Just In
- 24 min ago
ಕೊರೊನಾ ಸೋಂಕಿನಿಂದ ಬದಲಾಗಿದ್ದ ತಮನ್ನಾ ಈಗ ಮತ್ತೆ ಸಹಜ ಸ್ಥಿತಿಗೆ
- 1 hr ago
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- 2 hrs ago
ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಗ್ಗೆ 'ಬಿಗ್ ಬಾಸ್' ಅಕ್ಷತಾ ಪಾಂಡವಪುರ ಹೇಳಿದ್ದೇನು?
- 10 hrs ago
ಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮ
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Automobiles
ವಿಭಿನ್ನ ಅನುಭವ ನೀಡುವ ಪೈಲಟ್ ಉದ್ಯೋಗದ ಬಗೆಗಿನ ರೋಚಕ ಸಂಗತಿಗಳಿವು
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ರಚಿತಾ ರಾಮ್
ರಚಿತಾ ರಾಮ್ ಸ್ಯಾಂಡಲ್ ವುಡ್ ನ ಬ್ಯುಸಿಯಸ್ಟ್ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್ ನಲ್ಲಿ ನಿರವಾಗಿರುವ ರಚಿತಾ ರಾಮ್ ಒಂದು ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ. ಪದೇ ಪದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ರಚಿತಾ ಈ ಬಾರಿ ಮತ್ತೆ ಅಪ್ಪು ಫ್ಯಾನ್ಸ್ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ವಿಚಾರದಲ್ಲಿ ಡಿಂಪಲ್ ಕ್ವೀನ್ ಯಾವಾಗಲು ವಿವಾದಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಹಿಂದೆ ಪವರ್ ಸ್ಟಾರ್ ಅಭಿನಯದ 'ರಣವಿಕ್ರಮ', 'ಚಕ್ರವ್ಯೂಹ' ಮತ್ತು 'ನಟಸಾರ್ವಭೌಮ' ಸಿನಿಮಾ ಸಮಯದಲ್ಲೂ ರಚಿತಾ ರಾಮ್ ವಿರುದ್ಧ ಸಮರ ಸಾರಿದ್ದರು ಅಪ್ಪು ಫ್ಯಾನ್ಸ್.
ಯುವರತ್ನ' ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ನಿರ್ದೇಶಕ
ಸದ್ಯ ಮತ್ತೊಮ್ಮೆ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಗಿದ್ದು. ನಿರೂಪಕಿ ಅನುಶ್ರೀ. ಹೌದು, ಅನುಶ್ರೀ ಇತ್ತೀಚಿಗಷ್ಟೆ ಅನುಶ್ರೀ ಯೂ ಟ್ಯೂಬ್ ಚಾನೆಲ್ ಪ್ರಾರಂಭ ಮಾಡಿದ್ದಾರೆ. ಸಿನಿ ತಾರೆಯರ ಸಂದರ್ಶನವೇ ಈ ಚಾನೆಲ್ ವಿಶೇಷ. ಇತ್ತೀಚಿಗಷ್ಟೆ ನಟಿ ರಚಿತಾ ರಾಮ್ ಸಂದರ್ಶನ ಮಾಡಿದ್ದರು ಅನುಶ್ರೀ. ಪವರ್ ಸ್ಟಾರ್ ಬಗ್ಗೆ ರಚಿತಾ ಹೇಳಿರುವ ಮಾತು ಈಗ ವಿವಾದ ಕೇಂದ್ರ ಬಿಂದು ಆಗಿದ್ದಾರೆ. ಹಾಗಾದ್ರೆ ರಚಿತಾ ಹೇಳಿದ್ದಾರು ಏನು? ಮುಂದೆ ಓದಿ..

ಮತ್ತೊಮ್ಮೆ ಅಪ್ಪು ಫ್ಯಾನ್ಸ್ ಕೆರಳಿಸಿದ್ರಾ ರಚಿತಾ?
ಅನುಶ್ರೀ ಮತ್ತು ರಚಿತಾ ರಾಮ್ ನಡುವಿನ ಸಂದರ್ಶನ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪವರ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರಲ್ಲಿ ಉತ್ತಮ ಡಾನ್ಸರ್ ಯಾರು ಎಂದು ರಚಿತಾ ಅವರನ್ನು ಕೇಳಿದಾಗ "ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸಿದ್ದೇನೆ ರಾಕಿಂಗ್ ಸ್ಟಾರ್ ಅಂತ ಹೇಳಿದ್ದಾರೆ" ರಚಿತಾ ಹೇಳಿಕೆ ಈಗ ಅಪ್ಪು ಅಭಿಮಾನಿಗಳನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಅಪ್ಪು ನಿರ್ಮಾಣದ 'ಕವಲುದಾರಿ' ರಿಮೇಕ್ ಗೆ ಹೆಚ್ಚಿದ ಬೇಡಿಕೆ

ಡವ್ ರಾಣಿ ಅಂತೆ ರಚಿತಾ
ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಅಭಿಮಾನಿಗಳು ಡವ್ ರಾಣಿ ರಚಿತಾ ಎಂದು ದೊಡ್ಡ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ರಚಿತಾ ರಾಮ್ ವಿರುದ್ಧ ಕಮೆಂಟ್ಸ್ ಗಳ ಸುರಿಮಳೆಯೆ ಹರಿದು ಬರುತ್ತಿದೆ. ಮೊದಲು ಸ್ಯಾಂಡಲ್ ವುಡ್ ನಲ್ಲಿ ಯಾರು ಚೆನ್ನಾಗಿ ಡಾನ್ಸ್ ಮಾಡುತ್ತಾರೆ ಎಂದು ತಿಳಿದುಕೊಳ್ಳಿ, ಅಪ್ಪು ಬಗ್ಗೆ ಮಾತನಾಡಲು ಯೋಗ್ಯತೆ ಬೇಕು, ಡವ್ ರಾಣಿ, ಬಕೆಟ್ ರಾಣಿ ಎಂತೆಲ್ಲ ತರಹೇವಾರಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಬಾಸ್ ಗೆ ಮತ್ತು ಬಾಸ್ ಫ್ಯಾನ್ಸ್ ಗೆ ಕ್ಷಮೆ ಕೇಳಬೇಕೆಂದು ಪುನೀತ್ ಅಭಿಮಾನಿಗಳು ಪಟ್ಟುಹಿಡಿದ್ದಾರೆ.

ಪುನೀತ್ ಜೊತೆ ರಚಿತಾ ಬೇಡ ಅಭಿಯಾನ
ಈ ಹಿಂದೆ ಕೂಡ ರಚಿತಾ ರಾಮ್ ವಿರುದ್ಧ ಅಪ್ಪು ಅಭಿಮಾನಿಗಳು ದೊಡ್ಡ ಅಭಿಯಾನ ಮಾಡಿದ್ದರು. ಪವರ್ ಸ್ಟಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದಲ್ಲಿ ಡಿಂಪಲ್ ಕ್ವೀನ್ ನಾಯಕಿಯಾಗಿ ಆಯ್ಕೆ ಆಗುತ್ತಿದಂತೆ ಅಭಿಮಾನಿಗಳು ರೊಚ್ಚಿಗೆದ್ದರು. ಪವರ್ ಸ್ಟಾರ್ ಜೊತೆ ರಚಿತಾ ರಾಮ್ ಅಭಿನಯಿಸುವುದು ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದರು. ಆದ್ರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಚಿತಾ ಯಶಸ್ವಿಯಾಗಿ 'ಚಕ್ರವ್ಯೂಹ' ಭೇದಿಸಿದ್ದರು. ಅಲ್ಲದೆ ಮತ್ತೆ ಎರಡನೆ ಬಾರಿ 'ನಟಸಾರ್ವಭೌಮ' ಚಿತ್ರದಲ್ಲು ಪುನೀತ್ ಗೆ ನಾಯಕಿಯಾಗಿ ಕಾಣಿಸಿಕೊಂಡರು.

ರಚಿತಾ ಕಂಡ್ರೆ ಅಪ್ಪು ಫ್ಯಾನ್ಸ್ ಸಿಡಿದೇಳುವುದೇಕೆ
ರಚಿತಾ ರಾಮ್ ಕಂಡ್ರೆ ಅಪ್ಪು ಅಭಿಮಾನಿಗಳು ಯಾವಾಗಲು ಸಿಡಿದೇಳುತ್ತಾರೆ. ಇದಕ್ಕೆ ಮೂಲಕ ಕಾರಣವಾಗಿದ್ದು 'ರಣವಿಕ್ರಮ' ಸಿನಿಮಾ. ಈ ಸಿನಿಮಾಗೆ ಮೊದಲು ರಚಿತಾ ರಾಮ್ ನಾಯಕಿ ಅಂತ ಹೇಳಲಾಗಿತ್ತು. ಆದ್ರೆ ರಚಿತಾ ಅದೇ ಸಮಯದಲ್ಲಿ ದರ್ಶನ್ ಅಭಿನಯದ 'ಅಂಬರೀಶ' ಮತ್ತು 'ರನ್ನ' ಸಿನಿಮಾದಲ್ಲಿ ಬ್ಯುಸಿ ಇದ್ದರಂತೆ, ಈ ಕಾರಣದಿಂದ ರಚಿತಾ 'ರಣವಿಕ್ರಮ' ಸಿನಿಮಾ ಕೈಬಿಟ್ಟಿದ್ದರು ಎಂದು ಹೇಳಾಗುತ್ತಿದೆ. ಅಲ್ಲಿಂದ ರಚಿತಾ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾದ್ದಾರೆ. ಇದು ಇಂದಿಗೂ ಹಾಗೆ ಮುಂದುವರೆದುಕೊಂಡು ಬರುತ್ತಿದೆ. ಆದ್ರೆ ಇದಕ್ಕೆ ಸರಿಯಾಗಿ ರಚಿತಾ ಹೇಳಿಕೆಗಳು ಅಪ್ಪು ಅಭಿಮಾನಿಗಳನ್ನು ಕೆರಳಿಸುವಂತಿವೆ. ಇದು ಇನ್ನು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ.