣ್ಣದ ಉಡುಗೆ ತೊಟ್ಟು ಬರುವಂತೆ ವ್ಯವಸ್ಥಾಪಕರು ಮನವಿ ಸಹ ಮಾಡಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೊದಲ ಭಾರಿಗೆ ವೇದಿಕೆ ಮೇಲೆ ಮಾತನಾಡುವ ಸಾಧ್ಯತೆಯೂ ಇದೆ.

    English summary
    Puneetha Parva: Gandhada Gudi pre release event organized in Bangalore palace ground. Here you can watch event live.
    Friday, October 21, 2022, 16:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X