»   » ಸ್ಯಾಂಡಲ್ ವುಡ್ ಕ್ವೀನ್ ಆಗುವತ್ತ ರಚಿತಾ ರಾಮ್

ಸ್ಯಾಂಡಲ್ ವುಡ್ ಕ್ವೀನ್ ಆಗುವತ್ತ ರಚಿತಾ ರಾಮ್

Posted By: ಜೀವನರಸಿಕ
Subscribe to Filmibeat Kannada

  ರಚಿತಾರಾಮ್ ಸೀರಿಯಲ್ ನ 'ಅರಸಿ'ಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಚೆಲುವೆ. ಗುಳಿಕೆನ್ನೆಯ ಸುಂದರಿಯಾದ ರಚಿತಾರಾಮ್ ಮೊದಲ ಸಿನಿಮಾ 'ಬುಲ್ ಬುಲ್'ನಲ್ಲೇ ಭರವಸೆಯ ನಟಿ ಅನ್ನಿಸಿಕೊಂಡ್ರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿಯಾದ ರಚಿತಾರಾಮ್ ಅನುಭವಿ ನಟಿಯರಿಗೂ ಕಡಿಮೆಯಿಲ್ಲದಂತಹಾ ಅಭಿನಯ ನೀಡಿದರು.

  ರೆಬೆಲ್ ಸ್ಟಾರ್ ಅಂಬಿ ಕೂಡ ರಚಿತಾರಾಮ್ ಅಭಿನಯ ನೋಡಿ ಮುಂದೆ ದೊಡ್ಡ ನಟಿಯಾಗ್ತೀಯಾ ಅನ್ನೋ ಆಶೀರ್ವಾದವನ್ನೂ ನೀಡಿದರು. ರಚಿತಾರಾಮ್ ಸ್ಯಾಂಡಲ್ ವುಡ್ ಗೆ ಬಂದ ಎರಡೇ ವರ್ಷಗಳಲ್ಲಿ ಯಶಸ್ಸಿನ ಬಿರುಗಾಳಿ ಎಬ್ಬಿಸೋಕೆ ರೆಡಿಯಾಗ್ತಿದ್ದಾರೆ. ರಚಿತಾರಾಮ್ ಈಗ ದೊಡ್ಡ ದೊಡ್ಡ ಆಫರ್ ಗಳಲ್ಲಿ ಬಿಜಿ.

  ಬುಲ್ ಬುಲ್ ಗೆದ್ದ ನಂತರ ಹೆಚ್ಚೂ ಕಡಿಮೆ 25 ಸಿನಿಮಾಗಳ ಆಫರ್ ಬಂದಿದೆ. ಆದರೆ ರಚಿತಾರಾಮ್ ಈಗೇನಿದ್ರೂ ಒಪ್ಪಿಕೊಳ್ತಿರೋದು ಸ್ಟಾರ್ ಸಿನಿಮಾಗಳನ್ನ. ಈ ನಡುವೆ ಒಂದು ಸಿನಿಮಾ ಸೋತ್ರೂ ರಚಿತಾ ಎಡವಿಲ್ಲ.

  ರಚಿತಾರಾಮ್ ಎಡವಿ ಬೀಳದೇ ಇರೋದಕ್ಕೆ ಒಂದು ಕಾರಣವೂ ಇದೆ. ಅದು ಸದಾ ರಚಿತಾರನ್ನ ಯಶಸ್ಸಿನತ್ತ ಕರ್ಕೊಂಡು ಹೋಗ್ತಿದೆ. ಸ್ಟಾರ್ ಹೀರೋಯಿನ್ ಆಗುವತ್ತ ಮುನ್ನೆಡೆದಿರೋ ಈ ಚೆಲುವೆಯ ಸಕ್ಸಸ್ ಸೀಕ್ರೇಟ್ ಮತ್ತು ಮುಂದಿನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾಗಳ ಡೀಟೇಲ್ಸ್ ಇಲ್ಲಿದೆ.

  ಅಂಬರೀಶನ ಅಂಬರದಲ್ಲಿ ಅರಸಿ

  ಬುಲ್ ಬುಲ್ ನಂತರ ರಚಿತಾರಾಮ್ ನಟಿಸಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ದಿಲ್ ರಂಗೀಲಾ' ಸಿನಿಮಾದಲ್ಲಿ. ದಿಲ್ ರಂಗೀಲಾ ಗೆಲ್ಲದಿದ್ರೂ ರಚಿತಾರಾಮ್ ಗ್ಲಾಮರ್ ಡಾಲ್ ಆಗಿ ಗೆದ್ದರು. ಅದಾದ ನಂತರ ರಚಿತಾ ಒಪ್ಪಿಕೊಂಡಿದ್ದು ಮತ್ತೊಂದು ಅಂಬಿ-ದರ್ಶನ್ ಧಮಾಕಾ 'ಅಂಬರೀಶ'

  ರಣವಿಕ್ರಮನಿಗೆ ರಾಣಿಯಾಗದಿದ್ರೂ ಓಕೆ

  ರಚಿತಾರಾಮ್ ಈಗ ಗೆಲ್ಲೋ ಕುದುರೆ ಹಾಗಾಗೀನೇ ಪವರ್ ಸ್ಟಾರ್ ಪುನೀತ್ ಗೆ 'ರಣವಿಕ್ರಮ'ದಲ್ಲಿ ಜೋಡಿಯಾಗೋ ಅವಕಾಶ ಪಡ್ಕೊಂಡರು. ಆದ್ರೆ ಈಗ ಅದ್ರಿಂದ ಹೊರ ಬಂದಿದ್ದಾರೆ. ಆದ್ರೆ ಪುನೀತ್ ಸಿನಿಮಾ ಕೈ ತಪ್ಪಿದ್ದಕ್ಕೆ ರಚಿತಾರಾಮ್ ತಲೆ ಕೆಡಿಸಿಕೊಂಡಿಲ್ಲ. ಯಾಕಂದ್ರೆ ಅದೃಷ್ಟ ಮತ್ತು ಪ್ರತಿಭೆ ಎರಡೂ ರಚಿತಾ ಕೈಯಲ್ಲಿವೆ.

  ರನ್ನನಿಗೆ ರಮಣಿಯಾಗಿ ರಚಿತಾರಾಮ್

  ರಚಿತಾರಾಮ್ ಪ್ರತಿಭೆಗೆ ನಂದಕಿಶೋರ್ ಕೂಡ ಮಣೆ ಹಾಕಿದ್ದಾರೆ. ರಚಿತಾರಾಮ್ ರಂತಹ ಪ್ರತಿಭಾವಂತೆ ಕಿಚ್ಚ ಸುದೀಪ್ ತಂಡ ಸೇರ್ಕೊಳ್ಳೋದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸೂಪರ್ ಸ್ಟಾರ್ ಸುದೀಪ್ ಜೊತೆ ಕೆಲಸ ಮಾಡೋ ಅವಕಾಶ ನಾಲ್ಕನೇ ಸಿನಿಮಾದಲ್ಲೇ ಸಿಕ್ಕಿರೋದಕ್ಕೆ ರಚಿತಾ ಆಕಾಶದಲ್ಲಿ ತೇಲಾಡ್ತಿದ್ದಾರೆ. ಈಗ ಶೂಟಿಂಗ್ ಕೂಡ ಸಾಗಿದೆ.

  ರಥವೇರೋಕೆ ರಚಿತಾರಾಮ್ ರೆಡಿ

  ರಚಿತಾ ಅವರ ಕ್ಯೂಟ್ ಬ್ಯೂಟಿ ಮತ್ತು ಪ್ರತಿಭೆಗೆ ಸೈ ಅಂದಿರೋ ಉಗ್ರಂ ಸ್ಟಾರ್ ಮುರಳಿ ಅಭಿನಯದ ಮುಂದಿನ ಸಿನಿಮಾ 'ರಥಾವರ'ದಲ್ಲಿ ರಾಣಿಯಾಗಿ ರಥವೇರೋಕೆ ರಚಿತಾ ರೆಡಿ. ಬರ್ತಿರೋ ರಾಶಿ ರಾಶಿ ಆಫರ್ ಗಳನ್ನ ಅಳೆದು ತೂಗಿ ಹೆಕ್ಕಿಕೊಳ್ತಿದ್ದಾರೆ ರಚಿತಾರಾಮ್.

  ರಚಿತಾರಾಮ್ ಅದೃಷ್ಠ ಚೆನ್ನಾಗಿದೆ

  ರಚಿತಾರಾಮ್ ಗಾಂಧಿನಗರಕ್ಕೆ ಕಾಲಿಟ್ಟು ಇದು ಎರಡನೇ ವರ್ಷ. ಆದ್ರೆ ಈಗಲೇ ಕೈಗೆಸಿಗದಷ್ಟು ಬಿಜಿಯಾಗಿದ್ದಾರೆ. ರಚಿತಾ ಡೇಟ್ಸ್ ಹೊಂದಿಸಿಕೊಳ್ಳೋದೆ ಕಷ್ಟವಾಗಿದೆ. ಅದಕ್ಕಾಗೀನೇ ರಣವಿಕ್ರಮ ಬಿಡಬೇಕಾಯ್ತು ಅನ್ನೋದು ಸುದ್ದಿ. ಒಂದು ಅವಕಾಶ ಪಡ್ಕೋಬೇಕು ಅಂದ್ರೆ ಮತ್ತೊಂದನ್ನ ಕಳ್ಕೊಳ್ಳಲೇಬೇಕಲ್ವ.

  ಸ್ಯಾಂಡಲ್ ವುಡ್ ಕ್ವೀನ್ ಆಗುವತ್ತ ರಚಿತಾ?

  ರಮ್ಯಾ ನಂತರದ ಸ್ಯಾಂಡಲ್ವುಡ್ ಕ್ವೀನ್ ಯಾರು ಅನ್ನೋ ಪ್ರಶ್ನೆಗೆ ರಚಿತಾರಾಮ್ ಅನ್ನೋ ಮಾತುಗಳು ಗಾಂಧಿನಗರದ ಪಂಡಿತವಲಯದಲ್ಲಿ ಕೇಳಿಬರ್ತಿದೆ. ರಮ್ಯಾ ಲಂಡನ್ ಸೇರಿಕೊಂಡಿದ್ದಾಗಿದೆ. ರಮ್ಯಾ ಪ್ಲೇಸ್ ಗೆ ರಚಿತಾರಾಮ್ ಬಂದ್ರೂ ಬರಬಹುದು ಯಾರಿಗ್ಗೊತ್ತು.

  English summary
  Actress Rachita Ram to be the next Sandalwood Queen, Is it? Now the actress is busy with Sudeep, Darshan, Sri Murali films. Many belives that, the actress is all set to become new Sandalwood Queen.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more