Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಾನು ಬೇರೆ ದೇಶಕ್ಕೆ ಜೈಕಾರ ಹಾಕಿದ್ನಾ? ಟಾರ್ಗೆಟ್ ಯಾಕೆ?" ರಿಪಬ್ಲಿಕ್ ಡೇ ಹೇಳಿಕೆ ಬಗ್ಗೆ ರಚಿತಾ ಹೇಳಿದ್ದಿಷ್ಟು
'ಕ್ರಾಂತಿ' ಸಿನಿಮಾ ಟ್ರೈಲರ್ ಲಾಂಚ್ ವೇಳೆ ನಟಿ ರಚಿತಾ ರಾಮ್ ನೀಡಿದ್ದ ಅದೊಂದು ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. "ದೇಶಕ್ಕಿಂತ ನಿನಗೆ ನಿನ್ನ ಸಿನಿಮಾ ಹೆಚ್ಚಾಯ್ತಾ?" ಎಂದು ಕೆಲವರು ಕೇಳಿದ್ದರು. ಇದೇ ವಿಚಾರಕ್ಕೆ ರಚಿತಾ ರಾಮ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು.
ಕೊನೆಗೂ ನಟಿ ರಚಿತಾ ರಾಮ್ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ಈ ವರ್ಷ ಜನವರಿ 26ಕ್ಕೆ ಗಣರಾಜ್ಯೋತ್ಸವ ಅನ್ನುವುದನ್ನು ಮರೆತು ಕ್ರಾಂತಿ ಉತ್ಸವ ಮಾಡೋಣ" ಎಂದು ಹೇಳಿದ್ದರು. ಸದ್ಯ ತಮ್ಮ ಹೇಳಿಕೆ ಬಗ್ಗೆ ನಟಿ ರಚಿತಾ ರಾಮ್ ಮಾತನಾಡಿದ್ದಾರೆ. ಕನ್ನಡ ಪಿಕ್ಚರ್ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ರಚಿತಾ ರಾಮ್ ಮಾತನಾಡಿದ್ದಾರೆ. ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ, ಮೈಸೂರಿನ ಪಬ್‌ನಲ್ಲಿ ನಡೆದ ಮಾತಿ ಚಕಮಕಿ ಆಡಿಯೋ ಬಗ್ಗೆಯೂ ಮಾತನಾಡಿದ್ದಾರೆ.
ಸಂಕ್ರಾಂತಿ
ಸಂಭ್ರಮದಲ್ಲಿ
ಮುಳುಗೆದ್ದ
ಯಶ್,
ದರ್ಶನ್,
ರಕ್ಷಿತಾ
ಪ್ರೇಮ್!
ನಟ ದರ್ಶನ್ ಜೊತೆ ರಚಿತಾ ರಾಮ್ 3ನೇ ಬಾರಿಗೆ 'ಕ್ರಾಂತಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾ ಪ್ರಮೋಷನ್ ಭಾಗವಾಗಿ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಜನವರಿ 26ಕ್ಕೆ 'ಕ್ರಾಂತಿ' ಸಿನಿಮಾ ಬಿಡುಗಡೆ ಆಗಲಿದೆ.

ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ
"ಎಕ್ಸೈಟ್‌ಮೆಂಟ್‌ನಲ್ಲಿ ಮಾತನಾಡುವಾಗ ವಾಕ್ಯ ಮಾಡಿ ಮಾತನಾಡುವಾಗ ಕೆಲವೊಮ್ಮೆ ಗೊತ್ತಿಲ್ಲದೇ ಮರೀತಿವಿ. ಇಲ್ಲ ತಪ್ಪಾಗುತ್ತದೆ. ಮೊದಲ ದಿನಗಳಿಂದಲೂ ಸಾಕಷ್ಟು ಪೆಟ್ಟು ಬಿದ್ದಿತ್ತು. ಇಡೀ ತಂಡ ಒಟ್ಟಿಗೆ ಸೇರಿದ್ದೆವು. ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ಸಾಂಗ್ಸ್, ಟ್ರೈಲರ್ ಎಲ್ಲಾ ನೋಡಿದ್ವಿ. ಸುಮ್ನೆ ಕೆಲಸ ಮಾಡ್ಕೊಂಡು, ಎರಡ್ಮೂರು ಸಂದರ್ಶನ ಕೊಟ್ಟು ನಾನು ಸುಮ್ಮನಾಗ್ತಿಲ್ಲ. ನಾನು ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಇದು ನನಗೆ ಬಹಳ ದೊಡ್ಡ ಸಿನಿಮಾ. ಕ್ಯಾಮರಾ ಮುಂದೆ ಹಿಂದೆ ಏನೆಲ್ಲಾ ಆಗಿದೆ ಎನ್ನುವುದನ್ನು ನೋಡಿದ್ದೇನೆ. ಯಾರಿಗೆಲ್ಲಾ ನೋವಾಯ್ತು, ಟಾರ್ಗೆಟ್ ಆಗ್ತಿದ್ದಾರೆ? ಎಲ್ಲಾ ನೋಡಿದ್ದೀನಿ, ಕೇಳಿದ್ದೀನಿ. ಎನ್ನುವುದು ಗೊತ್ತು."

ಅಲ್ಲಿ ಒಬ್ರು ನನ್ನನ್ನು ಕೇಳಲಿಲ್ಲ
"ಹೌದು ನಾನು ಇದೇ ಪದಗಳನ್ನು ಬಳಸಿದ್ದೆ. "26ನೇ ತಾರೀಖು ಜನವರಿ ಗಣರಾಜ್ಯೋತ್ಸವನ ಮರೆತು ಕ್ರಾಂತಿ ಉತ್ಸವ ಮಾಡೋಣ ಎಂದಿದ್ದೆ ಅಲ್ವಾ?" ನಾನು ಆ ರೀತಿ ಮಾತನಾಡಿದ ಮೇಲೆ ಬಹಳ ಹೊತ್ತು ಅಲ್ಲೆ ಇದ್ದೆ. ಮಾಧ್ಯಮದವರ ಪ್ರಶ್ನೆಗಳಿಗೂ ಉತ್ತರ ಕೊಟ್ಟೆ. ನಾನು ತಪ್ಪು ಮಾತನಾಡಿದ್ದರೆ, ಅಥವಾ ತಪ್ಪು ಅನ್ನಿಸಿದ್ದರೆ ಯಾರಾದರೂ ಒಬ್ಬರು ಆ ಕ್ಷಣದಲ್ಲಿ ಪ್ರಶ್ನೆ ಮಾಡಬಹುದಿತ್ತು. ಮಾಧ್ಯಮದವರಿಗೆ ಖಂಡಿತ ರೈಟ್ಸ್ ಇದೆ. ಅಲ್ಲಿ ಸುಮ್ಮನೆ ಇದ್ದರು. ಅಲ್ಲಿ ಒಬ್ಬರೂ ಕೂಡ ಕೇಳಿಲ್ಲ ನನ್ನನ್ನು."

ಬೇರೆ ದೇಶಕ್ಕೆ ಜೈಕಾರ ಹಾಕಿದ್ನಾ?
"ನಾನು ಬಹಳ ಎಕ್ಸೈಟ್ ಆಗಿದ್ದೆ. ಆ ಸಮಯದಲ್ಲಿ ಕೆಲವೊಂದು ವಿಚಾರಗಳನ್ನು ಮರೆತ್ತಿದ್ದು ಇದೆ. ಆ ಸಂತೋ, ಎಕ್ಸೈಟ್‌ಮೆಂಟ್‌ನಲ್ಲಿ ನಾನು ಈ ರೀತಿ ಹೇಳಿದ್ದು ನಿಜ. ಆದರೆ ಒಬ್ಬ ಜವಾಬ್ದಾರಿಯುವ ನಾಗರಿಕನಾಗಿ ಹೆಮ್ಮೆಯ ಭಾರತೀಯಳಾಗಿ ಹೆಮ್ಮೆಯ ಕನ್ನಡತಿಯಾಗಿ ನನ್ನ ಸಿನಿಮಾ ದೊಡ್ಡದು ಎಂದು ಹೇಳಿಲ್ಲ. ಈ 10 ವರ್ಷದಲ್ಲಿ ನನ್ನ ದೇಶ, ಭಾಷೆ, ಸಂಸ್ಕೃತಿ, ಸಂಪ್ರದಾಯ, ರಾಜ್ಯದ ವಿರುದ್ಧ ಹೋದವಳು ಅಲ್ಲ. ಕೆಟ್ಟದಾಗಿ ಮಾತನಾಡಿದ್ದು ಇಲ್ಲ. ಅಷ್ಟೆಲ್ಲಾ ಇದ್ದರೂ ಟಾರ್ಗೆಟ್ ಮಾಡಿದ್ದು ಯಾಕೋ ಗೊತ್ತಿಲ್ಲ. ನಾನೇನು ಬೇರೆ ದೇಶಕ್ಕೆ ಜೈಕಾರ ಹಾಕಿದ್ನಾ? ಇಷ್ಟೆಲ್ಲಾ ಟಾರ್ಗೆಟ್ ಮಾಡುವುದಕ್ಕೆ? ಪಂಬಲ್ ಆಗಿ ತಪ್ಪಾಯಿತು. ಎಷ್ಟು ಜನ ಈ ರೀತಿ ಮಾತನಾಡುವಾಗ ತಪ್ಪಾಗಿಲ್ವಾ? ನನ್ನ ಉದ್ದೇಶ ಗಣರಾಜ್ಯೋತ್ಸವವನ್ನು ಅವಮಾನ ಮಾಡುವುದಲ್ಲ. ಉಸಿರಿರುವವರೆಗೂ ಭೂಮಿ ಇರುವವರೆಗೂ ನಮ್ಮ ಭಾಷೆ, ರಾಜ್ಯ, ದೇಶ, ನನ್ನನ್ನು ಇಷ್ಟಪಡುವ ಜನರನ್ನು ಬಿಟ್ಟುಕೊಡಲ್ಲ. ತಪ್ಪಾಗಿ ಮಾತನಾಡುವುದಿಲ್ಲ" ಎಂದು ರಚಿತಾ ರಾಮ್ ಕೇಳಿದ್ದಾರೆ.

ಹೊಸಪೇಟೆ ಘಟನೆ ಬಗ್ಗೆ ಹೇಳಿದ್ದೇನು?
"ಘಟನೆ ನಡೆದು ಮೂರ್ನಾಲ್ಕು ವಾರ ಆಯಿತು. ಅಂದಿನಿಂದ ಇಂದಿನವರೆಗೆ ದರ್ಶನ್ ಸರ್ ಇರಬಹುದು. ಇಡೀ ಚಿತ್ರತಂಡ ಇರಬಹುದು. ಅಂದು ಸ್ಥಳದಲ್ಲಿ ಇದ್ದವರು ಯಾರು ಕೂಡ ಮಾತನಾಡಲಿಲ್ಲ. ಅದರ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುವುದನ್ನು ಮಾಡಲಿಲ್ಲ. ದರ್ಶನ್ ಸರ್ ಅವರಾಗಿಯೇ ಮಾತನಾಡುವರೆಗೂ ನಾವೆಲ್ಲಾ ಸೈಲೆಂಟ್ ಆಗಿ ಇರ್ತೀವಿ. ಅವರು ಕೂಡ ಹೇಳಿದ್ದಾರೆ. ನಾನಾಗಿಯೇ ಮಾತನಾಡುವವರೆಗೂ ಈ ವಿಷಯದ ಬಗ್ಗೆ ನೀವ್ಯಾರು ಮಾತನಾಡಬೇಡಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಮಾತನಾಡಲ್ಲ" ಎಂದು ರಚಿತಾ ರಾಮ್ ವಿವರಿಸಿದ್ದಾರೆ.