»   » ಎಲ್ಲಿ ಹೋದರು ಪೂಜಾ ಗಾಂಧಿ ಸಹೋದರಿ ರಾಧಿಕಾ ಗಾಂಧಿ.?

ಎಲ್ಲಿ ಹೋದರು ಪೂಜಾ ಗಾಂಧಿ ಸಹೋದರಿ ರಾಧಿಕಾ ಗಾಂಧಿ.?

Posted By:
Subscribe to Filmibeat Kannada
Pooja Gandhi sister Radhika Gandhi is not interested to continue in film industry |Filmibeat Kannada

'ರಾಧಿಕಾ ಗಾಂಧಿ..' ಈ ಹೆಸರನ್ನು ಎಲ್ಲೊ ಕೇಳಿದ್ದೀವಿ ಅಂತ ನಿಮಗೆ ಅನಿಸಬಹುದು. ಇದು ಬೇರೆ ಯಾರೂ ಅಲ್ಲ.. ಮಳೆ ಹುಡುಗಿ ಪೂಜಾ ಗಾಂಧಿ ಅವರ ತಂಗಿಯ ಹೆಸರು. 'ದಂಡುಪಾಳ್ಯ 2' ಚಿತ್ರದ ನಂತರ ನಟಿ ಪೂಜಾ ಗಾಂಧಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಪೂಜಾ ಗಾಂಧಿ ಸಹೋದರಿ ಮಾತ್ರ ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ.

'ಪೂಜಾ ಗಾಂಧಿ ಓಡಿ ಹೋಗಿದ್ದಾರೆ...' ಅಂತ ಸುಮ್ಮನೆ ಏನೇನೋ ಸುದ್ದಿ ಮಾಡ್ಬೇಡಿ!

ಅಕ್ಕನ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದ ರಾಧಿಕಾ ಗಾಂಧಿ ಕನ್ನಡದಲ್ಲಿ ಕೆಲ ಸಿನಿಮಾಗಳನ್ನು ಮಾಡಿದರು. ಆದರೆ ಅವರ ಯಾವ ಸಿನಿಮಾವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಪೂಜಾ ಗಾಂಧಿ ಅವರಿಗೆ ಸಿಕ್ಕ ಸಕ್ಸಸ್ ತಂಗಿಗೆ ಸಿಗಲಿಲ್ಲ. ಬಳಿಕ ಕನ್ನಡದಲ್ಲಿ ಕಣ್ಮರೆಯಾದ ಈ ಚೆಲುವೆ ಪರಭಾಷೆಯಲ್ಲಿಯೂ ಹೆಚ್ಚು ಕಾಣಿಸಿಕೊಳಲಿಲ್ಲ.

Radhika Gandhi is not interested to continue in film industry

ಯಾವುದೇ ಕಾರ್ಯಕ್ರಮದಲ್ಲಾಗಲಿ, ಅಕ್ಕನ ಚಿತ್ರದ ಪ್ರೆಸ್ ಮೀಟ್ ಗಳಲ್ಲಾಗಲಿ ಆಕೆ ಭಾಗಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಅವರು ಸಕ್ರಿಯವಾಗಿಲ್ಲ. ಅವರ ಹೆಸರಿನ ಫೇಸ್ ಬುಕ್ ಖಾತೆಗಳಲ್ಲಿ ಪೋಸ್ಟ್ ಹಾಕಿ ವರ್ಷಗಳೇ ಉರುಳಿವೆ.

ಸದ್ಯದ ಸುದ್ದಿ ಪ್ರಕಾರ ರಾಧಿಕಾ ಅವರು ಸಿನಿಮಾ ಸಹವಾಸ ಬೇಡ ಅಂತ ನಿರ್ಧರಿಸಿದ್ದಾರಂತೆ. ಜೊತೆಗೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದಾರಂತೆ. ಸಿನಿಮಾಗಳಲ್ಲಿ ರಾಧಿಕಾ ಗಾಂಧಿ ಆಸಕ್ತಿ ಕಳೆದುಕೊಂಡಿದ್ದು, ಮುಂದೆಯೂ ಸಿನಿಮಾವನ್ನು ಮಾಡದಿರುವ ನಿರ್ಧಾರ ಮಾಡಿದ್ದಾರಂತೆ.

English summary
Kannada Actress Pooja Gandhi sister Radhika Gandhi is not interested to continue in film industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada