»   » ಸ್ಯಾಂಡಲ್ ವುಡ್ ನಾಯಕಿಯರಿಗೇಕೆ ಈ ಡ್ರೆಸ್ ಮೇಲೆ ಅಷ್ಟೊಂದು ಮೋಹ.?

ಸ್ಯಾಂಡಲ್ ವುಡ್ ನಾಯಕಿಯರಿಗೇಕೆ ಈ ಡ್ರೆಸ್ ಮೇಲೆ ಅಷ್ಟೊಂದು ಮೋಹ.?

Posted By:
Subscribe to Filmibeat Kannada
ರೆಡ್ ಡ್ರೆಸ್ ಹಿಂದೆ ಬಿದ್ದಿರುವ ಸ್ಯಾಂಡಲ್ ವುಡ್ ನಾಯಕಿಯರು | ಯಾಕೆ? | Filmibeat Kannada

ಸಿನಿಮಾ ನಾಯಕಿಯರಿಗಷ್ಟೇ ಅಲ್ಲ... ಸಾಮಾನ್ಯವಾಗಿ ಹುಡುಗಿಯರಿಗೆ ಹೊಸ ಸ್ಟೈಲ್ ಡ್ರೆಸ್ ಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ಇನ್ನೂ ನಾಯಕಿಯರು ಅಂದ್ರೆ ಸಾಮಾನ್ಯ ಜನರಿಗಿಂತಲೂ ಹೆಚ್ಚಾಗಿಯೇ ಇರುತ್ತೆ. ಲಕ್ಷಾಂತರ ಜನರು ಪ್ರತಿನಿತ್ಯ ಸ್ಟಾರ್ ಹೀರೋಯಿನ್ ಗಳನ್ನ ಫಾಲೋ ಮಾಡುತ್ತಿರುತ್ತಾರೆ. ಅದರಿಂದ ನಾಯಕಿಯರು ಯಾವಾಗಲೂ ವಿಶೇಷವಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕಾಗುತ್ತೆ.

ನಾಯಕಿಯರು ಸಿನಿಮಾದಲ್ಲಾಗಲಿ ಅಥವಾ ಖಾಸಗಿ ಕಾರ್ಯಕ್ರಮದಲ್ಲಾಗಲಿ ಧರಿಸುವ ಉಡುಪನ್ನ ಸಾಕಷ್ಟು ಜನರು ಗಮನಿಸಿರುತ್ತಾರೆ. ನಾಯಕಿಯರನ್ನ ಫಾಲೋ ಮಾಡುವುದರ ಜೊತೆಯಲ್ಲಿ ಅವರ ಸ್ಟೈಲ್ ಕಾಪಿ ಮಾಡುವ ಅದೆಷ್ಟೋ ಅಭಿಮಾನಿಗಳು ಇದ್ದೇ ಇರ್ತಾರೆ.

ಈಗ ಡ್ರೆಸ್ ಗಳ ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ ಕನ್ನಡ ಸಿನಿಮಾದ ಮೂರು ನಾಯಕಿಯರು ಒಂದೇ ಡ್ರೆಸ್ ಹಿಂದೆ ಬಿದ್ದಿದ್ದಾರೆ.! ಆಸೆ ಪಟ್ಟಿದ್ದರೆ ಓಕೆ, ಆದರೆ ಮೂವರು ಅದೇ ಡ್ರೆಸ್ ನ ಧರಿಸಿ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಯಾರು ಆ ಮೂವರು ನಾಯಕಿಯರು ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ.....

ಚಿತ್ರ ಕೃಪೆ-ರಾಘವ್

ಎಲ್ಲರಿಗೂ ಬೇಕಂತೆ ರೆಡ್ ಡ್ರೆಸ್

ನಾಯಕಿಯರು ರೆಡ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡರೆ ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಅನ್ನೋದು ಫ್ಯಾಷನ್ ಪಂಡಿತರ ಮಾತು. ಆದ್ರೆ ಒಂದೇ ತರಹ ಬಟ್ಟೆ ಎಲ್ಲರಿಗೂ ಬೇಕು ಅಂದರೆ ಹೇಗೆ.? ಚಂದನವನದ ಮೂವರು ಚೆಲುವೆಯರು ಒಂದೇ ಬಟ್ಟೆ ಹಿಂದೆ ಬಿದ್ದಿದ್ದಾರೆ. ರಚಿತಾ ಹಾಕಿದ್ದ ಗೌನ್ ನಲ್ಲೇ ಮಾನ್ವಿತಾ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಿಗೂ ಮುಂಚೆಯೇ ಈ ಗೌನ್ ನ ಶೃತಿ ಹರಿಹರನ್ ಧರಿಸಿದ್ರಂತೆ.!

ಬಿಕಿನಿ' ಬಗ್ಗೆ ಮಾತನಾಡಿದ ಡಿಂಪಲ್ ಕ್ವೀನ್ ರಚಿತಾ ರಾಮ್.!

ಶೃತಿ ಹಾಕಿದ್ದ ಡ್ರೆಸ್ ಹಾಕಿದ್ರಾ ರಚಿತಾ.?

ಮೊನ್ನೆ ಮೊನ್ನೆಯಷ್ಟೇ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ರೆಡ್ ಕಲರ್ ಡ್ರೆಸ್ ನಲ್ಲಿ ರಚಿತಾ ಮಿಂಚಿದ್ದ ಫೋಟೋ ಸಖತ್ ವೈರಲ್ ಆಗಿತ್ತು. ರೆಡ್ ಡ್ರೆಸ್ ನಲ್ಲಿ ರಚಿತಾ ಸಖತ್ ಹಾಟ್ ಆಗಿ ಕಾಣಿಸಿಕೊಳ್ತಾರೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿದ್ವು. ರಚಿತಾ ಧರಿಸಿದ್ದ ರೀತಿಯ ಡ್ರೆಸ್ ನ ಮಾನ್ವಿತಾ ಕೂಡ ಹಾಕಿದ್ದಾರೆ.

'ಟಗರು' ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಮಾನ್ವಿತಾ

ಒಂದೇ ತರಹದ ಬಟ್ಟೆ ನೋಡಿ ಶಾಕ್

ರಚಿತಾ ಫೋಟೋ ಶೂಟ್ ಮಾಡಿಸಿದ ಕೆಲವೇ ದಿನಗಳಲ್ಲಿ ಮಾನ್ವಿತಾ ಕೂಡ ಅದೇ ತರಹದ ಡ್ರೆಸ್ ನಲ್ಲಿ ಕಲರ್ಸ್ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸ್ಪೆಷಲ್ ಅಂದ್ರೆ ಮಾನ್ವಿತಾ ಸ್ಟೇಜ್ ಮೇಲೆ ರಚಿತಾ ಅಭಿನಯದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಡಿಸೈನರ್ ಮಾಡಿದ್ರಾ ಎಡವಟ್ಟು.?

ನಮಗೆ ಗೊತ್ತಿರುವ ಪ್ರಕಾರ ಇವರಿಬ್ಬರು ಮಾತ್ರ ಒಂದೇ ಡ್ರೆಸ್ ನಲ್ಲಿ ಮಿಂಚಿಲ್ಲ. ನಟಿ ಶೃತಿ ಹರಿಹರನ್ ಕೂಡ ಇದೇ ಡ್ರೆಸ್ ನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದಾರೆ. ಈ ಮೂವರು ಸ್ಟಾರ್ ನಟಿಯರಿಗೆ ಒಬ್ಬರೇ ವಸ್ತ್ರವಿನ್ಯಾಸಕಿ ಅನ್ನೋದೇ ಈ ಗೊಂದಲಕ್ಕೆ ಕಾರಣ. ಅದೇನೇ ಇರಲಿ ನಾಯಕಿಯರು ಅಂದಾಗ ಅವ್ರ ಔಟ್ ಫಿಟ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತೆ. ಇಲ್ಲವಾದಲ್ಲಿ ಇಂತಹ ಎಡವಟ್ಟುಗಳಾಗಿ ಅಭಿಮಾನಿಗಳು ಅಯ್ಯಯ್ಯೋ ಅನ್ನುವಂತೆ ಆಗುತ್ತೆ.

English summary
In pics: Kannada Actress Rachita Ram, Manvitha Harish and Sruthi Hariharan sizzels in the similar outfit. ಒಂದೇ ತರಹದ ಬಟ್ಟೆ ಧರಿಸಿದ ಸ್ಯಾಂಡಲ್ ವುಡ್ ಮೂವರು ಖ್ಯಾತ ನಾಯಕಿಯರು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada