For Quick Alerts
  ALLOW NOTIFICATIONS  
  For Daily Alerts

  'ದಮಯಂತಿ'ಯಾಗಿ ಬದಲಾದ ರಾಧಿಕಾ ಕುಮಾರಸ್ವಾಮಿ !

  By Pavithra
  |
  ಹೊಸ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ..! | Filmibeat Kannada

  ರಾಧಿಕಾ ಕುಮಾರಸ್ವಾಮಿ..ಸಾಕಷ್ಟು ದಿನಗಳಿಂದ ಚಿತ್ರರಂಗದಲ್ಲಿ ಸಕ್ರೀಯವಾಗಿ ಕಾಣಿಸಿಕೊಳ್ಳದೇ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಅಭಿನಯ ಮಾಡುತ್ತಾ ಬಿಸಿನೆಸ್ ನಲ್ಲಿಯೂ ಹೆಚ್ಚು ಗಮನ ಹರಿಸುತ್ತಿರುವ ನಟಿ. ಇತ್ತೀಚಿಗಷ್ಟೆ ರಾಧಿಕಾ, ಅರ್ಜುನ್ ಸರ್ಜಾ ಅಭಿನಯದ 'ಕಾಂಟ್ರಾಕ್ಟ್' ಚಿತ್ರದ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದರು.

  ಅದರ ನಂತರ 'ಭೈರಾ ದೇವಿ' ಹಾಗೂ 'ರಾಜೇಂದ್ರ ಪೊನ್ನಪ್ಪ' ಸಿನಿಮಾದಲ್ಲಿಯೂ ರಾಧಿಕಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ. ಆದರೆ ಯಾವುದೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ರಾಧಿಕಾ ಕುಮಾರಸ್ವಾಮಿ ಸೈಲೆಂಟ್ ಆಗಿ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ನಟಿ ವಿಜಯಲಕ್ಷ್ಮಿಗೆ ಮಾನಸಿಕ ಸ್ಥೈರ್ಯ ತುಂಬಿದ ರಾಧಿಕಾ ಕುಮಾರಸ್ವಾಮಿನಟಿ ವಿಜಯಲಕ್ಷ್ಮಿಗೆ ಮಾನಸಿಕ ಸ್ಥೈರ್ಯ ತುಂಬಿದ ರಾಧಿಕಾ ಕುಮಾರಸ್ವಾಮಿ

  ಹಾಗಾದರೆ ರಾಧಿಕಾ ಕುಮಾರಸ್ವಾಮಿ ಅಭಿನಯ ಮಾಡುತ್ತಿರುವ ಹೊಸ ಸಿನಿಮಾ ಯಾವುದು? ಹೊಸ ಚಿತ್ರದಲ್ಲಿ ರಾಧಿಕಾ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಯಾವ ಯಾವ ಚಿತ್ರದಲ್ಲಿ ರಾಧಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ದಮಯಂತಿ ಪಾತ್ರದಲ್ಲಿ ರಾಧಿಕಾ

  ದಮಯಂತಿ ಪಾತ್ರದಲ್ಲಿ ರಾಧಿಕಾ

  ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ 'ದಮಯಂತಿ'ಯಲ್ಲಿ ಅಭಿನಯ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಸ್ಯಾಂಡಲ್ ವುಡ್ ಗೆ ನಾಯಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ನವರಸನ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

  ಮಹಿಳಾ ಪ್ರಧಾನ ಚಿತ್ರದಲ್ಲಿ ರಾಧಿಕಾ

  ಮಹಿಳಾ ಪ್ರಧಾನ ಚಿತ್ರದಲ್ಲಿ ರಾಧಿಕಾ

  'ದಮಯಂತಿ' ಮಹಿಳಾ ಪ್ರಧಾನ ಚಿತ್ರವಾಗಿದ್ದು ಕನ್ನಡ ಸಿನಿಮಾರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳೇ ಕಡಿಮೆ ಇಂತಹ ಸಂದರ್ಭದಲ್ಲಿ ನವರಸನ್ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನವರಸನ್ ನಿರ್ದೇಶನದ ಜೊತೆಯಲ್ಲಿ ನಿರ್ಮಾಣವನ್ನು ಮಾಡಲಿದ್ದಾರೆ .

  ಅರುಂಧತಿ, ಭಾಗಮತಿ ಶೈಲಿ ಸಿನಿಮಾ

  ಅರುಂಧತಿ, ಭಾಗಮತಿ ಶೈಲಿ ಸಿನಿಮಾ

  ಟಾಲಿವುಡ್ ನಲ್ಲಿ ತೆರೆ ಕಂಡಿರುವ 'ಭಾಗಮತಿ' ಹಾಗೂ 'ಅರುಂಧತಿ' ಸಿನಿಮಾ ಶೈಲಿಯಲ್ಲಿ 'ದಮಯಂತಿ' ಸಿನಿಮಾ ಇರಲಿದ್ದು ಮೊದಲಿಗೆ ಕನ್ನಡದಲ್ಲಿ ಚಿತ್ರೀಕರಣ ಮಾಡಿ ನಂತರ ತೆಲುಗು ತಮಿಳಿನಲ್ಲಿಯೂ ಸಿನಿಮಾ ಇದೇ ಚಿತ್ರವನ್ನು ಮಾಡುವ ಆಲೋಚನೆ ಇದ್ಯಂತೆ.

  ಕಥೆಗೆ ಮೆಚ್ಚುಗೆ ಸಲ್ಲಿಸಿದ ರಾಧಿಕಾ

  ಕಥೆಗೆ ಮೆಚ್ಚುಗೆ ಸಲ್ಲಿಸಿದ ರಾಧಿಕಾ

  ರಾಧಿಕಾ ಕುಮಾರಸ್ವಾಮಿ ಈಗಾಗಲೇ ಕಥೆಯನ್ನು ಕೇಳಿ ಒಪ್ಪಿಗೆ ಸಲ್ಲಿಸಿದ್ದು ಅಧಿಕೃತವಾಗಿ ಆಗಬೇಕಿರುವ ಕೆಲಸಗಳು ನಡೆಯಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ನಲ್ಲಿ ಸಿನಿಮಾ ಮುಹೂರ್ತ ನಡೆದು ಚಿತ್ರೀಕರಣವೂ ಆರಂಭ ಆಗಲಿದೆ.

  ಸದ್ದಿಲ್ಲದೆ ಸಿನಿಮಾಗಳ ಚಿತ್ರೀಕರಣ

  ಸದ್ದಿಲ್ಲದೆ ಸಿನಿಮಾಗಳ ಚಿತ್ರೀಕರಣ

  ಸದ್ಯ ರಾಧಿಕಾ ಕುಮಾರಸ್ವಾಮಿ ಅರ್ಜುನ್ ಸರ್ಜಾ ಜೊತೆಯಲ್ಲಿ 'ಕಾಂಟ್ರಾಕ್ಟ್'. ರಮೇಶ್ ಅರವಿಂದ್ ಜೊತೆಯಲ್ಲಿ 'ಭೈರಾ ದೇವಿ' ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ರಾಜೇಂದ್ರ ಪೊನ್ನಪ್ಪ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವುಗಳ ಜೊತೆಯಲ್ಲಿ ದಮಯಂತಿ ಚಿತ್ರದಲ್ಲಿಯೂ ಕಾಣಿಸಿಕೊಳ್ಳುವುದಾಗಿ ಸುದ್ದಿ ಇದೆ.

  English summary
  Kannada actress Radhika Kumaraswamy is acting as heroine in Damayanti movie. Navarasan is directing the film Damayanti.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X