»   » ಆರ್ ಚಂದ್ರು ಅವರ 'ಕನಕ' ಚಿತ್ರದಲ್ಲಿ ಅನಿಲ್-ಉದಯ್.!

ಆರ್ ಚಂದ್ರು ಅವರ 'ಕನಕ' ಚಿತ್ರದಲ್ಲಿ ಅನಿಲ್-ಉದಯ್.!

Posted By:
Subscribe to Filmibeat Kannada

'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ದುರಂತ ಸಾವಿಗೀಡಾದ ಖಳನಟ ಅನಿಲ್ ಹಾಗೂ ಉದಯ್ ಈಗ ನೆನಪು ಮಾತ್ರ. ಈ ನೆನಪನ್ನ ಹಚ್ಚಹಸಿರಾಗಿಸಲು ನಿರ್ದೇಶಕ ಆರ್.ಚಂದ್ರು ಮುಂದಾಗಿದ್ದಾರೆ.

ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೇ, ಆರ್.ಚಂದ್ರು ನಿರ್ದೇಶನ ಮಾಡುತ್ತಿರುವ 'ಕನಕ' ಚಿತ್ರದಲ್ಲಿ ಅನಿಲ್ ಹಾಗೂ ಉದಯ್ ಅಭಿನಯಿಸಬೇಕಿತ್ತು. ಇಬ್ಬರಿಗಾಗಿ 'ಕನಕ' ಚಿತ್ರದಲ್ಲಿ ವಿಶೇಷವಾಗಿ ಪಾತ್ರಗಳನ್ನ ಸೃಷ್ಟಿಸಲಾಗಿತ್ತು. ಆದ್ರೆ, ವಿಧಿಲಿಖಿತವೇ ಬೇರೆ ಆಗಿತ್ತು. ಅನಿಲ್-ಉದಯ್ ಅಕಾಲಿಕ ಮರಣದಿಂದ ಈಗ ಅವರಿಗಾಗಿ ಅಂತ 'ಕನಕ' ಚಿತ್ರದಲ್ಲಿ ಇಟ್ಟಿದ್ದ ಪಾತ್ರಗಳು ಖಾಲಿಯಾಗಿವೆ.[ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?]

ಆದರೂ, 'ಕನಕ' ಚಿತ್ರದಲ್ಲಿ ಮತ್ತೆ ನಿಮಗೆ ಅನಿಲ್ ಹಾಗೂ ಉದಯ್ ನೆನಪಾಗುತ್ತಾರೆ. ಹೇಗೆ ಅಂದ್ರೆ...

ತೆರೆಮೇಲೆ ಮತ್ತೆ 'ಅನಿಲ್-ಉದಯ್'

ಇಹಲೋಕ ತ್ಯಜಿಸಿದ ಅನಿಲ್ ಹಾಗೂ ಉದಯ್ ಅವರನ್ನ ಮತ್ತೆ ಬಿಗ್ ಸ್ಕ್ರೀನ್ ಮೇಲೆ ನೆನಪು ಮಾಡಿಕೊಳ್ಳಬಹುದು. ಇಂತಹ ಕೆಲಸವನ್ನ ಸ್ಟಾರ್ ನಿರ್ದೇಶಕ ಆರ್ ಚಂದ್ರು ಮಾಡುತ್ತಿದ್ದಾರೆ. ಆರ್ ಚಂದ್ರು ನಿರ್ದೇಶನ ಮಾಡುತ್ತಿರುವ 'ಕನಕ' ಚಿತ್ರದಲ್ಲಿ ಅನಿಲ್ ಹಾಗೂ ಉದಯ್ ಅವರನ್ನ ಮೆಲುಕು ಹಾಕಲಾಗುತ್ತದೆ.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

'ಕನಕ' ಚಿತ್ರದಲ್ಲಿ ಇಬ್ಬರು ಅಭಿನಯಿಸಬೇಕಿತ್ತು!

ಆರ್ ಚಂದ್ರು ನಿರ್ದೇಶನದ 'ಕನಕ' ಚಿತ್ರದಲ್ಲಿ ಅನಿಲ್ ಹಾಗೂ ಉದಯ್ ಗೆ ಪಾತ್ರಗಳು ಫಿಕ್ಸ್ ಆಗಿತ್ತು. ಅವರಿಗಾಗಿಯೇ ಎರಡು ಪಾತ್ರಗಳನ್ನ ಸೃಷ್ಠಿಸಲಾಗಿತ್ತು. ಆದ್ರೆ, 'ಮಾಸ್ತಿಗುಡಿ' ದುರಂತದಲ್ಲಿ ಅಕಾಲಿಕ ಸಾವುಗೀಡಾಗಿದ್ರಿಂದ ಈಗ ಆ ಪಾತ್ರಗಳಿಗೆ ಬೇರೆಯವರು ಬಣ್ಣ ಹಚ್ಚಬೇಕಾಗಿದೆ.[ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]

ಚಿತ್ರದಲ್ಲಿ ಬಳಸಲಾಗುತ್ತೆ ಅನಿಲ್-ಉದಯ್ ಹೆಸರು!

ಅನಿಲ್ ಹಾಗೂ ಉದಯ್ ಮಾಡಬೇಕಿದ್ದ ಪಾತ್ರಗಳನ್ನ ಬೇರೆ ಕಲಾವಿದರು ಮಾಡಲಿದ್ದಾರೆ. ಆದ್ರೆ, ಆ ಪಾತ್ರಗಳಿಗೆ ಅನಿಲ್ ಹಾಗೂ ಉದಯ್ ಅವರ ಹೆಸರುಗಳನ್ನೇ ಬಳಸಲು ಆರ್ ಚಂದ್ರು ನಿರ್ಧಾರ ಮಾಡಿದ್ದಾರೆ.[ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]

'ಕನಕ' ದುನಿಯಾ ವಿಜಯ್ ಸಿನಿಮಾ

ಅಂದ್ಹಾಗೆ, 'ಕನಕ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿರುವುದು ದುನಿಯಾ ವಿಜಯ್. ಇದು ಡಾ. ರಾಜ್ ಕುಮಾರ್ ಅಭಿಮಾನಿಯೊಬ್ಬರ ಕಥೆಯಾಗಿದ್ದು, ಇಲ್ಲಿ ವಿಜಿ ಅಣ್ಣಾವ್ರ ಫ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 'ಮಾಸ್ತಿ ಗುಡಿ' ದುರಂತ ಆಗದೇ ಹೋಗಿದ್ದರೆ, ವಿಜಿ-ಅನಿಲ್-ಉದಯ್ ಕಾಂಬಿನೇಷನ್ 'ಕನಕ' ಚಿತ್ರದಲ್ಲೂ ಮುಂದುವರೆಯುತ್ತಿತ್ತು.

'ಕನಕ' ಚಿತ್ರಕ್ಕೆ ಚಾಲನೆ!

ಸದ್ಯ, 'ಕನಕ' ಚಿತ್ರದ ಆಡಿಯೋ ರೆಕಾರ್ಡಿಂಗ್ ಗೆ ಚಾಲನೆ ನೀಡಲಿರುವ ಚಿತ್ರತಂಡ ಡಿಸೆಂಬರ್ 14ರಂದು ಹಾಡುಗಳು ಧ್ವನಿ ಮುದ್ರಣ ಕೆಲಸ ಶುರು ಮಾಡಲಿದೆ.

English summary
R Chandru's New Film 'Kanaka' is all set go on floors. Duniya Vijay will be playing Lead Role in the movie. This film based on a true story about Auto Driver who was a Fan of Dr.Rajkumar.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more