For Quick Alerts
  ALLOW NOTIFICATIONS  
  For Daily Alerts

  ಡ್ರಗ್ ಪೆಡ್ಲರ್ ಆಗಲಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್

  |

  ಡಿಂಪಲ್ ಕ್ವೀನ್ ಖ್ಯಾತಿಯ ರಚಿತಾ ರಾಮ್, ಬಬ್ಲಿ ಹುಡುಗಿ ಪಾತ್ರದಿಂದ ಹೊರಗೆ ಬಂದು ಭಿನ್ನ ಪಾತ್ರಗಳತ್ತ ಗಮನವಹಿಸುತ್ತಿದ್ದಾರೆ.

  ಶಿವಣ್ಣನ ಜೊತೆಗಿನ ಸಿನಿಮಾದಲ್ಲಿ ಬುದ್ಧಿಮಾಂದ್ಯ ಯುವತಿಯ ಪಾತ್ರ ಮಾಡಿದ್ದ ರಚಿತಾ ರಾಮ್ ಇದೀಗ ಡ್ರಗ್ ಡೀಲರ್ ಪಾತ್ರ ಮಾಡಲು ನಿಶ್ಚಯಿಸಿದ್ದಾರೆ.

  ದರ್ಶನ್ ಋಣ ತೀರಿಸುವ ಆಸೆ ವ್ಯಕ್ತಪಡಿಸಿದ ರಚಿತಾ ರಾಮ್‌ದರ್ಶನ್ ಋಣ ತೀರಿಸುವ ಆಸೆ ವ್ಯಕ್ತಪಡಿಸಿದ ರಚಿತಾ ರಾಮ್‌

  ತಮಿಳಿನ ಸೂಪರ್ ಹಿಟ್ ಸಿನಿಮಾದ ಕನ್ನಡ ರೀಮೇಕ್‌ನಲ್ಲಿ ಡಿಂಪಲ್ ಕ್ವೀನ್ ನಟಿಸುತ್ತಿದ್ದು. ಇದೊಂದು ಮಾದಕ ದ್ರವ್ಯ ಸಾಗಣೆದಾರಳ ಪಾತ್ರವಾಗಿದೆ. ತಮಿಳಿನಲ್ಲಿ ನಯನತಾರಾ ಮಾಡಿದ್ದ ಈ ಪಾತ್ರ ಸಾಕಷ್ಟು ಅಭಿನಯ ಬೇಡುವ ಪಾತ್ರವಾಗಿದೆ. ಈ ಪಾತ್ರವನ್ನು ಡಿಂಪಲ್ ಕ್ವೀನ್ ಹೇಗೆ ನಿಭಾಯಿಸುತ್ತಾರೆ ನೋಡಬೇಕಿದೆ. ಅಂದಹಾಗೆ ಯಾವುದು ಆ ತಮಿಳು ಸಿನಿಮಾ...?

  ಕೊಲಮಾವು ಕೋಕಿಲ ಸಿನಿಮಾ ರೀಮೇಕ್

  ಕೊಲಮಾವು ಕೋಕಿಲ ಸಿನಿಮಾ ರೀಮೇಕ್

  ತಮಿಳಿನ ಸೂಪರ್ ಹಿಟ್ ಸಿನಿಮಾ 'ಕೊಲಮಾವು ಕೋಕಿಲ' ಸಿನಿಮಾವನ್ನು ಕನ್ನಡಕ್ಕೆ ರೀಮೇಕ್ ಮಾಡಲಾಗುತ್ತಿದೆ. ನಯನತಾರಾ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾದಲ್ಲಿ ಯೋಗಿ ಬಾಬು ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತಲ್ಲದೆ, ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು.

  ರಚಿತಾ ರಾಮ್ ನಾಯಕಿಯಾಗಿ ಆಯ್ಕೆ

  ರಚಿತಾ ರಾಮ್ ನಾಯಕಿಯಾಗಿ ಆಯ್ಕೆ

  'ಕನ್ನಡ್ ಗೊತ್ತಿಲ್ಲ' ಸಿನಿಮಾ ನಿರ್ದೇಶಿಸಿದ್ದ ಮಯೂರ್ ರಾಘವೇಂದ್ರ 'ಕೊಲಮಾವು ಕೋಕಿಲ' ಸಿನಿಮಾದ ಕನ್ನಡ ರೀಮೇಕ್ ಅನ್ನು ನಿರ್ದೇಶಿಸುತ್ತಿದ್ದು, ಪ್ರಸ್ತುತ ನಾಯಕಿ ಪಾತ್ರಕ್ಕೆ ರಚಿತಾ ರಾಮ್ ಅವರನ್ನು ಒಪ್ಪಿಸಿದ್ದಾರೆ. ಇನ್ನುಳಿದ ಪಾತ್ರಗಳಿಗೆ ಆಯ್ಕೆ ನಡಯುತ್ತಿದೆ.

  'ಕೆಲವು ಪಾತ್ರಗಳನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಚಿತಾ'ಕೆಲವು ಪಾತ್ರಗಳನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಚಿತಾ

  ಯೋಗಿ ಬಾಬು ಪಾತ್ರಕ್ಕೆ ಯಾರು?

  ಯೋಗಿ ಬಾಬು ಪಾತ್ರಕ್ಕೆ ಯಾರು?

  ತಮಿಳಿನ ಮೂಲ ಸಿನಿಮಾದಲ್ಲಿ ಯೋಗಿ ಬಾಬು ನಟಿಸಿದ್ದ ಅತ್ಯಂತ ಪ್ರಮುಖ ಪಾತ್ರವನ್ನು ಕನ್ನಡದಲ್ಲಿ ಯಾರ ಕೈಲಿ ಮಾಡಿಸಬೇಕು ಎಂಬ ಅನುಮಾನ ನಿರ್ದೇಶಕರನ್ನು ಕಾಡುತ್ತಿದೆಯಂತೆ. ಆ ಪಾತ್ರಕ್ಕೆ ನಟರ ಹುಡುಕಾಟ ನಡೆಯುತ್ತಿದೆ, ಯಾರೂ ಸಿಗದಿದ್ದಲ್ಲಿ ತಮಿಳಿನ ಯೋಗಿ ಬಾಬು ಅವರನ್ನೇ ಕರೆತರಲಾಗುವುದು ಎಂದಿದ್ದಾರೆ ಮಯೂರ್ ರಾಘವೇಂದ್ರ.

  ಆಟೋ ಡ್ರೈವರ್ ಅಭಿಮಾನಕ್ಕೆ ರಚಿತಾ ಭಾವುಕ: ಹೆಸರನ್ನು ಇನ್ಸ್ಟಾಗ್ರಾಮ್ ನಲ್ಲಿ ಟ್ಯಾಗ್ ಮಾಡಿ ಎಂದ ಡಿಂಪಲ್ ಕ್ವೀನ್ಆಟೋ ಡ್ರೈವರ್ ಅಭಿಮಾನಕ್ಕೆ ರಚಿತಾ ಭಾವುಕ: ಹೆಸರನ್ನು ಇನ್ಸ್ಟಾಗ್ರಾಮ್ ನಲ್ಲಿ ಟ್ಯಾಗ್ ಮಾಡಿ ಎಂದ ಡಿಂಪಲ್ ಕ್ವೀನ್

  ಪಂಕಜ ಕಸ್ತೂರಿ ಹೆಸರಿಡುವ ಯೋಚನೆ

  ಪಂಕಜ ಕಸ್ತೂರಿ ಹೆಸರಿಡುವ ಯೋಚನೆ

  ಸಿನಿಮಾಕ್ಕೆ 'ಪಂಕಜ ಕಸ್ತೂರಿ' ಎಂಬ ಹೆಸರಿಡುವ ಆಲೋಚನೆ ನಿರ್ದೇಶಕರಿಗೆ ಇದೆ. ಆದರೆ ಅಧಿಕೃತವಾಗಿ ಹೆಸರು ಅಂತಿಮಗೊಳಿಸಿಲ್ಲ. ಸಿನಿಮಾದ ಚಿತ್ರೀಕರಣ ಇನ್ನೆರಡು ತಿಂಗಳಲ್ಲಿ ಪ್ರಾರಂಭವಾಗಲಿದೆಯಂತೆ.

  ಗುಳಿಕೆನ್ನೆ ಸುಂದರಿ ರಚಿತಾ ರಾಮ್ ಮದುವೆ ಫಿಕ್ಸ್? ಸಂಚಲನ ಮೂಡಿಸಿದ ಫೋಟೊಗುಳಿಕೆನ್ನೆ ಸುಂದರಿ ರಚಿತಾ ರಾಮ್ ಮದುವೆ ಫಿಕ್ಸ್? ಸಂಚಲನ ಮೂಡಿಸಿದ ಫೋಟೊ

  English summary
  Actress Rachita Ram acting in Tamil movie 'kolamavu kokila'. She portraying drug dealer character.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X