»   » ದುನಿಯಾ ವಿಜಯ್ ಚಿತ್ರದಿಂದ ರಚಿತಾ ರಾಮ್ ಹೊರ ಬಂದಿದ್ದೇಕೆ?

ದುನಿಯಾ ವಿಜಯ್ ಚಿತ್ರದಿಂದ ರಚಿತಾ ರಾಮ್ ಹೊರ ಬಂದಿದ್ದೇಕೆ?

Posted By:
Subscribe to Filmibeat Kannada

ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆಯ ನಟಿ. ಒಂದು ಚಿತ್ರವನ್ನ ಒಪ್ಪಿಕೊಂಡ್ರೆ, ಮತ್ತೊಂದು ಚಿತ್ರಕ್ಕೆ ಡೇಟ್ ಸಮಸ್ಯೆಯಾಗುತ್ತೆ ಎನ್ನುವಷ್ಟು ಬ್ಯುಸಿ. ಸದ್ಯ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಉಪ್ಪಿ-ರುಪ್ಪಿ' ಚಿತ್ರದಲ್ಲಿ ನಟಿಸುತ್ತಿರುವ ರಚಿತಾ, 'ಭರ್ಜರಿ' ಚಿತ್ರದ ಸಾಂಗ್ ಶೂಟಿಂಗ್ ನಲ್ಲೂ ತೊಡಗಿಸಿಕೊಂಡಿದ್ದಾರೆ.

ಹೀಗಿರುವಾಗ, ದುನಿಯಾ ವಿಜಯ್ ಅವರ ಎರಡು ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಆಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈಗ ಎರಡು ಚಿತ್ರಗಳಲ್ಲಿ ಒಂದು ಚಿತ್ರದಿಂದ ರಚಿತಾ ರಾಮ್ ಅವರನ್ನ ಕೈ ಬಿಡಲಾಗಿದೆಯಂತೆ.

ಫೋಟೋಶೂಟ್ ನಲ್ಲಿ ಮಿರ ಮಿರ ಮಿಂಚಿದ ಆಟೋ ಚಾಲಕ 'ಕನಕ'

ದುನಿಯಾ ವಿಜಯ್ ಅವರ ಯಾವ ಚಿತ್ರದಿಂದ ರಚಿತಾ ರಾಮ್ ಹೊರ ಬಂದಿದ್ದಾರೆ? ಯಾವ ಕಾರಣಕ್ಕಾಗಿ ಹಿಂದೆ ಸರಿದಿದ್ದಾರೆ ಎಂಬ ಕಾರಣ ಈಗ ಸಿಕ್ಕಿದೆ. ಮುಂದೆ ಓದಿ......

ಯಾವುದು ಆ ಎರಡು ಚಿತ್ರಗಳು

ದುನಿಯಾ ವಿಜಯ್ ಅವರ ಎರಡು ಚಿತ್ರಗಳಿಗೆ ರಚಿತಾ ರಾಮ್ ನಾಯಕಿ ಆಗಿ ಆಯ್ಕೆಯಾಗಿದ್ದರು. ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕನಕ' ಮತ್ತು ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳಲಿರುವ 'ಜಾನಿ ಜಾನಿ ಎಸ್ ಪ್ಪಪಾ' ಚಿತ್ರಕ್ಕೆ ಹೀರೋಯಿನ್ ಆಗಿದ್ದರು.

ಮತ್ತೊಮ್ಮೆ 'ಲಕ್ಕಿ ಹೀರೋಯಿನ್' ಆದ ಡಿಂಪಲ್ ಕ್ವೀನ್ ರಚಿತಾ.!

'ಕನಕ' ಚಿತ್ರದಿಂದ ಔಟ್!

ಮೂಲಗಳ ಪ್ರಕಾರ ಈಗ ಆರ್ ಚಂದ್ರು ಅವರ 'ಕನಕ' ಚಿತ್ರದಿಂದ ರಚಿತಾ ರಾಮ್ ಅವರನ್ನ ಕೈ ಬಿಡಲಾಗಿದೆಯಂತೆ.

ಪ್ರೀತಂ ಗುಬ್ಬಿ ಸಿನಿಮಾ ಕಾರಣ

ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿರುವ 'ಜಾನಿ ಜಾನಿ ಎಸ್ ಪ್ಪಪಾ' ಚಿತ್ರಕ್ಕೆ ದುನಿಯಾ ವಿಜಯ್ ಗೆ ಹೊಸ ಜೋಡಿಯ ಅವಶ್ಯಕತೆ ಇದೆಯಂತೆ. ಆದ್ರೆ, 'ಕನಕ' ಚಿತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ರೆ, ಪ್ರೀತಂ ಗುಬ್ಬಿ ಚಿತ್ರಕ್ಕೆ ಅದು ಪ್ರೆಶ್ ಪೇರ್ ಎನಿಸಿಕೊಳ್ಳುವುದಿಲ್ಲವಂತೆ. ಹಾಗಾಗಿ, 'ಕನಕ' ಚಿತ್ರದಿಂದ ನಟಿಯನ್ನ ಕೈ ಬಿಡಲಾಗಿದೆಯಂತೆ.

ಮತ್ತೆ 'ಜಾನಿ' ಜಪ ಮಾಡಲು ಆರಂಭಿಸಿದ ದುನಿಯಾ ವಿಜಯ್-ಪ್ರೀತಂ ಗುಬ್ಬಿ

'ಜಾನಿ'ಗೆ ರಚಿತಾ ಸಾಥ್

ಹೀಗಾಗಿ, ಪ್ರೀತಂ ಗುಬ್ಬಿ ಅವರ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ಬುಲ್ ಬುಲ್ ರಚಿತಾ ರಾಮ್ ನಾಯಕಿ ಆಗಿ ಮುಂದುವರೆಯಲಿದ್ದಾರೆ. ಈ ಮೂಲಕ ಪ್ರೀತಂ ಗುಬ್ಬಿ ಚಿತ್ರದಲ್ಲಿ ಮೊದಲ ಭಾರಿಗೆ ರಚಿತಾ ರಾಮ್ ಹಾಗೂ ದುನಿಯಾ ವಿಜಯ್ ತೆರೆ ಹಂಚಿಕೊಳ್ಳಲಿದ್ದಾರೆ.

ಮೋಹಕ ತಾರೆ ರಮ್ಯಾ ಜಾಗಕ್ಕೆ ರಚಿತಾ ರಾಮ್ ಎಂಟ್ರಿ!

'ಉಪ್ಪಿ-ರುಪ್ಪಿ'ಯಲ್ಲಿ ರಚಿತಾ

ಸದ್ಯ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಉಪ್ಪಿ-ರುಪ್ಪಿ' ಚಿತ್ರದಲ್ಲಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ. ಇದರ ಮಧ್ಯೆ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರದ ಹಾಡೊಂದಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ಇದಾದ ನಂತರ 'ಜಾನಿ ಜಾನಿ ಎಸ್ ಪ್ಪಪಾ' ಸಿನಿಮಾ ಶುರು ಮಾಡಲಿದ್ದಾರಂತೆ.

'ಉಪ್ಪಿ-ರುಪ್ಪಿ'ಯ ಫಸ್ಟ್ ಲುಕ್ ರಿಲೀಸ್

English summary
Kannada Actress Rachita Ram Dropped From Duniya Vijay Starrer's 'Kanaka' Movie. The Movie Directed By R Chandru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada