For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಡೈರೆಕ್ಷನ್ ಸಿನಿಮಾ ಶೀರ್ಷಿಕೆ ಲೀಕ್: ರಚಿತಾ ರಾಮ್ ಟ್ರೋಲ್

  |

  ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಯಾವಾಗ ಘೋಷಣೆ ಮಾಡ್ತಾರೆ ಎಂದು ಕಾಯುತ್ತಿದ್ದವರಿಗೆ ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಉಪ್ಪಿ ಡೈರೆಕ್ಷನ್ ಸಿನಿಮಾ ಎನ್ನಲಾದ ಪೋಸ್ಟರ್‌ವೊಂದು ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪ್ಪಿಯ ಹುಟ್ಟುಹಬ್ಬ. ಅದೇ ದಿನ ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಅಧಿಕೃತವಾಗಿ ಪ್ರಕಟಿಸಲು ತಯಾರಿ ನಡೆಸಿದ್ದರಂತೆ. ಆದರೆ, ಅದಕ್ಕೂ ಮುಂಚೆಯೇ ಸಿನಿಮಾದ ಹೆಸರು ಮತ್ತು ಫಸ್ಟ್ ಲುಕ್ ಪೋಸ್ಟರ್ ಲೀಕ್ ಆಗಿದೆ.

  ಸೋರಿಕೆಯಾಗಿರುವ ಪೋಸ್ಟರ್ ನಿಜಾನ ಅಥವಾ ಇದು ಫ್ಯಾನ್ ಮೇಡ್ ಎನ್ನುವ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಇಲ್ಲ. ಆದರೆ ಉಪ್ಪಿ ಭಕ್ತರು ಮಾತ್ರ ಆ ಪೋಸ್ಟರ್ ನೋಡಿ ಇದು ಪಕ್ಕಾ ಉಪ್ಪಿ ಶೈಲಿಯ ಸಿನಿಮಾ, ಉಪೇಂದ್ರ ಅವರಿಗೆ ಇಂತಹ ಐಡಿಯಾ ಬರೋದು ಎಂದು ಬೀಗುತ್ತಿದ್ದಾರೆ.

  ಉಪೇಂದ್ರ ನಿರ್ದೇಶನದ ಹೊಸ ಸಿನಿಮಾಕ್ಕೆ ಹೆಸರೇ ಇಲ್ಲ!ಉಪೇಂದ್ರ ನಿರ್ದೇಶನದ ಹೊಸ ಸಿನಿಮಾಕ್ಕೆ ಹೆಸರೇ ಇಲ್ಲ!

  ಉಪೇಂದ್ರ ಅವರ ನಿರ್ದೇಶನದ ಚಿತ್ರ ಅನೌನ್ಸ್ ಆಯ್ತು ಎನ್ನುವ ಖುಷಿಯಲ್ಲಿ ಅಭಿಮಾನಿಗಳು ತೇಲಾಡುತ್ತಿದ್ದಾರೆ. ಮತ್ತೊಂದೆಡೆ ಈ ಪೋಸ್ಟರ್ ಸೋರಿಕೆ ಮಾಡಿದವರು ಯಾರು ಎನ್ನುವ ಪ್ರಶ್ನೆಯೂ ಕುತೂಹಲ ಮೂಡಿಸಿದೆ. ಈ ಪ್ರಶ್ನೆಗೆ ಉತ್ತರ ಹುಡುಕಿ ಹೋದವರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಕಣ್ಣಿಗೆ ಬಿದ್ದಿದ್ದಾರೆ. ಮುಂದೆ ಓದಿ....

  ಉಪ್ಪಿ ಸಿನಿಮಾ ಟೈಟಲ್ ಲೀಕ್ ಮಾಡಿದ್ದು ರಚ್ಚು?

  ಉಪ್ಪಿ ಸಿನಿಮಾ ಟೈಟಲ್ ಲೀಕ್ ಮಾಡಿದ್ದು ರಚ್ಚು?

  ಉಪೇಂದ್ರ ನಿರ್ದೇಶನದ ಸಿನಿಮಾ ಎನ್ನಲಾದ ಪೋಸ್ಟರ್‌ನಲ್ಲಿ ಚಿತ್ರದ ಹೆಸರು ಮತ್ತು ಉಪ್ಪಿಯ ಲುಕ್ ಅನಾವರಣಗೊಂಡಿದೆ. ನಿರೀಕ್ಷೆಯಂತೆ ಈ ಚಿತ್ರಕ್ಕೆ ಹೆಸರಿಲ್ಲ. ಪಂಗನಾಮದ ಚಿಹ್ನೆ ಒಳಗೊಂಡಿದೆ. ಇದೇ ಉಪ್ಪಿಯ ಮುಂದಿನ ಸಿನಿಮಾದ ಹೆಸರು ಎಂದು ಅಭಿಮಾನಿಗಳು ನಂಬಿದ್ದಾರೆ. ಸ್ವತಃ ಉಪೇಂದ್ರ ಅವರು ಈ ಬಗ್ಗೆ ಸ್ಪಷ್ಟನೆ ಕೊಡುವವರೆಗೂ ಇದನ್ನು ನಂಬಲು ಸಾಧ್ಯವಿಲ್ಲ. ಆದರೆ, ಫ್ಯಾನ್ಸ್ ನಂಬಿಕೆ ಇದು ನಿಜ ಆಗಲಿ ಎನ್ನುವುದು. ಈ ನಡುವೆ ಉಪ್ಪಿ ಸಿನಿಮಾದ ಟೈಟಲ್ ಲೀಕ್ ಮಾಡಿದ್ದು ರಚಿತಾ ರಾಮ್ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಾಲೆಳೆಯುತ್ತಿದ್ದಾರೆ.

  ಮನೆ ದೇವರ ದರ್ಶನ ಪಡೆದ 'ಡಿಂಪಲ್ ಕ್ವೀನ್' ರಚಿತಾ ರಾಮ್ಮನೆ ದೇವರ ದರ್ಶನ ಪಡೆದ 'ಡಿಂಪಲ್ ಕ್ವೀನ್' ರಚಿತಾ ರಾಮ್

  ರಚ್ಚು ಫೋಟೋ ಮತ್ತು ಉಪ್ಪಿ ಪೋಸ್ಟರ್

  ರಚ್ಚು ಫೋಟೋ ಮತ್ತು ಉಪ್ಪಿ ಪೋಸ್ಟರ್

  ಇತ್ತೀಚಿಗಷ್ಟೆ ನಟಿ ರಚಿತಾ ರಾಮ್ ಮೇಲುಕೋಟೆಯ ಚೆಲುವರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮನೆ ದೇವರ ದರ್ಶನ ಪಡೆದುಕೊಂಡ ನಟಿ ನಂತರ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಆ ಫೋಟೋದಲ್ಲಿ ರಚಿತಾ ರಾಮ್ ತಮ್ಮ ಹಣೆಗೆ ನಾಮ ಹಾಕಿದ್ದರು. ಈಗ ಉಪೇಂದ್ರ ಅವರ ಹೊಸ ಸಿನಿಮಾದ ಟೈಟಲ್ ಸಹ ಪಂಗನಾಮದ ಚಿಹ್ನೆ ಆಗಿರುವುದರಿಂದ, ಈ ಬಗ್ಗೆ ರಚ್ಚುಗೆ ಮೊದಲೇ ಗೊತ್ತಿತ್ತು. ಅವರೇ ಈ ಪೋಸ್ಟರ್ ಲೀಕ್ ಮಾಡಿದ್ದು ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದು ಕಾಕತಾಳೀಯವಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಷ್ಯಗಳು ಹೆಚ್ಚು ಆಕರ್ಷಣೆಯಾಗಿರುತ್ತದೆ.

  ಐ ಲವ್ ಯೂ ಚಿತ್ರದಲ್ಲಿ ಒಟ್ಟಿಗೆ ನಟನೆ

  ಐ ಲವ್ ಯೂ ಚಿತ್ರದಲ್ಲಿ ಒಟ್ಟಿಗೆ ನಟನೆ

  ಅಂದ್ಹಾಗೆ, ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಐ ಲವ್ ಯೂ' ಸಿನಿಮಾದಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಸಾಧಿಸಿತ್ತು. ಈ ಚಿತ್ರದ ಹಾಡೊಂದರಲ್ಲಿ ರಚ್ಚು ಸಖತ್ ಹಾಟ್ ಹಾಗೂ ಬೋಲ್ಡ್ ಆಗಿ ನಟಿಸಿದ್ದರು. ಪಕ್ಕದ್ಮನೆ ಹುಡುಗಿ ರಚ್ಚು ಅಷ್ಟು ಬೋಲ್ಡ್ ಆಗಿ ನಟಿಸಿದ್ದು ಟೀಕೆಗೆ ಒಳಗಾಗಿತ್ತು. ರಚ್ಚು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ರಚಿತಾ ರಾಮ್ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಸಹ ಹಾಕಿದ್ದರು.

  ಡೈರೆಕ್ಷನ್ ಚಿತ್ರದ ಬಗ್ಗೆ ಮಾಹಿತಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರಡೈರೆಕ್ಷನ್ ಚಿತ್ರದ ಬಗ್ಗೆ ಮಾಹಿತಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ

  6 ವರ್ಷದ ನಂತರ ಡೈರೆಕ್ಷನ್

  6 ವರ್ಷದ ನಂತರ ಡೈರೆಕ್ಷನ್

  2015ರಲ್ಲಿ ಉಪ್ಪಿ 2 ಚಿತ್ರಕ್ಕೆ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದರು. ಅದಾದ ಮೇಲೆ ಮತ್ತೆ ಯಾವಾಗ ಡೈರೆಕ್ಷನ್ ಮಾಡ್ತಾರೆ ಎಂದು ಕುತೂಹಲ ಕಾಡ್ತಿತ್ತು. ಕಳೆದ ಒಂದು ವರ್ಷದಿಂದಲೂ ಡೈರೆಕ್ಷನ್ ಸಿನಿಮಾ ಘೋಷಣೆ ಮಾಡ್ತೇನೆ ಎಂದು ಹೇಳುತ್ತಾ ಬಂದಿರುವ ಉಪ್ಪಿ ಕೋವಿಡ್ ನಿಯಂತ್ರಣಕ್ಕೆ ಬರಲಿ ಎಂದು ಕಾಯುತ್ತಿದ್ದಾರೆ. ಚಿತ್ರರಂಗ ಮೊದಲಿನಂತೆ ಆಗುತ್ತಿದ್ದಂತೆ ಸಿನಿಮಾ ಅಧಿಕೃತವಾಗಿ ಘೋಷಿಸಲು ನಿರ್ಧರಿಸಿದ್ದಾರೆ. ಈ ನಡುವೆ ಪೋಸ್ಟರ್ ಹಾಗೂ ಟೈಟಲ್ ಸೋರಿಕೆಯಾಗಿದೆ ಎನ್ನುವ ವಿಚಾರ ಉಪ್ಪಿ ಅವರಿಗೂ ತಲುಪಿದೆ. ಈ ಹಿನ್ನೆಲೆ ಹುಟ್ಟುಹಬ್ಬಕ್ಕೆ ಅಧಿಕೃತ ಮಾಡ್ತಾರಾ ಅಥವಾ ಮತ್ತಷ್ಟು ದಿನ ಕಾಯ್ತಾರಾ ಎನ್ನುವುದು ಕಾದು ನೊಡಬೇಕಿದೆ.

  English summary
  Kannada Actress Rachita Ram Trolled after Upendra's New Directional Movie Poster Leaked.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X