»   » ಪುನೀತ್ ಹೊಸ ಚಿತ್ರಕ್ಕೆ ಬಾಲಿವುಡ್ ಬೊಂಬೆ ಸೋನಂ

ಪುನೀತ್ ಹೊಸ ಚಿತ್ರಕ್ಕೆ ಬಾಲಿವುಡ್ ಬೊಂಬೆ ಸೋನಂ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸದ್ಯದ ಬಿಜಿಯೆಸ್ಟ್ ಹೀರೋ ಯಾರು ಅಂದ್ರೆ, ಎಲ್ಲರೂ ಕಣ್ಮುಚ್ಚಿಕೊಂಡು ಕೊಡುವ ಉತ್ತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಕೈಯಲ್ಲಿ ಕಮ್ಮಿ ಅಂದ್ರೂ ಆರು ಚಿತ್ರಗಳನ್ನ ಇಟ್ಟುಕೊಂಡಿರುವ ಅಪ್ಪು ಮುಂದಿನ ತಿಂಗಳು ತಮ್ಮ ಹೊಸ ಸಿನಿಮಾಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಹೇಗಿದ್ದರೂ 'ರಣವಿಕ್ರಮ' ಶೂಟಿಂಗ್ ಕಂಪ್ಲೀಟ್ ಆಗಿದೆ. ಏಪ್ರಿಲ್ ರಜೆಯ ವೇಳೆಯಲ್ಲಿ ಬೆಳ್ಳಿಪರದೆ ಮೇಲೆ 'ರಣವಿಕ್ರಮ'ನ ಆರ್ಭಟ ಶುರುವಾಗ್ತಿದ್ದಂತೆ, ಅಪ್ಪು ಹೊಸ ಪ್ರಾಜೆಕ್ಟ್ ಗೆ ಕೈಹಾಕುತ್ತಿದ್ದಾರೆ.

ಅಪ್ಪುಗೆ ನಾಯಕಿಯಾಗುವುದಕ್ಕೆ ಪಂಜಾಬ್ ಕುವರಿ ಅಸ್ತು ಅಂದಿದ್ದಾರೆ. ಕಿಂಗ್ ಖಾನ್ ಶಾರುಖ್ ಗೆ ಹೀರೋಯಿನ್ ಆಗ್ಬೇಕಿದ್ದ ಈ ಬೆಡಗಿ, ಇದೀಗ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದಾರೆ. ಅಪ್ಪು ಜೊತೆ ಮರಸುತ್ತುವ ನೂತನ ಬೆಡಗಿಯ ಸಂಪೂರ್ಣ ವೃತ್ತಾಂತ ಇಲ್ಲಿದೆ. ಮುಂದೆ ಓದಿ......

ಮುಂಬೈ ಬೆಡಗಿ ಸೋನಂ ಬಾಜ್ವಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೀರೋಯಿನ್ ಆಗುತ್ತಿರುವ ದಂತದ ಗೊಂಬೆ ಈಕೆಯೇ. ಹೆಸರು ಸೋನಂ ಬಾಜ್ವಾ. ವೃತ್ತಿಯಲ್ಲಿ ಏರ್ ಹಾಸ್ಟೆಸ್ ಆಗಿರುವ ಸೋನಂ ಬಾಜ್ವಾಗೆ ಮಾಡೆಲಿಂಗ್ ಹವ್ಯಾಸ.

ಕಾಲಿವುಡ್ ನಲ್ಲಿ ಸೋನಂ ಫೇಮಸ್

ಮೂಲತಃ ಪಂಜಾಬಿಯಾದ ಸೋನಂ, ಮಾಡೆಲಿಂಗ್ ನಲ್ಲಿ ಯಶಸ್ವಿಯಾಗಿ 2012 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲ್ಲಿಂದಲೇ, ಸೋನಂಗೆ ಬಾಲಿವುಡ್ ಬಾಗಿಲು ತೆರೆದದ್ದು. ಅದಾಗಲೇ 'ಬೆಸ್ಟ್ ಆಫ್ ಲಕ್' ಮತ್ತು 'ಪಂಜಾಬ್ 1984' ನಂತಹ ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದ ಸೋನಂ, ಕಳೆದ ವರ್ಷ 'ಕಪ್ಪಳ್' ಅನ್ನುವ ತಮಿಳು ಚಿತ್ರವೊಂದಲ್ಲಿ ಅಮೋಘ ಅಭಿನಯ ನೀಡಿದ್ದರು. ಇದರಿಂದ ಕಾಲಿವುಡ್ ನಲ್ಲಿ ಸೋನಂಗೆ ಬಹುಬೇಡಿಕೆ ಶುರುವಾಗಿದೆ. [ಪುನೀತ್ ಹೊಸ ಚಿತ್ರ ಏಪ್ರಿಲ್ ನಿಂದ ಶುರು..!]

ಶಾರುಖ್ ಗೆ ಹೀರೋಯಿನ್ ಆಗ್ಬೇಕಿದ್ದ ಸೋನಂ

'ಬಾಲಿವುಡ್ ಬಾದ್ಷಾ' ಶಾರುಖ್ ಖಾನ್ ಅಭಿನಯದ 'ಹ್ಯಾಪಿ ನ್ಯೂ ಇಯರ್' ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶ ಸೋನಂಗೆ ಲಭಿಸಿತ್ತು. ಆದ್ರೆ, ದುರಾದೃಷ್ಟವಶಾತ್ ಕೊನೆ ಕ್ಷಣದಲ್ಲಿ ಮಿಸ್ ಆಗಿ ಸೋನಂ ಜಾಗಕ್ಕೆ ದೀಪಿಕಾ ಪಡುಕೋಣೆ ಕಾಲಿಟ್ಟರು.

ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ

ಪಂಜಾಬಿ ಕುಡಿ ಸೋನಂ ಇದೀಗ ಪುನೀತ್ ಅಭಿನಯದ 'Production No 1' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಶರವಣನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಏಪ್ರಿಲ್ ನಲ್ಲಿ ಸಿನಿಮಾ ಸೆಟ್ಟೇರಲಿದೆ. ಚಿತ್ರಕ್ಕಿನ್ನೂ ಟೈಟಲ್ ಫೈನಲ್ ಆಗಿಲ್ಲ. [ಪುನೀತ್ ಮುಂದಿನ ಚಿತ್ರಕ್ಕೆ ಕಾಲಿವುಡ್ ನಿರ್ದೇಶಕರು ಬರ್ತಾರೆ!]

ತಮಿಳು ಸಿನಿಮಾ ನೋಡಿ ಸೆಲೆಕ್ಷನ್

ಸೋನಂ ಅಭಿನಯದ ತಮಿಳು ಸಿನಿಮಾ 'ಕಪ್ಪಳ್' ನೋಡಿ, ಕಾಲಿವುಡ್ ಹಿಟ್ ನಿರ್ದೇಶಕ ಶರವಣನ್ ಸೆಲೆಕ್ಟ್ ಮಾಡಿದ್ದಾರೆ. 'ಎಂಗೆಯುಂ ಎಪ್ಪೋದುಮ್' ನಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿರುವ ಶರವಣನ್, ಅಪ್ಪುಗೆ ಆಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. 'Production No 1' ಚಿತ್ರದ ಇನ್ನಷ್ಟು ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

    English summary
    Kannada Actor Puneeth Rajkumar is roped into play lead in Tamil Director Saravanan's Kannada directorial debut. The movie is ready to go on floors from April. Punjabi Actress Sonam Bajwa is selected to pair along with Appu.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada