For Quick Alerts
  ALLOW NOTIFICATIONS  
  For Daily Alerts

  'ಅಯೋಗ್ಯ' ನಂತರ ಮತ್ತೆ ಒಂದಾದ ಸತೀಶ್ ನೀನಾಸಂ-ರಚಿತಾ ರಾಮ್

  |

  ಅಯೋಗ್ಯ ಸಿನಿಮಾದ ಯಶಸ್ಸಿನ ನಂತರ ಸತೀಶ್ ನೀನಾಸಂ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೆ ತೆರೆಮೇಲೆ ಒಂದಾಗ್ತಾರೆ. ಈ ವಿಚಾರವನ್ನು ಖುದ್ದು ಸತೀಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಖಚಿತಪಡಿಸಿದ್ದಾರೆ.

  ಸತೀಶ್ ನೀನಾಸಂ ಕೈಗೆತ್ತಿಕೊಂಡಿರುವ ಮ್ಯಾಟ್ನಿ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮನೋಹರ್ ಕಾಂಪಲ್ಲಿ ನಿರ್ದೇಶನದ ಈ ಚಿತ್ರ ಇಂದು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿತ್ತು.

  ಸತೀಶ್ ನೀನಾಸಂ-ಕಾಂಪಲ್ಲಿಯ 'ಮ್ಯಾಟ್ನಿ' ಚಿತ್ರದ ಫಸ್ಟ್ ಲುಕ್

  ಫಸ್ಟ್ ಲುಕ್ ಬೆನ್ನಲ್ಲೆ ನಾಯಕಿ ಯಾರಾಗಬಹುದು ಎಂಬ ಕುತೂಹಲ, ಚರ್ಚೆ ಆರಂಭವಾಗಿತ್ತು. ಅದಕ್ಕೆ ನಾಯಕ ಸತೀಶ್ ಉತ್ತರ ನೀಡಿದ್ದಾರೆ. ''ಅಯೋಗ್ಯ ನಂತರ ನಮ್ಮಿಬ್ಬರ ಜೋಡಿ ನೋಡಿ, ತೆರೆಯ ಮೇಲೆ ಮತ್ತೊಮ್ಮೆ. ಚಿತ್ರ :ಮ್ಯಾಟ್ನಿ'' ಎಂದು ಟ್ವೀಟ್ ಮಾಡಿದ್ದಾರೆ.

  ಅಂದ್ಹಾಗೆ, ನಿರ್ದೇಶಕ ಮನೋಹರ್ ಕಾಂಪಲ್ಲಿ ಕಥೆ ಹೇಳಿದ ತಕ್ಷಣ ಈ ಚಿತ್ರ ಒಪ್ಪಿಕೊಂಡಿದ್ದಾರಂತೆ ಸತೀಶ್. ಇನ್ನುಳಿದಂತೆ ಈ ಚಿತ್ರವನ್ನು ಪಾರ್ವತಿ ಎಂಬುವವರು ನಿರ್ಮಿಸುತ್ತಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

  SPB Special : ಉಪೇಂದ್ರ ಹೇಳಿದ್ದ ಮಾತನ್ನು ಚಾಚು ತಪ್ಪದೆ ಕೇಳ್ತಿದ್ರು SPB | V Manohar | Filmibeat Kannada

  ಈ ಚಿತ್ರ ಬಿಟ್ಟರೆ, ಸತೀಶ್ ಅವರ ಕೈಯಲ್ಲಿ ಗೋದ್ರಾ, ಮೈ ನೇಮ್ ಈಸ್ ಸಿದ್ದೇಗೌಡ, ಪರಿಮಳ ಲಾಡ್ಜ್, ದಸರಾ, ಹಾಗೂ ಪೆಟ್ರೋಮ್ಯಾಕ್ಸ್ ಚಿತ್ರಗಳಿವೆ. ಮತ್ತೊಂದೆಡೆ ರಚಿತಾ ಸಹ ಸತತವಾಗಿ ಸಿನಿಮಾಗಳನ್ನು ಮಾಡುತ್ತಿದ್ದು, ಏಪ್ರಿಲ್, ಎಕ್ ಲವ್ ಯಾ, ಲಿಲ್ಲಿ, ವೀರಂ, ಡಾಲಿ, 100 ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ತೆಲುಗಿನ 'ಸೂಪರ್ ಮಚ್ಚಿ' ಚಿತ್ರದಲ್ಲೂ ನಟಿಸುತ್ತಿದ್ದಾರೆ.

  English summary
  Kannada actress Rachita Ram roped in as heroine for Sathish Ninasam in Matinee. Satish and Rachita are teaming up after Ayogya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X