For Quick Alerts
  ALLOW NOTIFICATIONS  
  For Daily Alerts

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಆರ್ ಚಂದ್ರು ನಿರ್ದೇಶನ?

  |

  ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಕೈ ತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಶಿವಣ್ಣ ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂದ್ಹಾಗೆ ಕರುನಾಡ ಚಕ್ರವರ್ತಿಯ ಹೊಸ ಸಿನಿಮಾಗೆ ಆರ್ ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.

  ಇತ್ತೀಚಿಗೆ ರಿಲೀಸ್ ಆದ 'ಐ ಲವ್ ಯು' ಚಿತ್ರದ ಸಕ್ಸಸ್ ನ ನಂತರ ಆರ್ ಚಂದ್ರು ಉಪೇಂದ್ರ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದ್ರೀಗ ಅದರ ಜೊತೆಗೆ ಶಿವಣ್ಣ ಅವರಿಗೂ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಅಂದ್ಹಾಗೆ ಆರ್ ಚಂದ್ರು ಮತ್ತು ಶಿವಣ್ಣ ಈ ಮೊದಲು ಮೈಲಾರಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

  ಶಿವರಾಜ್ ಕುಮಾರ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳಿಂದ ಪೂಜೆ

  ಈಗ ಎರಡನೆ ಬಾರಿಗೆ ಮೈಲಾರಿ ಜೋಡಿ ಒಂದಾಗುವ ಸಾಧ್ಯತೆ ಇದೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಜಂಗಮ ಎಂದು ಟೈಟಲ್ ಫಿಕ್ಸ್ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಚಿತ್ರವನ್ನು ಅಧಿಕೃತವಾಗಿ ಶಿವಣ್ಣ ಹುಟ್ಟುಹಬ್ಬ ಜುಲೈ 12ಕ್ಕೆ ಅನೌನ್ಸ್ ಮಾಡಲಿದ್ದಾರೆ. ಚಿತ್ರಕ್ಕೆ ಐ ಲವ್ ಯು ಚಿತ್ರದ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು 'ಜಂಗಮ' ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ.

  ಕರುನಾಡ ಚಕ್ರವರ್ತಿ ಸದ್ಯ ಭುಜದ ಸರ್ಜರಿಗಾಗಿ ಲಂಡನ್ ಗೆ ತೆರಳಿದ್ದಾರೆ. ಈಗಾಗಲೆ ಶಿವಣ್ಣ ಅವರಿಗೆ ಸರ್ಜರಿ ಮಾಡಲಾಗಿದ್ದು ರೆಸ್ಟ್ ನಲ್ಲಿದ್ದಾರೆ. ಶಿವಣ್ಣ ಸಂಪೂರ್ಣ ಗುಣಮುಖರಾದ ನಂತರ 'ಜಂಗಮ' ಸಿನಿಮಾ ಪ್ರಾರಂಭವಾಗಲಿದೆ. ಶಿವಣ್ಣ ಸದ್ಯ 'ದ್ರೋಣ' ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ಇನ್ನು ಹೆಸರಿಡದ ಪಿ ವಾಸು ನಿರ್ದೇಶನದ ಚಿತ್ರವನ್ನು ಕೂಡ ಕಂಪ್ಲೀಟ್ ಮಾಡಿದ್ದಾರೆ.

  ಸದ್ಯ ಎ ಹರ್ಷ ನಿರ್ದೇಶನದ 'ಭಜರಂಗಿ-2' ಚಿತ್ರದಲ್ಲಿ ಶಿವಣ್ಣ ಬ್ಯುಸಿಯಾಗಿದ್ದರು. ಈಗಾಗಲೆ 'ಭಜರಂಗಿ-2' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. ಆದ್ರೆ ಶಿವಣ್ಣ ಸರ್ಜರಿಗೆಂದು ಲಂಡನ್ ಹೋದ ಕಾರಣ ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಸೆಪ್ಟಂಬರ್ ನಿಂದ ಶಿವಣ್ಣ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಲಿದ್ದು ಮೊದಲು 'ಭಜರಂಗಿ-2' ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

  English summary
  Kannada director R Chandru to direct a film for hatrick hero Shivarajkumar. Savanna and R chandru combination film titled Jangama.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X