For Quick Alerts
  ALLOW NOTIFICATIONS  
  For Daily Alerts

  'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು...' ಡಿಂಪಲ್ ಕ್ವೀನ್ ರಚಿತಾ ರಾಮ್

  |

  ಗುಳಿಕೆನ್ನೆ ಹುಡುಗಿ ರಚಿತಾ ರಾಮ್ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೆಗಾ ಕುಟುಂಬದ ಕಲ್ಯಾಣ್ ದೇವ್ ನಾಯಕನಾಗಿರುವ ಸೂಪರ್ ಮಚ್ಚಿ ಚಿತ್ರದಲ್ಲಿ ರಚಿತಾ ನಾಯಕಿಯಾಗಿದ್ದಾರೆ.

  ಪುಲಿ ವಾಸು ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಪ್ರಾರಂಭಿಸಿದೆ. ಇದೀಗ, ಸೂಪರ್ ಮಚ್ಚಿ ಸಿನಿಮಾ ಸ್ಯಾಂಡಲ್ವುಡ್ ಗೆ ಸರ್ಪ್ರೈಸ್ ನೀಡಿದೆ.

  ತೆಲುಗಿನಲ್ಲಿ ತಯಾರಾಗುತ್ತಿರುವ ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗಲಿದೆಯಂತೆ. ಏಕಕಾಲದಲ್ಲಿ ತೆಲುಗು ಮತ್ತು ಕನ್ನಡದಲ್ಲಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

  ತೆಲುಗು ನಟ ಕಲ್ಯಾಣ್ ದೇವ್ ಜೊತೆ 'ಸೂಪರ್ ಮಚ್ಚಿ' ರಚಿತಾ ರಾಮ್ ಹೋಳಿತೆಲುಗು ನಟ ಕಲ್ಯಾಣ್ ದೇವ್ ಜೊತೆ 'ಸೂಪರ್ ಮಚ್ಚಿ' ರಚಿತಾ ರಾಮ್ ಹೋಳಿ

  ತೆಲುಗಿನಲ್ಲಿ ಸೂಪರ್ ಮಚ್ಚಿ ಎಂದು ಹೆಸರಿಟ್ಟಿದ್ದು, ಕನ್ನಡದಲ್ಲಿ 'ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ' ಎಂದು ಶೀರ್ಷಿಕೆ ಅಂತಿಮಗೊಳಿಸಲಾಗಿದೆ. ಇದು ರಚಿತಾ ರಾಮ್ ಗೆ ಮೊದಲ ತೆಲುಗು ಸಿನಿಮಾ ಆಗಿದ್ದು, ಈಗ ಕನ್ನಡದಲ್ಲೂ ಬರುತ್ತಿರುವುದು ಖುಷಿಯ ಸಂಗತಿ.

  ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧದ ಕಥೆಯ ಸುತ್ತ ಸಿನಿಮಾ ಮೂಡಿಬರುತ್ತಿದ್ದು, ಮೊದಲ ಹಂತದ ಶೂಟಿಂಗ್ ಮುಗಿದಿದೆ. ಈಗ ಬೆಂಗಳೂರು, ಚಿಕ್ಕಮಗಳೂರು, ಹೈದರಾಬಾದ್, ವಿಶಾಖಪಟ್ಟಣಂನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.

  ರಚಿತಾ ರಾಮ್ ಗೆ ಮೆಗಾಸ್ಟಾರ್ ಚಿರಂಜೀವಿ ಅಳಿಯ 'ಸೂಪರ್ ಮಚ್ಚಿ' ಎಂದಿದ್ದೇಕೆ?ರಚಿತಾ ರಾಮ್ ಗೆ ಮೆಗಾಸ್ಟಾರ್ ಚಿರಂಜೀವಿ ಅಳಿಯ 'ಸೂಪರ್ ಮಚ್ಚಿ' ಎಂದಿದ್ದೇಕೆ?

  ಈ ರೋಮ್ಯಾಂಟಿಕ್ ಚಿತ್ರವನ್ನು ರಿಜ್ವಾನ್ ಎಂಟರ್ ಟೈನ್ಮೆಂಟ್ ಸಂಸ್ಥೆ ನಿರ್ಮಿಸುತ್ತಿದೆ. ಕನ್ನಡದ ಶಿವರಾಜ್ ಕೆ ಆರ್ ಪೇಟೆ, ಪ್ರಗತಿ, ರಾಜೇಂದ್ರ ಪ್ರಸಾದ್ ಅಂತಹ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಎಸ್ ಎಸ್ ತಮನ್ ಸಂಗೀತ ನೀಡುತ್ತಿದ್ದು, ಮುಂದಿನ ವರ್ಷ ಮಧ್ಯದಲ್ಲಿ ತೆರೆಮೇಲೆ ಬರಬಹುದು.

  English summary
  Telugu actor Kalyan Dev and rachita ram starrer 'Super Machi' movie is titled as 'This Property Belongs To Meenakshi' in Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X