»   » ಆರ್. ಚಂದ್ರು 'ಮಳೆ' ಗೆ 'ಮುದ್ದು ಮನಸು' ನಲುಗಿತೆ?

ಆರ್. ಚಂದ್ರು 'ಮಳೆ' ಗೆ 'ಮುದ್ದು ಮನಸು' ನಲುಗಿತೆ?

Posted By:
Subscribe to Filmibeat Kannada

ನಿರ್ಮಾಪಕ ಕಮ್ ಡಿಸ್ಟ್ರಿಬ್ಯುಟರ್, ಕನಕಪುರ ಶ್ರೀನಿವಾಸ್ ಇವಾಗ ಸಖತ್ ಕನ್ ಫ್ಯೂಶನ್ ಮಾಡಿಕೊಂಡಿದ್ದಾರೆ. ಯಾಕೆ ಅಂತೀರಾ? ಅವರು ವಿತರಣಾ ಹಕ್ಕು ವಹಿಸಿಕೊಂಡಿರುವ 'ಮುದ್ದು ಮನಸೇ' ಹಾಗೂ 'ಮಳೆ' ಎರಡು ಚಿತ್ರಗಳು ಒಂದೇ ದಿನ ತೆರೆ ಕಾಣುವ ಸಂಭವ ಇದೆಯಂತೆ.

ನಿರ್ದೇಶಕ ಆರ್.ಚಂದ್ರು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ಹಾಗೂ ಲವ್ಲಿ ಸ್ಟಾರ್ ಪ್ರೇಮ್, ಮತ್ತು ಅಮೂಲ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಮಳೆ' ಚಿತ್ರ ಆಗಸ್ಟ್ 7 ರಂದು ತೆರೆ ಕಾಣುತ್ತಿದ್ದು, ಅದೇ ದಿನ ಅನಂತ್ ಶೈನ್ ಆಕ್ಷನ್-ಕಟ್ ಹೇಳಿರುವ 'ಮುದ್ದು ಮನಸೇ' ಕೂಡ ತೆರೆ ಕಾಣಲಿದೆ ಅಂತ ಸುದ್ದಿಯಾಗಿತ್ತು.

ಆದರೆ ಲೇಟೆಸ್ಟ್ ಮಾಹಿತಿ ಪ್ರಕಾರ ಇದೀಗ ನಿರ್ದೇಶಕ ಆರ್ ಚಂದ್ರು, ಶಿಷ್ಯ ತೇಜಸ್ ಆಕ್ಷನ್-ಕಟ್ ಹೇಳಿರುವ 'ಮಳೆ' ಮೊದಲು ತೆರೆ ಮೇಲೆ ರಾರಾಜಿಸಲಿದೆಯಂತೆ. ಆ ನಂತರ 'ಮುದ್ದು ಮನಸೇ' ಸರದಿ ಅಂತಿದ್ದಾರೆ ಶ್ರೀನಿವಾಸ್.[ಮಳೆ ಲೇಟು ಜುಲೈಗೂ ಡೌಟು ಅಂತಾರೆ ಆರ್ ಚಂದ್ರು ]

Pream, muddu manase

ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಚಿತ್ರ ವಿತರಣೆ ಹಕ್ಕು ವಹಿಸಿಕೊಂಡಿರುವ ಶ್ರೀನಿವಾಸ್ ಹಾಗೂ ಆರ್.ಎಸ್.ಪ್ರೊಡಕ್ಷನ್ಸ್ ಅವರಿಗೆ ಚಿತ್ರ ವಿತರಣೆ ಮಾಡುವುದು ಕಷ್ಟ ಸಾಧ್ಯ. ಆದ್ದರಿಂದ 'ಮುದ್ದು ಮನಸೇ' ಚಿತ್ರವನ್ನು ಸದ್ಯಕ್ಕೆ ಪೋಸ್ಟ್ ಪೋನ್ ಮಾಡಲಾಗಿದ್ದು, 'ಮಳೆ' ಮೊದಲು ತೆರೆ ಮೇಲೆ ಬರಲಿದೆ.['ಮಳೆ'ಯಲ್ಲಿ ಪ್ರೇಮ್-ಅಮೂಲ್ಯ ನಡುವೆ ಏನೋ ಸರಿಯಿಲ್ಲ]

ಈ ಮೊದಲು 'ಮಳೆ' ರಿಲೀಸಿಂಗ್ ಡೇಟ್ ಕನ್ ಫರ್ಮ್ ಆಗಿದ್ದು, ಕಾರಣಾಂತರಗಳಿಂದ ನಿರ್ಮಾಪಕ ಆರ್.ಚಂದ್ರು ಚಿತ್ರ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹಾಕಿದ್ದಾರೆ. ಆದರೆ ಈ ಎಲ್ಲಾ ಕನ್ ಫ್ಯೂಶನ್ ನಿಂದ 'ಮುದ್ದು ಮನಸೇ' ಚಿತ್ರ ತಂಡ ಮಾತ್ರ ತುಂಬಾ ಬೇಸರ ಮಾಡಿಕೊಂಡಿದೆಯಂತೆ.['ಮಳೆ'ಯಲ್ಲಿ ಲವ್ಲಿ ಸ್ಟಾರ್ ಜೊತೆ ಬೇಬಿ ಡಾಲ್ ಅಮೂಲ್ಯ ಡಾನ್ಸ್ ]

ಅದೇನೇ ಇರಲಿ ಅಂತೂ 'ಮಳೆ'ಯ ಊರು ಮಲೆನಾಡ ತವರೂರಾದ ಸಕಲೇಶಪುರದಲ್ಲಿ ಚಿತ್ರೀಕರಣಗೊಂಡಿರುವ ಕಲರ್ ಫುಲ್ ಚಿತ್ರ 'ಮಳೆ' ಯನ್ನು ಆಗಸ್ಟ್ 7 ಕ್ಕೆ ಚಂದ್ರು ತೆರೆಯ ಮೇಲೆ ಸುರಿಸಿದರೆ ಲವ್ಲಿ ಸ್ಟಾರ್ ಅಭಿಮಾನಿಗಳು ಖುಷಿ ಪಡಬಹುದೇನೋ.

English summary
Producer-distributor Kanakapura Shrinivas has postponed Kannada movie 'Muddu Manase' for R Chandru's 'Male' is all set to be releasing on the August 7th. 'Male' features Kannada actor Prem, Kannada actress Amoolya in the lead role. The movie is directed by Tejas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada