»   » ನಟಿ ರಾಧಿಕಾ ಕುಮಾರಸ್ವಾಮಿ ಸಿಕ್ಕೋದೇ 'ಡೌ'ಟು

ನಟಿ ರಾಧಿಕಾ ಕುಮಾರಸ್ವಾಮಿ ಸಿಕ್ಕೋದೇ 'ಡೌ'ಟು

By: ಜೀವನರಸಿಕ
Subscribe to Filmibeat Kannada

ರಾಧಿಕಾ ಕುಮಾರಸ್ವಾಮಿ ಅಭಿನಯದ 'ರುದ್ರತಾಂಡವ' ಚಿತ್ರಮಂದಿರದಲ್ಲಿ ಬಾಕ್ಸ್ ಆಫೀಸನ್ನ ಚಿಂದಿ ಉಡಾಯಿಸುತ್ತಿರೋ ಸುದ್ದಿ ಬಂದಿದೆ. ಆದ್ರೆ ಈ ಸಂಭ್ರಮ ಹಂಚಿಕೊಳ್ಳೋಕೆ ರಾಧಿಕಾ ಅವರನ್ನ ಹುಡುಕಿದ್ರೆ ಅವರೇ ಇಲ್ಲ. ನಿರ್ದೇಶಕರು ಚಿತ್ರತಂಡ ಕನ್ಫರ್ಮ್ ಮಾಡಿದ್ರೂ ರಾಧಿಕಾರಿಗೆ ಹುಷಾರಿಲ್ಲ ಅನ್ನೋ ಮಾಹಿತಿ ಕೊನೆಯಲ್ಲಿ ಸಿಕ್ಕಿದೆ.

ರಾಧಿಕಾ ಕುಮಾರಸ್ವಾಮಿಯವರ ಮಿಸ್ಸಿಂಗ್ ಪ್ರಕರಣ ಇದೇ ಮೊದಲ ಬಾರಿಯೇನೂ ಅಲ್ಲ. ಈ ಹಿಂದೆ ಚಿತ್ರದ ಆಡಿಯೋ ರಿಲೀಸ್ ನಡೆದಾಗ್ಲೂ ರಾಧಿಕಾ ಬರ್ತಾರೆ ಅಂತ ಮಾಧ್ಯಮದ ಮಂದಿ ಕಾದಿದ್ರೆ ರಾಧಿಕಾ ಮಾತ್ರ ನಾಪತ್ತೆ. ['ರುದ್ರತಾಂಡವ' ವಿಮರ್ಶೆ]


ರಾಧಿಕಾ ಸ್ಟಾರ್ ವ್ಯಾಲ್ಯೂನೇ ಚಿತ್ರಕ್ಕೆ ಒಂದಂಶ ಹೆಚ್ಚು

ಇನ್ನು ಚಿತ್ರದ ರಿಲೀಸ್ ಗಾಗಿ ಚಿತ್ರತಂಡ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲೂ ಸಿನಿಪತ್ರಕರ್ತರು ರಾಧಿಕಾ ಅವರನ್ನ ಎದುರುಗೊಳ್ಳೋ ನಿರೀಕ್ಷೆಯಲ್ಲಿದ್ರು. ಯಾಕಂದ್ರೆ ಚಿರುವಿಗೆ ಹೋಲಿಸಿದ್ರೆ ರಾಧಿಕಾ ಅನುಭವೀ ನಟಿ ಮತ್ತು ರಾಧಿಕಾ ಕುಮಾರಸ್ವಾಮಿ ಸ್ಟಾರ್ ವ್ಯಾಲ್ಯೂನೇ ಚಿತ್ರಕ್ಕೆ ಒಂದಂಶ ಹೆಚ್ಚು.


ರಿಲೀಸ್ ಪ್ರೆಸ್ ಮೀಟ್ ಗೂ ರಾಧಿಕಾ ಬರಲೇ ಇಲ್ಲ

ರುದ್ರತಾಂಡವ ಸಿನಿಮಾದ ರಿಲೀಸ್ ಪ್ರೆಸ್ ಮೀಟ್ ಗೂ ರಾಧಿಕಾ ಬರಲೇ ಇಲ್ಲ. ರಾಧಿಕಾ ಕುಮಾರಸ್ವಾಮಿ ಬರದೇ ಇದ್ದದ್ದಕ್ಕೆ ಚಿತ್ರತಂಡ ಹುಷಾರಿಲ್ಲ. ಮಂಗಳೂರಲ್ಲಿ ಪೂಜೆ ಇತ್ತು ಅನ್ನುವ ಕಾರಣವನ್ನ ಕೊಟ್ಟಿದೆ, ಇದು ಸತ್ಯವಾ ಅಥವಾ ಬೇರೆ ಏನಾದ್ರೂ ರಟ್ಟಾಗದ ಗುಟ್ಟು ಒಳಗೇ ಅಡಗಿದ್ಯಾ?


ಸಕ್ಸಸ್ ಮೀಟ್ ಗೆ ರಾಧಿಕಾ ಯಾಕೆ ಬರಲಿಲ್ಲ?

ಯಾರಿಗೆ ಗೊತ್ತು ಇಲ್ಲಿಯವರೆಗಿನ ಪ್ರೆಸ್ ಮೀಟ್ ಗಳಿಗೆ ಭಾಗವಹಿಸದೇ ಇರೋದು ಸಿನಿಮಾ ಗೆದ್ದರೂ ಬಾರದೇ ಇರೋದು ಇಂತಹಾ ಒಂದು ಅನುಮಾನವನ್ನ ಮೂಡಿಸಿರೋದಂತೂ ಸತ್ಯ.


ಗುರುದೇಶಪಾಂಡೆ ಆಕ್ಷನ್ ಕಟ್ ಹೇಳಿರುವ ಚಿತ್ರ

'ಸ್ವೀಟಿ ನನ್ನ ಜೋಡಿ' ಚಿತ್ರದ ಬಳಿಕ ರಾಧಿಕಾ ಕುಮಾರಸ್ವಾಮಿ ಅಭಿನಯದ ಚಿತ್ರವಿದು. ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ಆಕ್ಷನ್ ಕಟ್ ಹೇಳಿರುವ ಚಿತ್ರ. ಈ ಚಿತ್ರ ತಮಿಳಿನ 'ಪಾಂಡಿಯನಾಡು' ರೀಮೇಕ್ ಆದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ತೆರೆಗೆ ತಂದಿದ್ದಾರೆ ನಿರ್ದೇಶಕರು.


ರಾಜಾಹುಲಿ ದಾಖಲೆ ಮುರಿದ ರುದ್ರತಾಂಡವ

ಗುರುದೇಶಪಾಂಡೆ ಅವರೇ ಹೇಳುವಂತೆ ತಮ್ಮ ರಾಜಾಹುಲಿ ಚಿತ್ರದ ದಾಖಲೆಯನ್ನು ರುದ್ರತಾಂಡವ ಮೀರಿದೆಯಂತೆ. ಆದರೆ ಕಲೆಕ್ಷನ್ ಎಷ್ಟಾಗಿದೆ ಎಂಬ ಬಗ್ಗೆ ಅವರು ಬಾಯಿಬಿಟ್ಟು ಹೇಳಿಲ್ಲ.


ಗಿರೀಶ್ ಕಾರ್ನಾಡ್ ಸಹ ಕೊಂಡಾಡಿದರು

ಇನ್ನು ಈ ಚಿತ್ರದಲ್ಲಿ ತಂದೆಯ ಪಾತ್ರವನ್ನು ಪೋಷಿಸಿರುವ ಖ್ಯಾತ ಕಲಾವಿದ ಹಾಗೂ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಮಾತನಾಡುತ್ತಾ, ತಮ್ಮ ಮನೆಯ ಕೆಲಸದವರನ್ನೂ ಚಿತ್ರ ನೋಡುವಂತೆ ಕಳುಹಿಸಿದ್ದೆ. ಅವರು ಸೂಪರ್ ಎಂದಿದ್ದಾಗಿ ಹೇಳಿದರು.


ಚಿರುಗೆ ದೊಡ್ಡ ತಿರುವು ಕೊಟ್ಟ ಚಿತ್ರವಂತೆ

ತಮ್ಮ ವೃತ್ತಿಬದುಕಿನಲ್ಲಿ ರುದ್ರತಾಂಡವ ಚಿತ್ರ ಬಲು ದೊಡ್ಡ ತಿರುವು ಕೊಟ್ಟಿದೆ ಎಂಬ ಮಾತನ್ನು ನಟ ಚಿರಂಜೀವಿ ಸರ್ಜಾ ಹೇಳಿದರು. ಈ ಮಾತಿಗೆ ಧ್ವನಿಗೂಡಿಸಿದ ಕುಮಾರ್ ಗೋವಿಂದ್ ಅವರು ಸಾಮಾನ್ಯ ಜನರಿಗೆ ಚಿತ್ರ ಇಷ್ಟವಾಗಿದೆ. ಚಿತ್ರವೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದರು.


ಚಂದ್ರಲೇಖ ದಾಖಲೆಯನ್ನು ಸರಿಗಟ್ಟುತ್ತಾ?

ಚಿರಂಜೀವಿ ಸರ್ಜಾ ಅವರ 'ಚಂದ್ರಲೇಖ' ಚಿತ್ರವೂ ಶತದಿನೋತ್ಸವ ಆಚರಿಸಿಕೊಂಡಿತ್ತು. 'ರುದ್ರತಾಂಡವ' ಚಿತ್ರವೂ ಖಂಡಿತ ಆ ದಾಖಲೆಯನ್ನು ಸರಿಗಟ್ಟುತ್ತದೆ ಎಂಬ ವಿಶ್ವಾಸದಲ್ಲಿದೆ.


English summary
Actress Radhika Kumaraswamy being away from Rudratandava success meet, which will be held on Wednesday eveing in Bengaluru. Gurudeshpande announced that, the movie is succeded in box office.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada