»   » ರಾಧಿಕಾ ಕುಮಾರಸ್ವಾಮಿ ಮನೆಯಲ್ಲಿ ಗಣೇಶ ಹಬ್ಬ

ರಾಧಿಕಾ ಕುಮಾರಸ್ವಾಮಿ ಮನೆಯಲ್ಲಿ ಗಣೇಶ ಹಬ್ಬ

Posted By:
Subscribe to Filmibeat Kannada

ಸಿನಿಮಾ ತಾರೆಗಳ ಮನೆಯಲ್ಲಿ ಹಬ್ಬ ಹರಿದಿನಗಳನ್ನು ಹೇಗೆಲ್ಲಾ ಆಚರಿಸುತ್ತಾರೆ. ಏನೆಲ್ಲಾ ಅಲಂಕಾರ ಮಾಡಿರುತ್ತಾರೆ ಎಂಬ ಆಸಕ್ತಿ, ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಈ ಬಾರಿಯ ಗೌರಿ ಗಣೇಶ ಹಬ್ಬವನ್ನು ನಟಿ ರಾಧಿಕಾ ಕುಮಾರಸ್ವಾಮಿ ಭಕ್ತಿಭಾವದಿಂದ ಆಚರಿಸುತ್ತಿದ್ದಾರೆ.

ಅವರು ಗಣೇಶ ಚತುರ್ಥಿಯನ್ನು ಯಾವ ರೀತಿ ಸೆಲೆಬ್ರೇಟ್ ಮಾಡಲಿದ್ದಾರೆ ಎಂಬುದನ್ನು ಕಣ್ತುಂಬಿಕೊಳ್ಳಬೇಕೆ? ಹಾಗಿದ್ದರೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿ ಗಣೇಶ ಹಬ್ಬದ ವಿಶೇಷ ಕಾರ್ಯಕ್ರಮವನ್ನು ನೀವು ನೋಡಲೇಬೇಕು. 'ಸ್ವೀಟಿ ಮನೆ ಗಣೇಶ' ಎಂಬ ಕಾರ್ಯಕ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು.

Radhika Kumara Swamy

ಈ ವಿಶೇಷ ಕಾರ್ಯಕ್ರಮ ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಈ ಬಗ್ಗೆ ಮಾತನಾಡಿರುವ ರಾಧಿಕಾ ಅವರು,"ಇದೇ ಗೌರಿ ಗಣೇಶ ಹಬ್ಬದ ದಿನ ನನ್ನ ಸ್ವೀಟಿ ಚಿತ್ರತಂಡ ಹಾಗೂ ಕುಟುಂಬದವರು ನಾವೆಲ್ಲರೂ ನಿಮ್ಮ ಮನೆಗೆ ಬರುತ್ತಿದ್ದೇವೆ." ಎಂದಿದ್ದಾರೆ.

ಒಂದು ಕಡೆ ಕಡುಬು ಇನ್ನೊಂದು ಕಡೆ 'ಸ್ವೀಟಿ' ಜೋಡಿ. ಗೌರಿ ಗಣೇಶ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲಿವೆ. ಇನ್ನು ಸ್ವಿಟಿ ಚಿತ್ರದ ವಿಚಾರಕ್ಕೆ ಬರುವುದಾದರೆ ಈ ಚಿತ್ರಕ್ಕೆ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ನಾಯಕ ನಟ ಆದಿತ್ಯ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದೆ. ಗೌರಿ ಗಣೇಶ ಹಬ್ಬದ ಶುಭಾಶಯಗಳು. (ಒನ್ಇಂಡಿಯಾ ಕನ್ನಡ)

English summary
Kannada actress Radhika Kumaraswamy celetrating Gowri Ganesha festival on this Monday at 11am only on Zee Kannada. The special programme names as "Sweety Mane Ganesha".
Please Wait while comments are loading...