»   » 'ರಾಜಕುಮಾರ'ನ 100ನೇ ದಿನದ ಸಂಭ್ರಮಕ್ಕೆ ಭರ್ಜರಿ ತಯಾರಿ

'ರಾಜಕುಮಾರ'ನ 100ನೇ ದಿನದ ಸಂಭ್ರಮಕ್ಕೆ ಭರ್ಜರಿ ತಯಾರಿ

Posted By:
Subscribe to Filmibeat Kannada

ಕನ್ನಡದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ 75 ದಿನಗಳನ್ನು ಪೂರೈಸಿ ನೂರನೇ ದಿನದತ್ತ ಮುನ್ನುಗ್ಗುತ್ತಿದೆ. ಮಾರ್ಚ್ 24ಕ್ಕೆ ರಿಲೀಸ್ ಆಗಿದ್ದ 'ರಾಜಕುಮಾರ' ಚಿತ್ರ ಜೂನ್ 30ಕ್ಕೆ ಸರಿಯಾಗಿ 100 ದಿನಗಳನ್ನು ಪೂರೈಸಲಿದೆ.

'ರಾಜಕುಮಾರ' ದಾಖಲೆಗಳ ಮೇಲೆ ದಾಖಲೆ ಮಾಡಿ, ಸ್ಯಾಂಡಲ್ ವುಡ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾ. ಹೀಗಾಗಿ, ಶತಕದ ಸಂಭ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ಮಾಡುವ ಯೋಚನೆ ಮಾಡಿದೆ. ಕನ್ನಡಿಗರ ಮನೆ, ಮನ ತಲುಪಿದ ಈ 'ರಾಜಕುಮಾರ'ನ ಉತ್ಸವ ದೊಡ್ಡ ಮಟ್ಟದಲ್ಲಿ ನಡೆಸುವ ನಿರ್ಧಾರ ಮಾಡಿದೆ.


75 ದಿನಗಳನ್ನು ಪೂರೈಸಿದ 'ರಾಜಕುಮಾರ' ಕನ್ನಡದಲ್ಲಿ ಹಿಸ್ಟರಿ ಸೃಷ್ಟಿಸಿದ!


'ರಾಜಕುಮಾರ' ಸಿನಿಮಾದ ನೂರನೇ ದಿನದ ಕಾರ್ಯಕ್ರಮ ಹೇಗಿರಲಿದೆ ಎಂಬ ವಿವರಗಳು ಮುಂದಿದೆ ಓದಿ...


ಖುಷಿ ಹಂಚಿಕೊಂಡ ನಿರ್ದೇಶಕರು

'ರಾಜಕುಮಾರ' ಚಿತ್ರ ಇದೇ ತಿಂಗಳ ಅಂತ್ಯಕ್ಕೆ 100 ದಿನಗಳನ್ನು ಪೂರೈಸಲಿದೆ. ಈ ಸಂತಸವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.


ನೂರರ ಸಂಭ್ರಮ

'ರಾಜಕುಮಾರ' ಚಿತ್ರದ 100 ಡೇಸ್ ಕಾರ್ಯಕ್ರಮದ ತಯಾರಿಗಳು ಈಗಾಗಲೇ ಶುರುವಾಗಿದ್ದು. ಕಾರ್ಯಕ್ರಮದ ಪ್ಲಾನಿಂಗ್ ನಲ್ಲಿ ಚಿತ್ರದ ನಿರ್ದೇಶಕ, ನಿರ್ಮಾಪಕರು ತೊಡಗಿಕೊಂಡಿದ್ದಾರೆ.


'ಅಪ್ಪು' ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಡ್ತು!


ಕಾರ್ಯಕ್ರಮ ಬಗ್ಗೆ

'ರಾಜಕುಮಾರ' ಸಿನಿಮಾ ಇದೇ ಜೂನ್ 30 ಕ್ಕೆ ನೂರು ದಿನ ಕಂಪ್ಲೀಟ್ ಮಾಡಲಿದೆ. ಈ ಹಿನ್ನಲೆ ಜುಲೈ ಮೊದಲ ವಾರದಲ್ಲಿ ಬೆಂಗಳೂರಿನಲ್ಲೇ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲು ಮುಂದಾಗಿದೆ.


'ರಾಜಕುಮಾರ'ನ ದಾಖಲೆ

'ರಾಜಕುಮಾರ' ಸಿನಿಮಾ ಬರಿ ಮಲ್ಟಿಪ್ಲೆಕ್ಸ್ ಗಳಲ್ಲಿಯೇ 7700ಕ್ಕೂ ಹೆಚ್ಚು ಪ್ರದರ್ಶನವನ್ನು ಕಂಡಿದೆ. ಈ ಮೂಲಕ 'ರಾಜಕುಮಾರ' ಆಲ್ ಟೈಂ ರೆಕಾರ್ಡ್ ಮಾಡಿದೆ.


ಅಪ್ಪು ಅಭಿಮಾನಿಗಳ ಸಂಭ್ರಮ

ಪುನೀತ್ ಅಭಿಮಾನಿಗಳು ವಿಶೇಷವಾದ ಪೋಸ್ಟರ್ ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ 'ರಾಜಕುಮಾರ' ಸಿನಿಮಾದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.


ಎರಡನೇ ಚಿತ್ರ

ಈ ವರ್ಷ ರಿಲೀಸ್ ಆದ ಚಿತ್ರಗಳಲ್ಲಿ 'ಚೌಕ' ಚಿತ್ರದ ನಂತರ ಶತಕ ಬಾರಿಸುತ್ತಿರುವ ಎರಡನೇ ಚಿತ್ರ 'ರಾಜಕುಮಾರ' ಆಗಿದೆ.


English summary
Puneeth Rajkumar Starrer 'Raajakumara' Movie 100 days Celebration. The Movie Directed By santhosh ananddram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada