»   » ಹೊಸ ದಾಖಲೆ ಬರೆದ ಹೊಸ ಹುಡುಗ ಅನೂಪ್ 'ಲಕ್ಷ್ಮಣ'

ಹೊಸ ದಾಖಲೆ ಬರೆದ ಹೊಸ ಹುಡುಗ ಅನೂಪ್ 'ಲಕ್ಷ್ಮಣ'

Posted By:
Subscribe to Filmibeat Kannada

ಆರ್.ಚಂದ್ರು ನಿರ್ದೇಶನದ, ರಾಜಕಾರಣಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ ಚೊಚ್ಚಲ ಬಾರಿ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಲಕ್ಷ್ಮಣ' ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಸೃಷ್ಟಿಯಾಗಿರುವ 'ಹವಾ' ಬಗ್ಗೆ ನಿನ್ನೆಯಷ್ಟೇ ಮಾಹಿತಿ ನೀಡಿದ್ವಿ.

ಈಗ 'ಲಕ್ಷ್ಮಣ' ಬಗ್ಗೆ ಮತ್ತೊಂದು ಸೆನ್ಸೇಷನಲ್ ನ್ಯೂಸ್ ಹೊತ್ತು ತಂದಿದ್ದೀವಿ. ಅದೇನಂದ್ರೆ, 'ಲಕ್ಷ್ಮಣ' ಚಿತ್ರದ ಸ್ಯಾಟೆಲೈಟ್ ಹಕ್ಕುಗಳನ್ನ ಪಡೆಯಲು ಕನ್ನಡ ಮನರಂಜನಾ ವಾಹಿನಿಗಳು ಕ್ಯೂ ನಲ್ಲಿ ನಿಂತಿವೆಯಂತೆ. [ಚಂದ್ರು-ಅನೂಪ್ 'ಲಕ್ಷ್ಮಣ' ಹವಾ ಹೆಂಗಿದೆ ಗುರು? ಅಂದ್ರೆ ನೀವೂ ದಂಗಾಗ್ತೀರಾ.!]


r-chandru-s-lakshmana-satellite-rights-for-record-price

ನಂಬಿದ್ರೆ ನಂಬಿ, 'ಲಕ್ಷ್ಮಣ' ಚಿತ್ರದ ಪ್ರಸಾರ ಹಕ್ಕುಗಳಿಗಾಗಿ ಟಿವಿ ಚಾನೆಲ್ ಗಳು ನಾ ಮುಂದು, ತಾ ಮುಂದು ಎನ್ನುತ್ತಿವೆಯಂತೆ. ಈಗಾಗಲೇ ಆರ್.ಚಂದ್ರು ಬಳಿ ಟಾಪ್ ವಾಹಿನಿಯೊಂದರ ಮುಖ್ಯಸ್ಥರು ಮಾತುಕತೆ ನಡೆಸಿ ದಾಖಲೆ ಬೆಲೆ (ಕೋಟಿ ಲೆಕ್ಕದಲ್ಲಿ) ಕೋಟ್ ಮಾಡಿದ್ದಾರಂತೆ. ಇನ್ನೆರಡು ದಿನಗಳಲ್ಲಿ ಫೈನಲ್ ಆಗಲಿದೆ.


ಸ್ಟಾರ್ ಸಿನಿಮಾಗಳಿಗೆ ನೀಡುವ ಬೆಲೆಗೆ 'ಲಕ್ಷ್ಮಣ' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಗೆ ಬೇಡಿಕೆ ಬಂದಿರುವುದನ್ನು ನೋಡಿ ಆರ್.ಚಂದ್ರು ಸಂತಸ ವ್ಯಕ್ತಪಡಿಸುತ್ತಾರೆ. [ಕನ್ನಡದ ಯಾವ 'ಸ್ಟಾರ್'ಗೂ 'ಲಕ್ಷ್ಮಣ' ಅನೂಪ್ ಕಮ್ಮಿ ಇಲ್ಲ ಬಿಡಿ.!]


ನಿಜ ಹೇಳ್ಬೇಕಂದ್ರೆ, ಸ್ಟಾರ್ ಸಿನಿಮಾಗಳನ್ನ ಕೊಂಡುಕೊಳ್ಳುವುದಕ್ಕೆ ವಾಹಿನಿಯವರು ಹಿಂದು-ಮುಂದು ನೋಡುತ್ತಿರುವ ಕಾಲ ಇದು. ಹೀಗಿರುವಾಗ, ಹೊಸ ಹುಡುಗ ಅನೂಪ್ ರೇವಣ್ಣ ಚಿತ್ರಕ್ಕೆ ಈ ಪರಿ ಡಿಮ್ಯಾಂಡ್ ಬಂದಿರುವುದನ್ನು ನೋಡಿದ್ರೆ, ಆರ್.ಚಂದ್ರು ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಅಂತರ್ಥ.

English summary
Congress Politician H.M.Revanna's son Anup Revanna starrer R.Chandru directorial 'Lakshmana' is in demand now. Kannada Entertainment Channels are ready to give record price to obtain 'Lakshmana' satellite rights.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X