»   » 'ಆಕ್ಷನ್ ಕ್ವೀನ್' ಆಗ್ತಾರೆ ರಾಧಿಕಾ ಮೇಡಂ

'ಆಕ್ಷನ್ ಕ್ವೀನ್' ಆಗ್ತಾರೆ ರಾಧಿಕಾ ಮೇಡಂ

Posted By:
Subscribe to Filmibeat Kannada

'ಸ್ವೀಟಿ' ಚಿತ್ರದಿಂದ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ನಟಿ ರಾಧಿಕಾ ಕುಮಾರಸ್ವಾಮಿ. ಇವತ್ತಷ್ಟೆ ತಮ್ಮ 29ನೇ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿರುವ ರಾಧಿಕಾ, ಅಭಿಮಾನಿಗಳಿಗೆ 'ರುದ್ರತಾಂಡವ' ಚಿತ್ರದ ಸ್ಪೆಷಲ್ ಟ್ರೇಲರ್ ಜೊತೆಗೆ ತಾವು ಅಭಿನಯಿಸುತ್ತಿರುವ ಹೊಸ ಚಿತ್ರದ ಬಗ್ಗೆ ಮೌನ ಮುರಿದಿದ್ದಾರೆ.

ಹೌದು, 'ರುದ್ರತಾಂಡವ' ಮತ್ತು 'ನಮಗಾಗಿ' ಚಿತ್ರಗಳ ಹೊರತಾಗಿ ರಾಧಿಕಾ ಹೊಸ ಸಿನಿಮಾಗೆ ಒಪ್ಪಿಗೆ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ತಾವು ಎದುರುನೋಡುತ್ತಿದ್ದ ಪಾತ್ರ ಈ ಚಿತ್ರದಲ್ಲಿ ರಾಧಿಕಾಗೆ ಲಭಿಸಿದ್ಯಂತೆ.

ಅಂತಹ ಪಾತ್ರ ಏನಪ್ಪಾ ಅಂದ್ರೆ, ರಾಧಿಕಾ ಕುಮಾರಸ್ವಾಮಿ ಆಕ್ಷನ್ ಕ್ವೀನ್ ಆಗಿ ತೆರೆಮೇಲೆ ಅಬ್ಬರಿಸಲಿದ್ದಾರೆ. ಆಕ್ಷನ್ ಕ್ವೀನ್ ಅಂದಾಕ್ಷಣ, ಬರೀ ಹೊಡಿಯುವುದು , ಬಡಿಯುವುದಲ್ಲ..! ಚಿತ್ರದಲ್ಲಿ ಹಾರ್ಸ್ ರೈಡಿಂಗ್, ರೋಪ್ ಟ್ರೇನಿಂಗ್ ಸೇರಿದಂತೆ ಅನೇಕ ಸಾಹಸ ಕ್ರೀಡೆಗಳಲ್ಲಿ ರಾಧಿಕಾ ನೀರು ಕುಡಿದಷ್ಟೇ ಸಲೀಸಾಗಿ ಮಾಡುವುದನ್ನ ನೀವು ನೋಡಬಹುದು.

ಇನ್ನೂ ಹೆಸರಿಡದ ಈ ಮಹಿಳಾ ಪ್ರಧಾನ ಚಿತ್ರಕ್ಕೆ 'ವಿಕ್ಟರಿ' ನಂದಕಿಶೋರ್ ಆಕ್ಷನ್ ಕಟ್ ಹೇಳ್ತಿದ್ದಾರೆ. ರಾಧಿಕಾಗಾಗಿ ಸ್ಕ್ರಿಪ್ಟ್ ರೆಡಿಮಾಡಿರುವ ನಂದಕಿಶೋರ್, ಈ ಚಿತ್ರದ ಮೂಲಕ 'ಸ್ವೀಟಿ'ಗೆ ಹೊಸ ಇಮೇಜ್ ನೀಡಲಿದ್ದಾರೆ.

ಚಿತ್ರದ ಬಗ್ಗೆ ಹೆಚ್ಚು ಉತ್ಸುಕರಾಗಿರುವ ರಾಧಿಕಾ ಈಗಾಗಲೇ ಕುದುರೆ ಸವಾರಿ ತರಬೇತಿ ಪಡೆಯುತ್ತಿದ್ದಾರೆ. ಹಾಗ್ನೋಡಿದರೆ, ಇವತ್ತು ರಾಧಿಕಾ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರ ಅನೌನ್ಸ್ ಆಗ್ಬೇಕಿತ್ತು. ಆದರೆ ಈಗಾಗಲೇ ಎರಡು ಚಿತ್ರಗಳಲ್ಲಿ ರಾಧಿಕಾ ಬಿಜಿಯಾಗಿದ್ದಾರೆ. ಇನ್ನೂ ನಂದಕಿಶೋರ್ ಕೂಡ 'ರನ್ನ'ನಿಗೆ ಆಕ್ಷನ್ ಕಟ್ ಹೇಳ್ತಿರೋದ್ರಿಂದ, ಚಿತ್ರ ಅನೌನ್ಸ್ ಆಗುವುದು ಸ್ವಲ್ಪ ತಡವಾಗ್ತಿದೆ.

Radhika Kumaraswamy as Action Queen

''ನಾನು ತುಂಬಾ ಇಷ್ಟಪಟ್ಟಿರುವ ರೋಲ್ ಇದು. ನನ್ನ ಡ್ರೀಮ್ ರೋಲ್ ಸಿಕ್ಕಿರುವುದು ನನ್ನ ಅದೃಷ್ಟ. ಚೆನ್ನಾಗಿ ಮಾಡಬೇಕು ಅಂತ ಪಾತ್ರಕ್ಕೋಸ್ಕರ ತಯಾರಿ ನಡೆಸುತ್ತಾ ತುಂಬಾ ಕಷ್ಟಪಡುತ್ತಾಯಿದ್ದೀನಿ. ಯಾವುದೇ ಡ್ಯೂಪ್ ಇಲ್ಲದೆ ಆಕ್ಷನ್ ಮಾಡಬೇಕು ಅನ್ನೋದು ನನ್ನ ಆಸೆ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಸಂದರ್ಶನ ನೀಡುತ್ತಾ ತಮ್ಮ ಹೊಸ ಚಿತ್ರದ ಬಗ್ಗೆ ರಾಧಿಕಾ ಬಾಯ್ಬಿಟ್ಟಿದ್ದಾರೆ. [ನನ್ನ ಮಗಳೇ ನಂಗೆ ಬಿಗ್ ಗಿಫ್ಟ್ - ರಾಧಿಕಾ ಕುಮಾರಸ್ವಾಮಿ]

ಮೊದಲಿನಿಂದಲೂ ಆಕ್ಷನ್ ಪಾತ್ರ ಮಾಡಬೇಕು ಅಂತಿದ್ದ ರಾಧಿಕಾಗೆ ಈಗ ಅವಕಾಶ ಸಿಕ್ಕಿದೆ. ಆದ್ರೆ, ಅದಕ್ಕೆ ಚಾಲನೆ ಸಿಗುವುದು ಮುಂದಿನ ವರ್ಷದಲ್ಲಿ ಮಾತ್ರ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)

English summary
Actress Radhika kumaraswamy will be essaying a powerpuff action role in her upcoming movie directed by Nandakishore of Victory fame. Radhika kumaraswamy revealed this in her special interview with FilmiBeat kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada