For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕ್ರೇಜಿ ಕ್ವೀನ್ ಗೆ ಡಿಂಪಲ್ ಕ್ವೀನ್ ವಿಶ್ ಮಾಡಿದ್ದು ಹೀಗೆ

  |

  ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. 36ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಕ್ಷಿತಾ ಮನೆಯಲ್ಲಿಯೆ ಜನ್ಮ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ. ಈ ಕಳೆದ ವರ್ಷದಂತೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸದಿದ್ದರು, ಪತಿ ಪ್ರೇಮ್ ಮತ್ತು ಅವರ ತಂಡ ಮನೆಯಲ್ಲಿಯೆ ಕೇಕ್ ತಯಾರಿಸಿ ವಿಶೇಷವಾಗಿ ಆಚರಣೆ ಮಾಡಿ ಸಂತಸಪಡಿಸಿದ್ದಾರೆ.

  ರಕ್ಷಿತಾ ಹುಟ್ಟುಹಬ್ಬಕ್ಕೆ ಪತಿ ಪ್ರೇಮ್ ಮಾಡಿದ್ದೇನು ನೋಡಿ | Rakshitha Birthday | Prem Baked cake For Wife

  ಲಾಕ್ ಡೌನ್ ನಡುವೆಯು ಹುಟ್ಟುಹಬ್ಬ ಆಚರಿಸಿರುವ ರಕ್ಷಿತಾಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಕ್ರೇಜಿ ಕ್ವೀನ್ ಗೆ ಗೆಳತಿ ಡಿಂಪಲ್ ಕ್ವೀನ್ ರಚಿತಾ ರಾಮ್ ವಿಶೇಷವಾಗಿ ವಿಶ್ ಮಾಡಿದ್ದಾರೆ. ಮುಂದೆ ಓದಿ..

  ಮನೆಯಲ್ಲಿಯೇ ಕೇಕ್ ತಯಾರಿಸಿ ಸಂಭ್ರಮಿಸಿದ ಪ್ರೇಮ್ & ಟೀಂ: ಹ್ಯಾಪಿ ಬರ್ಥಡೇ ಕ್ರೇಜಿ ಕ್ವೀನ್ಮನೆಯಲ್ಲಿಯೇ ಕೇಕ್ ತಯಾರಿಸಿ ಸಂಭ್ರಮಿಸಿದ ಪ್ರೇಮ್ & ಟೀಂ: ಹ್ಯಾಪಿ ಬರ್ಥಡೇ ಕ್ರೇಜಿ ಕ್ವೀನ್

  ರಕ್ಷಿತಾಗೆ ರಚಿತಾ ವಿಶ್ ಹೀಗೆ

  ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿರುವ ರಚಿತಾ "ನಿಮ್ಮ ಎಲ್ಲಾ ಆಸೆಗಳು ಈಡೇರಲಿ ಎಂದು ಶುಭ ಕೋರುತ್ತೇನೆ. ಹುಟ್ಟುಹಬ್ಬ ಶುಭಾಶಯಗಳು ನನ್ನ ಪ್ರೀತಿಯ ರಾಕ್ಸ್. ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದು ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಇಬ್ಬರು ಫೋಟೋವನ್ನು ಶೇರ್ ಮಾಡಿದ್ದಾರೆ.

  ಇಬ್ಬರು ಉತ್ತಮ ಸ್ನೇಹಿತರು

  ಇಬ್ಬರು ಉತ್ತಮ ಸ್ನೇಹಿತರು

  ರಕ್ಷಿತಾ ಮತ್ತು ರಚಿತಾ ರಾಮ್ ಇಬ್ಬರು ಉತ್ತಮ ಸ್ನೇಹಿತರು. ರಕ್ಷಿತಾ ನಿರ್ಮಾಸಿರುವ ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಅಂದರೆ ಈ ಚಿತ್ರದಲ್ಲಿ ರಕ್ಷಿತಾ ಕೂಡ ಅಭಿನಯಿಸಿದ್ದಾರೆ. ಚಿತ್ರದ ಹಾಡೊಂದಕ್ಕೆ ರಕ್ಷಿತಾ ಹೆಜ್ಜೆ ಹಾಕಿದ್ದಾರೆ.

  ಮದುವೆ ನಂತರ ರಕ್ಷಿತಾ ಅಭಿನಯ

  ಮದುವೆ ನಂತರ ರಕ್ಷಿತಾ ಅಭಿನಯ

  ಮದುವೆ ನಂತರ ರಕ್ಷಿತಾ ಏಕ್ ಲವ್ ಯಾ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಬರೋಬ್ಬರಿ 13 ವರ್ಷದ ಬಳಿಕ ರಕ್ಷಿತಾ ಮತ್ತೆ ತೆರೆಮೇಲೆ ಬರ್ತಿದ್ದಾರೆ. ಏಕ್ ಲವ್ ಯಾ ಚಿತ್ರದಲ್ಲಿ ರಕ್ಷಿತಾ ಮತ್ತು ರಚಿತಾ ಇಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಡಾನ್ಸ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ರಕ್ಷಿತಾ ಸಹೋದರ ರಾಣಾ ಕಾಣಿಸಿಕೊಂಡಿದ್ದಾರೆ.

  ಕೇಕ್ ತಯಾರಿಸಿ ಪ್ರೇಮ್ ಹೇಳಿದ್ದೇನು?

  "ಪ್ರತೀ ವರ್ಷ ಅವರ ಬರ್ತ್ಡೇನಾ ಹೊರಗಡೆ celebrate ಮಾಡ್ತಿದ್ವಿ. ಆದರೆ ಈ ವರ್ಷ #Stayhome #Staysafe ಅನ್ನಕಾರಣಕ್ಕೇ ಎಲ್ರೂ ಮನೆ ಒಳಗಿದ್ದೇ ಸೆಲೆಬ್ರೇಟ್ ಮಾಡ್ತಿದೀವಿ. ಮತ್ತು 1st ಟೈಂ ಅವರ ಬರ್ತ್ಡೇಗೋಸ್ಕರ ನಾವ್ ಕೇಕ್ ಮಾಡೋದನ್ನ ಕಲ್ತಿದಿನಿ. So this will be very special" ಎಂದು ಪ್ರೇಮ್ ಟ್ವೀಟ್ ಮಾಡಿದ್ದಾರೆ. ಪ್ರೇಮ್ ಮತ್ತು ಅವರ ತಂಡ ತಯಾರಿಸಿದ ಕೇಕ್ ಅನ್ನು ಮಧ್ಯರಾತ್ರಿ ರಕ್ಷಿತಾ ಅವರಿಂದ ಕಟ್ ಮಾಡಿಸಿದರು. ಅದ್ಭುತವಾಗಿ ತಯಾರಿಸಿದ್ದ ಕೇಕ್ ಕಂಡು ರಕ್ಷಿತಾ ಬೆರಗಾಗಿ 'ಸೋ ಕ್ಯೂಟ್' ಎಂದು ಹೇಳಿದ್ದಾರೆ.

  English summary
  Kannada Actress Rachita Ram birthday wishes to Actress Rakshitha. Rakshitha celebrating her 36th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X