For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಫೈವ್ ಸ್ಟಾರ್ ಚೆಲುವೆ ಇವಳು.. ರಚಿತಾ ರಾಮ್

  By ಜೀವನರಸಿಕ
  |

  ಸ್ಟಾರ್ ನಟರು ಅಂದಾಗ ಅವ್ರ ಸಂಭಾವನೆಯ ವಿಚಾರ ಸದಾ ಚರ್ಚೆಯಲ್ಲಿರುತ್ತೆ. ಯಾರು ನಂಬರ್ ಒನ್ ಯಾರು ಟಾಪ್ ಟೆನ್ ಅಂತಾನೂ ಸದಾ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗ್ತಾನೇ ಇರುತ್ತೆ. ಆದ್ರೆ ಸ್ಯಾಂಡಲ್ವುಡ್ ನಟಿಯರಲ್ಲಿ ಸ್ಟಾರ್ ಯಾರು ಅನ್ನೋ ಚರ್ಚೆಗಳಾಗೋದು ಕಡಿಮೆ.

  ನಟಿಯರನ್ನ ಸ್ಟಾರ್ ನಟಿಯರು ಅಂತ ಗುರುತಿಸೋದು ಕೂಡ ತೀರಾ ಕಡಿಮೆ. ಆದ್ರೆ ಈಗೊಂದು ವಿಶೇಷ ಅಂದ್ರೆ ಸ್ಟಾರ್ ನಟರಿಗೇ ಅಂತಾನೇ ಕನ್ನಡದ ನಟಿಯೊಬ್ಬರು ಫಿಕ್ಸ್ ಆದ ಹಾಗಿದ್ದಾರೆ. ಅವ್ರಿಗೆ ಸಿಕ್ಕಿರೋ ಅಷ್ಟೂ ಸಿನಿಮಾಗಳು ಸ್ಟಾರ್ ನಟರ ಸಿನಿಮಾಗಳು. ಇದನ್ನೇ ಅನ್ನೋದಲ್ವಾ ಲಕ್ಕು?[ಬೆಣ್ಣೆ ದೋಸೆ ತಿಂದು ಗಳಗಳನೆ ಅತ್ತ 'ಬುಲ್ ಬುಲ್' ರಚಿತಾ]

  ನಾವು ಹೇಳ್ತಿರೋದು ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ ಬಗ್ಗೆ. ರಚಿತಾ ರಾಮ್ ಕನ್ನಡದ ಕಾಸ್ಟ್ಲೀ ನಟಿ ಅನ್ನೋದು ಸಂಭಾವನೆ ವಿಚಾರದಲ್ಲಿ ಅಲ್ಲದಿದ್ರೂ, ಈ ಬುಲ್ ಬುಲ್ ಬೆಡಗಿ ಹೊಸಬರ ವಿಚಾರದಲ್ಲಂತೂ ಕಾಸ್ಟ್ಲೀ ನಟಿ. ಹೇಗೆ ಅಂತ ಹೇಳ್ತೀವಿ ಈ ಸ್ಲೈಡ್ ನೋಡ್ತಾ ಹೋಗಿ..

  ಚಾಲೆಂಜಿಂಗ್ಸ್ಟಾರ್ ಜೊತೆ ಅರಸಿ

  ಚಾಲೆಂಜಿಂಗ್ಸ್ಟಾರ್ ಜೊತೆ ಅರಸಿ

  ಜೀ ಕನ್ನಡ ವಾಹಿನಿಯಲ್ಲಿ 'ಅರಸಿ' ಧಾರಾವಾಹಿ ಮಾಡ್ತಿದ್ದ ರಚಿತಾ ರಾಮ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸೋ ಅವಕಾಶ ಅರಸಿ ಬಂದ ನಂತ್ರ ಈ ನಟಿ ಸ್ಯಾಂಡಲ್ವುಡ್ನಲ್ಲೂ ಅರಸಿಯಾದ್ರು. ಬುಲ್ ಬುಲ್ ನಂತ್ರ ದರ್ಶನ್ ಜೊತೆ 'ಅಂಬರೀಷ' ಸಿನಿಮಾದಲ್ಲೂ ಮಿಂಚಿದ್ರು..[ಕುಂಬಳಕಾಯಿ ಒಡೆದ 'ರಥಾವರ' ಚಿತ್ರತಂಡ]

  ಗೋಲ್ಡನ್ಸ್ಟಾರ್ಗೆ ದಿಲ್ರಾಣಿ

  ಗೋಲ್ಡನ್ಸ್ಟಾರ್ಗೆ ದಿಲ್ರಾಣಿ

  ಬುಲ್ ಬುಲ್ ನಂತ್ರ ರಚಿತಾ ರಾಮ್ ಗೋಲ್ಡನ್ ಸ್ಟಾರ್ ಗಣೇಶ್ಗೆ ಜೋಡಿಯಾದ್ರು. ಪ್ರೀತಂ ಗುಬ್ಬಿ ನಿರ್ದೇಶನ, ಕೆ ಮಂಜು ನಿರ್ಮಾಣವಿದ್ದ ಚಿತ್ರವಾಗಿ 'ದಿಲ್ ರಂಗೀಲಾ' ಬಂದ ನಂತ್ರ ಮತ್ತೆ 'ಅಂಬರೀಷ'ನಿಗೆ ರಾಣಿಯಾದ್ರು.

  ರನ್ನನ ಚಿನ್ನ ಈ ರಚಿತಾ

  ರನ್ನನ ಚಿನ್ನ ಈ ರಚಿತಾ

  ಎರಡೆರೆಡು ಸ್ಟಾರ್ ಸಿನಿಮಾಗಳ ನಂತ್ರ ಮತ್ತೆ ರಚಿತಾ ರಾಮ್ರನ್ನ ಹುಡುಕಿ ಬಂದ ಅವಕಾಶ ಮತ್ತೊಬ್ಬ ಸೂಪರ್ ಸ್ಟಾರ್ ಕಡೆಯಿಂದ. ಕಿಚ್ಚ ಸುದೀಪ್ ಅಭಿನಯದ 'ರನ್ನ'ನಿಗೆ ಒನ್ ಅಂಡ್ ಓನ್ಲೀ ಕ್ವೀನ್ ಆದ್ರು ರಚಿತಾ.

  ರೋರಿಂಗ್ ಸ್ಟಾರ್ 'ರಥಾವರ'

  ರೋರಿಂಗ್ ಸ್ಟಾರ್ 'ರಥಾವರ'

  ಮೂರು ಜನ ಸ್ಟಾರ್ಗಳ ನಂತ್ರ ಮತ್ತೊಬ್ಬ ಸ್ಟಾರ್ ರಚಿತಾ ರಾಮ್ಗೆ ರತ್ನಗಂಬಳಿ ಹಾಸಿ ಆಹ್ವಾನ ಕೊಟ್ರು. ಅದು ರೋರಿಂಗ್ ಸ್ಟಾರ್ ಮುರಳಿ ಅಭಿನಯದ 'ರಥಾವರ' ಚಿತ್ರಕ್ಕೆ. ಮೋಹನ್ ಬಂಡಿಯಪ್ಪ ನಿರ್ದೇಶನದ ಚಿತ್ರ ಈಗ ರಿಲೀಸ್ಗೆ ತಯಾರಾಗಿದೆ.

  ಪವರ್ ಸ್ಟಾರ್ 25ನೇ ಚಿತ್ರ

  ಪವರ್ ಸ್ಟಾರ್ 25ನೇ ಚಿತ್ರ

  ರಚಿತಾ ರಾಮ್ ಈ ನಾಲ್ಕು ಸ್ಟಾರ್ಗಳ ಜೊತೆ ನಟಿಸಿದ ನಂತ್ರ ಫೈವ್ ಸ್ಟಾರ್ ನಟಿಯಾಗೋದಕ್ಕೆ ಅವಕಾಶ ಸಿಕ್ಕಿದ್ದು ಮತ್ತೊಬ್ಬ ಸೂಪರ್ಸ್ಟಾರ್ ಪವರ್ಸ್ಟಾರ್ ಅಭಿನಯದ 'ಚಕ್ರವ್ಯೂಹ' ಸಿನಿಮಾ ಮೂಲಕ. ಚಕ್ರವ್ಯೂಹ ಶೂಟಿಂಗ್ ನಡೀತಾ ಇದ್ದು, ಇದು ಪುನೀತ್ ಅಭಿನಯದ 25ನೇ ಚಿತ್ರ ಅನ್ನೋ ಕಾರಣಕ್ಕೆ ಬಹುನಿರೀಕ್ಷಿತ ಚಿತ್ರವಾಗಿ ನಿರೀಕ್ಷೆ ಮೂಡಿಸಿದೆ.

  ಆಕ್ಷನ್ ಪ್ರಿನ್ಸ್ ಜೊತೆ ಭರ್ಜರಿ

  ಆಕ್ಷನ್ ಪ್ರಿನ್ಸ್ ಜೊತೆ ಭರ್ಜರಿ

  ರಚಿತಾ ರಾಮ್ ಚಕ್ರವ್ಯೂಹ ನಂತ್ರ 'ಭರ್ಜರಿ' ಸಿನಿಮಾದಲ್ಲಿ ನಟಿಸ್ತಿದ್ದಾರೆ. ಇನ್ನು 'ಭರ್ಜರಿ' ಕೂಡ ಬಹುನಿರೀಕ್ಷಿತ ಸಿನಿಮಾ ಯಾಕಂದ್ರೆ ಸತತ ಎರಡು ಸಿನಿಮಾ ಗೆದ್ದಿರೋ ಧ್ರುವ ಸರ್ಜಾ ಹ್ಯಾಟ್ರಿಕ್ ಹೀರೋ ಆಗೋಕೆ ಕಾದಿರೋ ಸಿನಿಮಾ ಇದು.

  English summary
  If there is any Kannada heroine with 5 Star value, that is none other than Rachita Ram. The immensely talented dimple beauty has bagged lead roles opposite all the super star heros Darshan, Ganesh, Sudeep, Sri Murali and Dhruv Sarja. ಕನ್ನಡದ ಫೈವ್ ಸ್ಟಾರ್ ಚೆಲುವೆ ಇವಳು.. ರಚಿತಾ ರಾಮ್

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X