For Quick Alerts
  ALLOW NOTIFICATIONS  
  For Daily Alerts

  ಮನೆ ದೇವರ ದರ್ಶನ ಪಡೆದ 'ಡಿಂಪಲ್ ಕ್ವೀನ್' ರಚಿತಾ ರಾಮ್

  |

  ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲಿನಿಂದಲೂ ದೈವ ಭಕ್ತೆ. ಆಂಜನೇಯನ ಪರಮ ಭಕ್ತೆ. ಹಾಗಾಗಿ, ತಾನು ಮಾಡುವ ಪ್ರತಿಯೊಂದು ಕೆಲಸದಲ್ಲೂ ಆಂಜನೇಯನ ಸ್ಮರಣೆ ಮಾಡ್ತಾರೆ ಬುಲ್ ಬುಲ್ ಬೆಡಗಿ. ಇದೀಗ, ಮೇಲುಕೋಟೆಗೆ ಭೇಟಿ ನೀಡಿರುವ ರಚಿತಾ ರಾಮ್ ಮನೆ ದೇವರ ದರ್ಶನ ಪಡೆದುಕೊಂಡಿದ್ದಾರೆ.

  ಭಾನುವಾರ ಮೇಲುಕೋಟೆಯ ಚೆಲುವರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ದೇವರ ಆಶೀರ್ವಾದ ಪಡೆದಿರುವ ನಟಿ, ಹಣೆಯ ಮೇಲೆ ನಾಮಧರಿಸಿರುವ ಫೋಟೋ ಮತ್ತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಚ್ಚು ಶೇರ್ ಮಾಡಿರುವ ಈ ವಿಡಿಯೋಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

  ಆಟೋ ಚಾಲಕರ ಡಾರ್ಲಿಂಗ್ 'ಡಿಂಪಲ್ ಕ್ವೀನ್' ರಚಿತಾಆಟೋ ಚಾಲಕರ ಡಾರ್ಲಿಂಗ್ 'ಡಿಂಪಲ್ ಕ್ವೀನ್' ರಚಿತಾ

  ಲವ್ ಯೂ ರಚ್ಚು ಅವಘಡ

  ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ 'ಲವ್ ಯೂ ರಚ್ಚು' ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಣ ನಡೆಯುವ ವೇಳೆ ಹೈ ಟೆನ್ಷನ್ ವೈರ್ ತಗುಲಿ ಸ್ಟಂಟ್ ಕಲಾವಿದ ವಿವೇಕ್ ಮೃತಪಟ್ಟಿದ್ದರು. ಈ ಸಂಬಂಧ ಚಿತ್ರದ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್ ಹಾಗೂ ಕ್ರೇನ್ ಆಪರೇಟರ್ ಬಂಧನ ಆಗಿತ್ತು. ಬಳಿಕ ಜಾಮೀನು ಪಡೆದು ಬಿಡುಗಡೆಯೂ ಆಗಿದೆ. ಅಂದು ಘಟನೆ ನಡೆದ ಸಂದರ್ಭದಲ್ಲಿ ರಚಿತಾ ರಾಮ್ ಸ್ಥಳದಲ್ಲಿ ಇರಲಿಲ್ಲ. ಆದರೆ, ರಚ್ಚು ಮೌನದ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸಿದರು.

  ನಂತರ ಬಿಡದಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ನಟಿ, 'ನಾನು ಸ್ಥಳದಲ್ಲಿ ಇರಲಿಲ್ಲ' ಎಂದು ಖಚಿತಪಡಿಸಿದ್ದರು. ಮೃತ ವಿವೇಕ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

  ತಲೈವಿ ತಂಡದಿಂದ ಉಡುಗೊರೆ
  ಕಂಗನಾ ರಣಾವತ್ ಅಭಿನಯಿಸಿರುವ 'ತಲೈವಿ' ಚಿತ್ರತಂಡದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಕಾಂಚೀಪುರಂ ಸೀರೆ ಉಡುಗೊರೆಯಾಗಿ ಕಳುಹಿಸಲಾಗಿತ್ತು. ಈ ಉಡುಗೊರೆಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ನಟಿ, ತಲೈವಿ ಚಿತ್ರಕ್ಕೆ ಶುಭಾಶಯ ಕೋರಿದರು. ''ತಲೈವಿ ತಂಡದಿಂದ ಅದ್ಭುತವಾದ ಉಡುಗೊರೆ ಪಡೆದಿದ್ದೇನೆ. ಬೃಂದಾ ಪ್ರಸಾದ್ ಮತ್ತು ವಿಷ್ಣು ಇಂದುರಿ ಅವರಿಗೆ ವಿಶೇಷ ಧನ್ಯವಾದ. ಇದು ನಿಜಕ್ಕೂ ನನಗೆ ಬಹಳ ವಿಶೇಷ. ತಲೈವಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್'' ಎಂದು ಪೋಸ್ಟ್ ಹಾಕಿದ್ದರು.

  ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಸಿದ ನಟಿ ರಚಿತಾ ರಾಮ್ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಸಿದ ನಟಿ ರಚಿತಾ ರಾಮ್

  ರಚಿತಾ ರಾಮ್ ಮುಂದಿನ ಸಿನಿಮಾಗಳು

  ಡಾರ್ಲಿಂಗ್ ಕೃಷ್ಣ ಜೊತೆ ನಟಿಸುತ್ತಿರುವ 'ಲವ್ ಮೀ ಔರ್ ಹೇಟ್ ಮೀ' ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿದೆ. ಪೂಜೆ ಕಾರ್ಯಕ್ರಮದಲ್ಲಿ ರಚಿತಾ ಭಾಗವಹಿಸಿಲ್ಲ. ಡಾರ್ಲಿಂಗ್ ಕೃಷ್ಣ ಮೊದಲ ದೃಶ್ಯಕ್ಕೆ ಪತ್ನಿ ಮಿಲನ ನಾಗರಾಜ್ ಕ್ಲಾಪ್ ಮಾಡಿ ಶುಭಹಾರೈಸಿದರು.

  Rachita Ram Visits Melukote Cheluvanarayana Swamy Temple

  ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಏಕ್ ಲವ್ ಯಾ' ಸಿನಿಮಾದಲ್ಲಿ ರಚ್ಚು ನಟಿಸಿದ್ದಾರೆ. ಈ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದ್ದು ಹಾಡುಗಳ ಮೂಲಕ ಸದ್ದು ಮಾಡ್ತಿದೆ. ಶೀಘ್ರದಲ್ಲಿ ಬಿಡುಗಡೆ ದಿನಾಂಕವೂ ಅಧಿಕೃತವಾಗಿ ಘೋಷಣೆಯಾಗಲಿದೆ. ಪುಷ್ಪಕ ವಿಮಾನ ಚಿತ್ರದ ನಂತರ ರಮೇಶ್ ಅರವಿಂದ್ ಜೊತೆ ರಚಿತಾ ರಾಮ್ ನಟಿಸಿರುವ ಎರಡನೇ ಸಿನಿಮಾ '100'. ಈ ಚಿತ್ರವೂ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

  ಕನ್ನಡದ ಕ್ವೀನ್ ತೆಲುಗಿನಲ್ಲಿ ಚೊಚ್ಚಲ ಚಿತ್ರ ಮಾಡುತ್ತಿದ್ದಾರೆ. 'ಸೂಪರ್ ಮಚ್ಚಿ' ಎಂಬ ಚಿತ್ರದಲ್ಲಿ ರಚಿತಾ ನಾಯಕಿಯಾಗಿ ನಟಿಸಿದ್ದಾರೆ. ಶೂಟಿಂಗ್ ಮುಗಿಸಿದೆ. ಪ್ರಜ್ವಲ್ ದೇವರಾಜ್ ಜೊತೆ 'ವೀರಂ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಸತೀಶ್ ನೀನಾಸಂ ಜೊತೆ 'ಮ್ಯಾಟ್ನಿ' ಚಿತ್ರ ಮಾಡುತ್ತಿದ್ದಾರೆ. ಅಜಯ್ ರಾವ್ ಜೊತೆ ಲವ್ ಯೂ ರಚ್ಚು, ಏಪ್ರಿಲ್, ಮಾನ್ಸೂನ್ ರಾಗಾ, ಲಿಲ್ಲಿ, ಬ್ಯಾಡ್ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ರವಿ ಭೋಪಣ್ಣ, ಡಾಲಿ, ಪಂಕಜ ಕಸ್ತೂರಿ ಹೀಗೆ ಹತ್ತು ಹಲವು ಪ್ರಾಜೆಕ್ಟ್‌ಗಳಲ್ಲಿ ರಚಿತಾ ಬ್ಯುಸಿ ಇದ್ದಾರೆ.

  English summary
  Kannada Actress, Dimple Queen Rachita Ram Visits Melukote Cheluvanarayana Swamy Temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X