»   » ರಾಜಕಾರಣಿ ಪುತ್ರನ ಕೈಲಿ ಲಾಂಗು-ಗನ್ ಕೊಟ್ಟ ಚಂದ್ರು

ರಾಜಕಾರಣಿ ಪುತ್ರನ ಕೈಲಿ ಲಾಂಗು-ಗನ್ ಕೊಟ್ಟ ಚಂದ್ರು

Posted By:
Subscribe to Filmibeat Kannada

ನಿರ್ದೇಶಕ ಆರ್.ಚಂದ್ರು ಹೊಸ ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ರಾಜಕಾರಣಿ ಹೆಚ್.ಎಂ.ರೇವಣ್ಣ ಪುತ್ರ ಅನೂಪ್ ರನ್ನ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ. ಹೀಗಂತ ಕೆಲ ದಿನಗಳ ಹಿಂದೆಯಷ್ಟೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು.

ಇದೇ ಶುಕ್ರವಾರ (ಜೂನ್ 12) ಈ ಹೊಸ ಚಿತ್ರಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಸಮಾರಂಭ ನಡೆಯಲಿದ್ದು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭ ಫಲಕ ಮತ್ತು ಟೀಸರ್ ಬಿಡುಗಡೆ ಮಾಡಲಿದ್ದಾರೆ. [ಆರ್.ಚಂದ್ರು ನಿರ್ದೇಶನದಲ್ಲಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ ಎಂಟ್ರಿ]

R.Chandru directorial Anoop starrer 'Lakshmana' to launch on June 12th

ಅದಕ್ಕೂ ಮುನ್ನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳನ್ನ ಆರ್.ಚಂದ್ರು ಬಿಡುಗಡೆ ಮಾಡಿದ್ದಾರೆ. ಮೊದಲ ಚಿತ್ರದಲ್ಲೇ ಕೈಲಿ ಲಾಂಗು ಮತ್ತು ಗನ್ ಹಿಡಿದು ಖಡಕ್ ಪೋಸ್ ನೀಡಿದ್ದಾರೆ ಅನೂಪ್ ರೇವಣ್ಣ.

ಅನೂಪ್ ರೇವಣ್ಣ ಗ್ರ್ಯಾಂಡ್ ಎಂಟ್ರಿ ನೀಡಲಿರುವ ಚಿತ್ರಕ್ಕೆ 'ಲಕ್ಷ್ಮಣ' ಅಂತ ಟೈಟಲ್ ಇಡಲಾಗಿದೆ. ಮೊದಲ ನೋಟಕ್ಕೆ ರೌಡಿಯಂತೆ ಕಂಡರೂ, 'A Pure Lover Boy' ಅನ್ನುವ ಟ್ಯಾಗ್ ಲೈನ್ ಇಟ್ಟಿದ್ದಾರೆ ಚಂದ್ರು. ಇಷ್ಟು ಸಾಲ್ದು ಅಂತ ಅನೂಪ್ ಗೆ ಆಗಲೇ 'ಆಕ್ಷನ್ ಹೀರೋ' ಅಂತ ಬಿರುದು ಕೂಡ ನೀಡಿದ್ದಾರೆ. ['ಬ್ರೇಕಿಂಗ್ ನ್ಯೂಸ್' ಕೊಡ್ತಾರಂತೆ ನಿರ್ದೇಶಕ ಆರ್.ಚಂದ್ರು]

R.Chandru directorial Anoop starrer 'Lakshmana' to launch on June 12th

ಮಗನ ರೆಡ್ ಕಾರ್ಪೆಟ್ ಎಂಟ್ರಿಗೆ ಖುದ್ದು ಹೆಚ್.ಎಂ.ರೇವಣ್ಣ ಬಂಡವಾಳ ಹಾಕುತ್ತಿದ್ದಾರೆ. ಸಿನಿಮಾ ಮತ್ತು ಆಕ್ಷನ್ ಪಾತ್ರಕ್ಕೆ ಬೇಕಾಗಿರುವ ಸಕಲ ತಯಾರಿಯನ್ನ ಅನೂಪ್ ಮಾಡಿಕೊಂಡಿದ್ದು, ಇದೇ ಶುಕ್ರವಾರ ಸಿನಿಮಾ ಸೆಟ್ಟೇರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Congress Leader H.M.Revanna's son Anoop is all set to enter Sandalwood. R.Chandru is roped in to direct the flick which will be produced by H.M.Revanna himself. The movie is titled as 'Lakshmana' and will be launched on June 12th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X