For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

  By Pavithra
  |

  ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗದ ಪ್ರೇಕ್ಷಕರ ಅಭಿಮಾನವನ್ನ ಪಡೆದ ನಟಿ ರಚಿತಾ ರಾಮ್. ಅಭಿನಯಿಸಿದ ಮೊದಲ ಚಿತ್ರದಲ್ಲೇ ಅಭಿಮಾನಿಗಳಿಂದ ಡಿಂಪಲ್ ಕ್ವೀನ್ ಎಂದು ಬಿರುದು ಪಡೆದುಕೊಂಡ ನಟಿ. ಸದ್ಯ ಡಿಂಪಲ್ ಕ್ವೀನ್ ಹೊಸ ಸಾಹಸವೊಂದಕ್ಕೆ ಮುಂದಾಗಿದ್ದಾರೆ.

  ಬುಲ್ ಬುಲ್ ನಿಂದ ಪ್ರಾರಂಭವಾದ ರಚಿತಾ ಸಿನಿಮಾ ಜರ್ನಿಯಲ್ಲಿ ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ಅಭಿಯಿಸಿದ್ದಾರೆ. ಸುಮಾರು ಹನ್ನೊಂದು ಚಿತ್ರಗಳಲ್ಲಿ ಅಭಿನಯಿಸಿದ್ದರೂ ರಚಿತಾ ಇಷ್ಟು ದಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಪ್ರಯತ್ನ ಮಾಡಿರಲಿಲ್ಲ.

  ಯಶ್, ಉಪ್ಪಿ, ವಿಷ್ಣು ನಂತರ ಶಕ್ತಿದೇವತೆ ಮೊರೆ ಹೋದ ರಚಿತಾ ರಾಮ್

  ಆದರೆ ಈಗ ರಚಿತಾ ರಾಮ್ ದುನಿಯಾ ವಿಜಯ್ ಜೊತೆ ಅಭಿನಯಿಸುತ್ತಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ತಾವೇ ಡಬ್ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ರಚಿತಾ ವಾಯ್ಸ್ ಡಬ್ಬಿಂಗ್ ಮಾಡುತ್ತಿರುವ ವಿಚಾರವನ್ನ ನಿರ್ದೇಶಕ ಪ್ರೀತಂ ಗುಬ್ಬಿ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.

  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಈ ಹೊಸ ಪ್ರಯತ್ನ ಹೇಗಿರುತ್ತೆ? ಇಷ್ಟು ದಿನ ರಚಿತಾ ನಟನೆಗೆ ಬೇರೆಯವರ ಧ್ವನಿ ಕೇಳಿದ್ದ ಅಭಿಮಾನಿಗಳು ಜಾನಿ ಜಾನಿ ಎಸ್ ಪಪ್ಪಾ ಚಿತ್ರದ ಮೂಲಕ ರಚಿತಾ ರಾಮ್ ಅವರ ಓರಿಜಿನಲ್ ವಾಯ್ಸ್ ಕೇಳಬಹುದಾಗಿದೆ.

  English summary
  Kannada Actress Rachitha Ram dubbing first time for 'Johny Johny Yes Pappa' movie. Preetam Gubbi is directing the Johnny Johnny yes Pappa movie, Duniya Vijay and Rachita Ram acting in this movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X