»   » 2017ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳು

2017ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳು

Posted By:
Subscribe to Filmibeat Kannada

ಈ ವರ್ಷ ಚಿತ್ರಜಗತ್ತಿನಲ್ಲಿ ಅನೇಕ ಸಿನಿಮಾಗಳು ಸುದ್ದಿ ಮಾಡಿದ್ವು. ಸಿನಿಮಾ ಚೆನ್ನಾಗಿದೆ ಎಂಬ ವಿಚಾರಕ್ಕೆ ಕೆಲವು ಚಿತ್ರಗಳು ಹೆಡ್ ಲೈನ್ ಆದ್ರೆ, ಮತ್ತೆ ಕೆಲವು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ಟಾಕ್ ಆಫ್ ದಿ ನೇಷನ್ ಆಗಿತ್ತು.

ಹಾಗಿದ್ರೆ, ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಬಹುತೇಕ ಉತ್ತರ ಗೊತ್ತಿರಬಹುದು. ಅದೇ ರೀತಿ ಕನ್ನಡದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಯಾವುದು ಎಂಬ ಕುತೂಹಲಕ್ಕೆ ಉತ್ತರ ಸ್ವಲ್ಪ ಕನ್ ಫ್ಯೂಷನ್ ಇರಬಹುದು.

ಈ ವರ್ಷ ಮುಗಿಯಿತು, ಮುಂದಿನ ವರ್ಷ ಅಬ್ಬರಿಸಲಿರುವ ಅದ್ಧೂರಿ ಚಿತ್ರಗಳು

ಈ ಕುತೂಹಲ, ಗೊಂದಲಗಳಿಗೆ ಉತ್ತರ ಇಲ್ಲಿದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಚಿತ್ರ ಯಾವುದು ಮತ್ತು ಭಾಷೆಯ ಆಧಾರದಲ್ಲಿ ಯಾವ ಚಿತ್ರಗಳು ಅತಿ ಹೆಚ್ಚು ಗಳಿಕೆ ಕಂಡಿದೆ ಎಂದು ತಿಳಿಯಲು ಮುಂದೆ ಓದಿ....

'ಬಾಹುಬಲಿ' ದಾಖಲೆ

ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ 'ಬಾಹುಬಲಿ ದಿ ಕನ್ ಕ್ಲೂಷನ್' ಸಿನಿಮಾ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ದಾಖಲೆಗಳ ಪ್ರಕಾರ ಸುಮಾರು 1700 ಕೋಟಿ ಗಳಿಕೆ ಕಂಡಿದೆ. ಇದು ಆಲ್ ಟೈಮ್ ರೆಕಾರ್ಡ್ ಕೂಡ ಆಗಿದೆ.

ಈ ವರ್ಷ ಅತಿ ಹೆಚ್ಚು ಸೌಂಡ್ ಮಾಡಿದ ಡೈಲಾಗ್ ಯಾವುದು?

ಗೋಲ್ ಮಾಲ್ ಅಗೈನ್

ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ 'ಗೋಲ್ ಮಾಲ್ ಅಗೈನ್' ಸಿನಿಮಾ ಈ ವರ್ಷ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ. ದಾಖಲೆಗಳ ಪ್ರಕಾರ 307 ಕೋಟಿ ಗಳಿಕೆ ಕಂಡಿದೆ.

'ಟೈಗರ್ ಜಿಂದಾ ಹೈ' ಅಬ್ಬರ

ಕ್ರಿಸ್ ಹಬ್ಬದ ಪ್ರಯುಕ್ತ ರಿಲೀಸ್ ಆದ 'ಟೈಗರ್ ಜಿಂದಾ ಹೈ' ಸಿನಿಮಾ ಒಂದು ವಾರದ ಅಂತ್ಯಕ್ಕೆ 200 ಕೋಟಿ ದಾಟಿದೆ ಎನ್ನಲಾಗಿದೆ. ಈ ಮೂಲಕ ಈ ವರ್ಷ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ.

ಈ ವರ್ಷದಲ್ಲಿ ನಡೆದ 23 ವಿವಾದಗಳನ್ನ ಯಾರೂ ಮರೆಯಲ್ಲ

ಕನ್ನಡದಲ್ಲಿ 'ರಾಜಕುಮಾರ' ರೆಕಾರ್ಡ್

ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ. ಆದ್ರೆ, ಅಧಿಕೃತವಾಗಿ ನಿಗದಿತ ಮೊತ್ತವನ್ನ ಚಿತ್ರತಂಡ ಪ್ರಕಟ ಮಾಡಿಲ್ಲ. ಮೂಲಗಳ ಪ್ರಕಾರ ಸುಮಾರು 70 ಕೋಟಿ ದಾಟಿದೆ ಎನ್ನಲಾಗಿದೆ. ಇದು ಕನ್ನಡ ಚಿತ್ರರಂಗದ ಆಲ್ ಟೈಮ್ ರೆಕಾರ್ಡ್ ಕೂಡ ಆಗಿದೆಯಂತೆ.

ಹೆಬ್ಬುಲಿ, ಭರ್ಜರಿ, ತಾರಕ್

ಇನ್ನು ರಾಜಕುಮಾರ ಸಿನಿಮಾ ಹೊರತು ಪಡಿಸಿದ್ರೆ ಸುದೀಪ್ ಅಭಿನಯದ 'ಹೆಬ್ಬುಲಿ', ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಹಾಗೂ ದರ್ಶನ್ ಅಭಿನಯದ 'ತಾರಕ್' ಸಿನಿಮಾಗಳು ಅತ್ಯುತ್ತಮ ಕಲೆಕ್ಷನ್ ಮಾಡಿದೆ.

ಈ ವರ್ಷ ಕನ್ನಡದ 'ಸ್ಟಾರ್' ನಟಿಯ ಪಟ್ಟ ಯಾರಿಗೆ?

ಬಹುಭಾಷೆಗಳಲ್ಲೂ 'ಬಾಹುಬಲಿ' ಪರಾಕ್ರಮ

ಇನ್ನು ಪ್ರಾಂತ್ಯವಾರು ಲೆಕ್ಕಾಚಾರವನ್ನ ಗಮಿಸಿದ್ರೆ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಪ್ರತ್ಯೇಕವಾಗಿ 'ಬಾಹುಬಲಿ-2' ಸಿನಿಮಾ ಕಲೆಕ್ಷನ್ ಹೆಚ್ಚಿದೆ.

English summary
Telugu Actor prabhas starrer and SS Rajamouli Directional 'Baahubali the conclusion' movie is the biggest film of 2017. Puneeth rajkumar starrer Raajakumara movie is top grossing movie in kannada 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X