For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾ-ಕೆನಡಾದಲ್ಲಿ ಹಾರಲಿದೆ 'ಪುಷ್ಪಕ ವಿಮಾನ'!

  By Bharath Kumar
  |

  ರಮೇಶ್ ಅರವಿಂದ್ ಅಭಿನಯದ 100ನೇ ಸಿನಿಮಾ 'ಪುಷ್ಪಕ ವಿಮಾನ' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತಂದೆ-ಮಗಳ ಬಾಂಧವ್ಯದ ಕಥೆ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಬುದ್ದಿಮಾಂದ್ಯ ತಂದೆ ಪಾತ್ರದಲ್ಲಿ ರಮೇಶ್ ಅವರು ಅದ್ಭುತವಾಗಿ ನಟಿಸಿದ್ದಾರೆ. ಮಗಳ ಪಾತ್ರದಲ್ಲಿ ಬೇಬಿ ಯುವಿನಾ ಪಾರ್ಥವಿ ಮತ್ತು ರಚಿತಾ ರಾಮ್ ಗಮನ ಸೆಳೆದಿದ್ದಾರೆ.

  ಹೀಗೆ, ಕರ್ನಾಟಕದಲ್ಲಿ ಗೆಲುವಿನ ನಗು ಬೀರಿದ್ದ 'ಪುಷ್ಪಕ ವಿಮಾನ', ಈಗ ಸಪ್ತಸಾಗರದಾಚೆ ಹಾರಾಡಲು ಸಿದ್ದವಾಗಿದೆ. ಹೌದು, ರಮೇಶ್ ಅವರ 100ನೇ ಚಿತ್ರ ಈ ವಾರದಿಂದ ಅಮೆರಿಕಾ ಹಾಗೂ ಕೆನಡಾ ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ.[ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ' ]

  ಜನವರಿ 21 ಹಾಗೂ ಜನವರಿ 22 ರಂದು 'ಪುಷ್ಪಕ ವಿಮಾನ' ಅಮೆರಿಕಾದಲ್ಲಿ ರಿಲೀಸ್ ಆಗುತ್ತಿದೆ. 'ಡಿಜಿಮ್ಯಾಕ್ಸ್ ಥಿಯೇಟರ್'ನಲ್ಲಿ ಮಧ್ಯಾಹ್ನ 2.30ಕ್ಕೆ ಹಾಗೂ ಸಂಜೆ 5 ಗಂಟೆಗೆ 'ಪುಷ್ಪಕ ವಿಮಾನ' ಪ್ರದರ್ಶನವಾಗುತ್ತಿದೆ.[ಆಸ್ಕರ್ ಗೆ ಅಂಗಳಕ್ಕೆ ಹಾರಲಿದೆಯೇ 'ಪುಷ್ಪಕ ವಿಮಾನ'?]

  ಎಸ್.ರವಿಂದ್ರನಾಥ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದರು. ಪವನ್ ಒಡೆಯರ್, ವಿಖ್ಯಾತ್, ದೀಪಕ್ ಕೃಷ್ಣ, ದೀಪಕ್ ಕಿಶೋರ್, ಸುಕೃತ್, ದೇವಂತ್ ಸೇರಿ ನಿರ್ಮಾಣ ಮಾಡಿದ್ದಾರೆ. ಜನವರಿ 6 ರಂದು ಕರ್ನಾಟಕ ರಾಜ್ಯಾದ್ಯಂತ 'ಪುಷ್ಪಕ ವಿಮಾನ' ತೆರೆಕಂಡಿತ್ತು.

  English summary
  Ramesh Aravind starrer 100th film 'Pushpaka Vimana' is all set to Release in USA and Canada on January 21st. The Movie Directed by S.Ravindranath and also Featured Rachita Ram, Yuvina Parthavi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X