»   » ಹೊಸ ಮದುವೆ ಗುಲ್ಲು: ನಟಿ ರಾಧಿಕಾ ಕುಮಾರಸ್ವಾಮಿ ಬಾಯ್ಬಿಟ್ಟ ಸತ್ಯ ಏನು?

ಹೊಸ ಮದುವೆ ಗುಲ್ಲು: ನಟಿ ರಾಧಿಕಾ ಕುಮಾರಸ್ವಾಮಿ ಬಾಯ್ಬಿಟ್ಟ ಸತ್ಯ ಏನು?

Posted By:
Subscribe to Filmibeat Kannada

ತೆರೆಮೇಲೆ ನಟಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡು ವರ್ಷವೇ ಉರುಳಿದೆ. ಸ್ಕ್ರೀನ್ ಮೇಲೆ ನಾಪತ್ತೆ ಆಗುತ್ತಿದ್ದಂತೆ ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಸೃಷ್ಟಿಯಾದ ಅಂತೆ-ಕಂತೆ ಪುರಾಣಗಳು ಒಂದೆರಡಲ್ಲ.!

''ರಾಧಿಕಾ ಕುಮಾರಸ್ವಾಮಿ ದಾಂಪತ್ಯದಲ್ಲಿ ಅಪಸ್ವರ ಎದ್ದಿದ್ಯಂತೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಧುಮುಕಲಿದ್ದಾರಂತೆ, ಬೆಂಗಳೂರು ಬಿಟ್ಟು ಮಂಗಳೂರಿನಲ್ಲಿ ಸೆಟಲ್ ಆಗಿದ್ದಾರಂತೆ, ಇಟ್ಟಿಗೆ ಬಿಜಿನೆಸ್ ಶುರು ಮಾಡಿದ್ದಾರಂತೆ'' ಎಂಬ ಗುಲ್ಲು ಹರಿದಾಡಿತ್ತಾದರೂ, ಯಾವುದರ ಬಗ್ಗೆಯೂ ಇಲ್ಲಿಯವರೆಗೂ ರಾಧಿಕಾ ಕುಮಾರಸ್ವಾಮಿ ತುಟಿ ಎರಡು ಮಾಡಿರಲಿಲ್ಲ. [ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?]

ಈಗ ನಟಿ ರಾಧಿಕಾ ಕುಮಾರಸ್ವಾಮಿ ಮರು ಮದುವೆ ಆಗಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ಬಗ್ಗೆ ಸ್ವತಃ ನಟಿ ರಾಧಿಕಾ ಕುಮಾರಸ್ವಾಮಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

ಮರು ಮದುವೆ ಆಗಿದ್ದಾರಾ ನಟಿ ರಾಧಿಕಾ ಕುಮಾರಸ್ವಾಮಿ?

ನಟಿ ರಾಧಿಕಾ ಕುಮಾರಸ್ವಾಮಿ ಮರು ಮದುವೆ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ 'ಫೋಟೋ' ಸಮೇತ ಹರಿದಾಡುತ್ತಿದೆ. ಆದ್ರೆ ಇದು ಎಷ್ಟು ಸತ್ಯ ಎಂಬ ಪ್ರಶ್ನೆಗೆ ಖುದ್ದು ರಾಧಿಕಾ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ.

ಯಾರು ವಿವೇಕ್ ರಾಜ್?

''ಈ ಸುದ್ದಿ ಶುದ್ಧ ಸುಳ್ಳು. ಇದನ್ನ ಯಾರು ಹಬ್ಬಿಸಿದ್ದಾರೋ, ಗೊತ್ತಿಲ್ಲ. ವಿವೇಕ್ ರಾಜ್ ರವರು ನನ್ನ ಅಣ್ಣನ ಕ್ಲೋಸ್ ಫ್ರೆಂಡ್. ನಾವೆಲ್ಲರೂ ತುಂಬ ವರ್ಷಗಳಿಂದ ಸ್ನೇಹಿತರು. ವಿವೇಕ್ ರಾಜ್ ನಮಗೆ ಫ್ಯಾಮಿಲಿ ಫ್ರೆಂಡ್ ಇದ್ದ ಹಾಗೆ'' ಅಂತ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟ ಪಡಿಸಿದ್ದಾರೆ. [ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹಬ್ಬಿದ ಗಾಸಿಪ್ ಸುಳ್ಳು!]

ಕೆಮ್ಮಣ್ಣುಗುಂಡಿಯಲ್ಲಿ ತೆಗೆಸಿಕೊಂಡ ಫೋಟೋಗಳು ಅವು

''ವಿವೇಕ್ ರಾಜ್ ಕೃಷಿ ಮಾಡುತ್ತಿದ್ದಾರೆ. ನನಗೂ ಕೂಡ ಬಿಜಿನೆಸ್ ನಲ್ಲಿ ತುಂಬಾ ಆಸಕ್ತಿ ಇದೆ. ಹೀಗಾಗಿ ಕೃಷಿ ನೋಡಲು ನಾವು ಕೆಮ್ಮಣ್ಣುಗುಂಡಿಗೆ ಹೋಗಿದ್ವಿ. ಅಲ್ಲಿ ತೆಗೆಸಿಕೊಂಡಿರುವ ಫೋಟೋಗಳು ಅವು. ಅವರು ಮಾತ್ರ ಅಲ್ಲ, ತುಂಬಾ ಜನ ಫೋಟೋ ತೆಗೆಸಿಕೊಂಡಿದ್ದಾರೆ. ಇದಾಗಿದ್ದು ಒಂದುವರೆ ವರ್ಷದ ಹಿಂದೆ, ಈಗ ಅದನ್ನ ಯಾರೋ ಫೇಸ್ ಬುಕ್ ನಲ್ಲಿ ಹಾಕಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ'' - ರಾಧಿಕಾ ಕುಮಾರಸ್ವಾಮಿ, ನಟಿ

ಮನಸ್ಸಿಗೆ ನೋವಾಗಿದೆ

''ನನ್ನ ಬಗೆ ಕಥೆ ಕಟ್ಟಿದಾಗ ಮನಸ್ಸಿಗೆ ತುಂಬಾ ನೋವಾಗುತ್ತೆ. ನಾನು ಎಲ್ಲರ ಜೊತೆ ಫ್ರೆಂಡ್ಲಿ ಆಗಿ ನಗುನಗುತ್ತಾ ಇರುತ್ತೀನಿ. ಮುಖ ಗಂಟು ಹಾಕೊಂಡು ಕೆಲಸ ಮಾಡಲು ಬರಲ್ಲ. ಹೀಗಿದ್ದರೂ, ನನ್ನ ಮೇಲೆ ಯಾಕೆ ಹೀಗೆ ಸುದ್ದಿ ಹಬ್ಬಿಸುತ್ತಾರೆ ಗೊತ್ತಿಲ್ಲ'' - ರಾಧಿಕಾ ಕುಮಾರಸ್ವಾಮಿ, ನಟಿ [ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?]

ಬೇಜಾರು ಆಗುತ್ತದೆ

''ತುಂಬಾ ಬೇಜಾರ್ ಆಗ್ತಿದೆ. ಫ್ಯಾಮಿಲಿಗೆ ಉತ್ತರ ಕೊಡಬೇಕು. ಅಭಿಮಾನಿಗಳಿಗೆ ಉತ್ತರ ಕೊಡಬೇಕು. ನನಗೆ ಮಗು ಕೂಡ ಇದೆ. ನನಗೆ ಇದರ ಬಗ್ಗೆ ಮಾತನಾಡಲು ತುಂಬಾ ಬೇಜಾರ್ ಆಗುತ್ತೆ'' - ರಾಧಿಕಾ ಕುಮಾರಸ್ವಾಮಿ, ನಟಿ [ನಟನೆಗೆ ಗುಡ್ ಬೈ ಹೇಳ್ತಾರಂತೆ ನಟಿ ರಾಧಿಕಾ ಕುಮಾರಸ್ವಾಮಿ.!]

ಬೆಂಗಳೂರಿನಲ್ಲಿಯೇ ಇದ್ದೀನಿ.

''ನಾನು ಬೆಂಗಳೂರಿನಲ್ಲಿ ಇಲ್ಲ. ಮಂಗಳೂರಿನಲ್ಲಿ ಸೆಟಲ್ ಆಗಿದ್ದೀನಿ ಅಂತೆಲ್ಲಾ ಯಾರೋ ಗಾಸಿಪ್ ಹಬ್ಬಿಸಿದರು, ಆದರೆ ಇದು ಯಾವುದೂ ಸತ್ಯ ಅಲ್ಲ. ನಾನು ಬೆಂಗಳೂರಿನಲ್ಲೇ ಇದ್ದೀನಿ'' - ರಾಧಿಕಾ ಕುಮಾರಸ್ವಾಮಿ, ನಟಿ [ರಾಧಿಕಾ ಕುಮಾರಸ್ವಾಮಿ ನಟನೆ ಮಾಡಲ್ಲ ಅಂದಿದ್ಯಾಕೆ? ಕಾರಣ ಇದೇನಾ?]

ದಾಂಪತ್ಯ?

''ನನ್ನ ದಾಂಪತ್ಯದಲ್ಲಿ ಸಮಸ್ಯೆ ಆಗಿದೆ ಅಂತೆಲ್ಲಾ ಮಾತನಾಡುತ್ತಾರೆ. ಅದು ನನ್ನ ವೈಯುಕ್ತಿಕ ವಿಷಯ. ಈ ಬಗ್ಗೆ ಬೇರೆಯವರು ಮಾತನಾಡುವ ಅವಶ್ಯಕತೆ ಇಲ್ಲ. ನಾನು ಮತ್ತು ಅವರೇ ಮಾತನಾಡುತ್ತೇವೆ'' - ರಾಧಿಕಾ ಕುಮಾರಸ್ವಾಮಿ, ನಟಿ

ಚಿತ್ರರಂಗಕ್ಕೆ ಗುಡ್ ಬೈ?

''ನಾನು ಚಿತ್ರರಂಗಕ್ಕೆ ಗುಡ್ ಬೈ ಹೇಳಿಲ್ಲ. ಒಂದ್ ಸಿನಿಮಾ ಮಾಡಬೇಕು ಅಂದ್ರೆ ಮಿನಿಮಂ ಆರು ತಿಂಗಳು ಪ್ರಿಪರೇಶನ್ ಬೇಕು. ಸಿನಿಮಾದಲ್ಲೂ ನನಗೆ ಅವಕಾಶ ಬರುತ್ತಿದೆ. ಆದ್ರೆ ಸದ್ಯಕ್ಕೆ ಯಾವುದೂ ಮಾಡುತ್ತಿಲ್ಲ ಅಷ್ಟೆ'' - ರಾಧಿಕಾ ಕುಮಾರಸ್ವಾಮಿ, ನಟಿ [ಅರೇ..ಮರಳಿ ಟ್ರ್ಯಾಕ್ ಗೆ ಬಂದ್ರಾ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ?]

ಸಿನಿಮಾ ಮಾಡುವುದನ್ನು ನಿಲ್ಲಿಸಲ್ಲ.!

''ಖಂಡಿತ ಸಿನಿಮಾ ಮಾಡೇ ಮಾಡ್ತೀನಿ. ಖಂಡಿತ ಸಿನಿಮಾ ಮಾಡುವುದನ್ನ ನಿಲ್ಲಿಸುವುದಿಲ್ಲ. ಯಾವುದೇ ಸಿನಿಮಾ ರಿಲೀಸ್ ಆದರೂ ಹೋಗಿ ನೋಡುತ್ತೇನೆ'' - ರಾಧಿಕಾ ಕುಮಾರಸ್ವಾಮಿ, ನಟಿ

ಕ್ರಮ ಕೈಗೊಳ್ಳುತ್ತೇನೆ

''ಫೇಸ್ ಬುಕ್ ನಲ್ಲಿ ಫೋಟೋಗಳನ್ನ ಯಾರು ಹಾಕಿದ್ದಾರೋ, ಗೊತ್ತಿಲ್ಲ. ದೂರು ನೀಡಿ ಖಂಡಿತ ಕ್ರಮ ಕೈಗೊಳ್ಳುತ್ತೇನೆ'' - ರಾಧಿಕಾ ಕುಮಾರಸ್ವಾಮಿ, ನಟಿ

English summary
Kannada Actress Radhika Kumaraswamy is annoyed with Marriage rumors. Radhika Kumaraswamy has given clarification to Filmibeat Kannada about the fake news.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada