For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಕುಮಾರಸ್ವಾಮಿ ಬಗ್ಗೆ ನಟಿ ರಮ್ಯಾ ಮಾಡಿದ ಕಾಮೆಂಟ್ ಏನು?

  By Harshitha
  |

  ''ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಗ ಕೂಡ ಹೀರೋ ಆಗಿದ್ದಾರೆ'' ಅಂತ ಮಾಧ್ಯಮಗಳ ಮುಂದೆ ಬಾಣ ಬಿಟ್ಟವರು ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ.

  ಮಾಧ್ಯಮಗಳ ಪ್ರತಿನಿಧಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಚ್.ಡಿ.ಕುಮಾರಸ್ವಾಮಿ ಪತ್ನಿ ಯಾರು ಅಂತ ಕೇಳಿದ್ದಕ್ಕೆ, ''ರಾಧಿಕಾ ಕುಮಾರಸ್ವಾಮಿ ಅಲ್ಲವೇ? ನಿಮಗೆ ಗೊತ್ತಿಲ್ವಾ? ಏನ್ರೀ ಹೀಗೆ ಕೇಳ್ತಿದ್ದೀರಾ?'' ಅಂತ ಆಶ್ಚರ್ಯ ವ್ಯಕ್ತಪಡಿಸಿದ್ದರು ಮಾಜಿ ಸಂಸದೆ ನಟಿ ರಮ್ಯಾ. ['ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ?']

  ಅಷ್ಟಕ್ಕೂ ರಾಧಿಕಾ ಕುಮಾರಸ್ವಾಮಿ ವೈಯುಕ್ತಿಕ ವಿಚಾರದ ಬಗ್ಗೆ ನಟಿ ರಮ್ಯಾ ಮಾತನಾಡಲು ಕಾರಣ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.

  ಸಿದ್ಧರಾಮಯ್ಯ ವಾಚ್ ನಂತರ ನಟಿ ರಮ್ಯಾ ಕಾಲ್ಗುಣದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಕಾಮೆಂಟ್ ಮಾಡಿದ್ದಕ್ಕೆ ರಮ್ಯಾ ಮೇಡಂ ಇಷ್ಟೆಲ್ಲಾ ಮಾತನಾಡಬೇಕಾಯ್ತು.! [ನಟಿ, ಮಾಜಿ ಸಂಸದೆ ರಮ್ಯಾ ವಿರುದ್ದ ಕುಮಾರಸ್ವಾಮಿ ಗಂಭೀರ ಆರೋಪ]

  ಈ ಘಟನೆಯಿಂದ ರಮ್ಯಾ ಹಾಗೂ ರಾಧಿಕಾ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ಯಾ? ರಮ್ಯಾ-ರಾಧಿಕಾ ಕುಮಾರಸ್ವಾಮಿ ಫ್ರೆಂಡ್ ಶಿಪ್ ಬ್ರೇಕ್ ಆಗಿದ್ಯಾ? ಎಂಬ ಪ್ರಶ್ನೆಗಳು ಉದ್ಭವವಾಗಿದೆ.

  ಈ ಬಗ್ಗೆ ಕನ್ನಡ ದಿನ ಪತ್ರಿಕೆ 'ವಿಜಯ ಕರ್ನಾಟಕ'ಗೆ ನೀಡಿರುವ ಸಂದರ್ಶನದಲ್ಲಿ ನಟಿ ರಮ್ಯಾ ಮನಬಿಚ್ಚಿ ಮಾತನಾಡಿದ್ದಾರೆ. ಅದನ್ನೆಲ್ಲಾ ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ....

  ನಟಿ ರಮ್ಯಾ ಸಂದರ್ಶನ

  ನಟಿ ರಮ್ಯಾ ಸಂದರ್ಶನ

  ನಟಿ ರಮ್ಯಾ ಕಾಲ್ಗುಣದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ, ಎಚ್.ಡಿ.ಕುಮಾರಸ್ವಾಮಿ ವೈಯುಕ್ತಿಕ ವಿಚಾರವಾಗಿ ನಟಿ ರಮ್ಯಾ ನೀಡಿದ ತಿರುಗೇಟು ಬಳಿಕ ಲಕ್ಕಿ ಸ್ಟಾರ್ ರಮ್ಯಾ 'ವಿಜಯ ಕರ್ನಾಟಕ' ದಿನಪತ್ರಿಕೆಗೆ ಸಂದರ್ಶನ ನೀಡಿದ್ದಾರೆ. [ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹಬ್ಬಿದ ಗಾಸಿಪ್ ಸುಳ್ಳು!]

  ಸಂದರ್ಶನದ ಆಯ್ದ ಭಾಗ ಇಲ್ಲಿದೆ...

  ಸಂದರ್ಶನದ ಆಯ್ದ ಭಾಗ ಇಲ್ಲಿದೆ...

  ರಾಜಕೀಯದಲ್ಲಿ ತಮ್ಮ ನಡೆ, ರಾಧಿಕಾ ಕುಮಾರಸ್ವಾಮಿ ಜೊತೆಗಿನ ಫ್ರೆಂಡ್ ಶಿಪ್ ಹಾಗೂ ನಟನೆ ಮುಂದುವರಿಸುವ ಬಗ್ಗೆ ನಟಿ ರಮ್ಯಾ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ...ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

  ರಾಧಿಕಾ ಬಗ್ಗೆ ಮುಚ್ಚಿಡುವಂಥದ್ದು ಏನೂ ಇಲ್ಲ!

  ರಾಧಿಕಾ ಬಗ್ಗೆ ಮುಚ್ಚಿಡುವಂಥದ್ದು ಏನೂ ಇಲ್ಲ!

  ''ನಾನು ಯಾರ ಬಗ್ಗೆಯೂ ವೈಯುಕ್ತಿಕವಾಗಿ ಮಾತನಾಡಿಲ್ಲ. ನಾನು ಏನು ಮಾತನಾಡಿದ್ದೇನೋ, ಅದೆಲ್ಲವೂ ಜನತೆಗೆ ಗೊತ್ತು. ಹೀಗಾಗಿ ಮುಚ್ಚಿಡುವಂಥದ್ದು ಏನೂ ಇಲ್ಲ'' - ನಟಿ ರಮ್ಯಾ [ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?]

  ರಾಧಿಕಾ ನನ್ನ ಕ್ಲೋಸ್ ಫ್ರೆಂಡ್

  ರಾಧಿಕಾ ನನ್ನ ಕ್ಲೋಸ್ ಫ್ರೆಂಡ್

  ''ನಟಿ ರಾಧಿಕಾ ನನ್ನ ಕ್ಲೋಸ್ ಫ್ರೆಂಡ್. ನಾನು ಏನು ಅಂತ ಅವರಿಗೆ ಗೊತ್ತಿದೆ. ಹೀಗಾಗಿ ಫ್ರೆಂಡ್ ಶಿಪ್ ಗೆ ಏನೂ ಆಗಲ್ಲ. ಚೆನ್ನಾಗಿಯೇ ಇದ್ದೇವೆ'' - ನಟಿ ರಮ್ಯಾ

  ನನ್ನ ಮಾತಲ್ಲಿ ತಪ್ಪಿದೆಯಾ?

  ನನ್ನ ಮಾತಲ್ಲಿ ತಪ್ಪಿದೆಯಾ?

  ''ಕುಮಾರಸ್ವಾಮಿ ಅವರು ಪ್ರೊಡ್ಯೂಸರ್. ಮಗ ಹೀರೋ. ಇನ್ನೂ ಸಿನಿಮಾ ಮಾಡುತ್ತೇನೆ ಅಂತ ಅವರೇ ಹೇಳಿದ್ದಾರೆ. ಹೀಗಾಗಿ ಸಿನಿಮಾ ರಂಗದವರ ಬಗ್ಗೆ ಹಗುರವಾಗಿ ಮಾತಾಡಬೇಡಿ ಅಂತ ಹೇಳಿದೆ. ನನ್ನ ಮಾತಲ್ಲಿ ಏನಾದರೂ ತಪ್ಪಿದೆಯಾ? - ನಟಿ ರಮ್ಯಾ

  'ರಾಧಿಕಾ ಗುಡ್ ಗರ್ಲ್.!'

  'ರಾಧಿಕಾ ಗುಡ್ ಗರ್ಲ್.!'

  ''ರಾಧಿಕಾ ಒಳ್ಳೆ ನಟಿ. ಗುಡ್ ಗರ್ಲ್. ನನಗಾಗಿ 'ಲಕ್ಕಿ' ಸಿನಿಮಾ ನಿರ್ಮಾಣ ಮಾಡಿದರು. ಅಲ್ಲದೇ ಸಿನಿಮಾ ರಂಗಕ್ಕೆ ರಾಧಿಕಾ ಬಂದಾಗ ನಾನೂ ಕೂಡ ಅವರಿಗೆ ಸಹಾಯ ಮಾಡಿದ್ದೇನೆ. ರಾಧಿಕಾ ಬಗ್ಗೆ ನನಗೆ ಯಾವಾಗಲೂ ಸಾಫ್ಟ್ ಕಾರ್ನರ್. ಅವರು ತುಂಬಾ ಕಷ್ಟದಿಂದ ಮೇಲೆ ಬಂದಿದ್ದಾರೆ. ಹೀಗಾಗಿ ರಾಧಿಕಾ ಮೇಲೆ ನನಗೆ ವಿಶೇಷವಾದ ಅಕ್ಕರೆ ಇದೆ. ಎಲೆಕ್ಷನ್ ಟೈಮ್ ನಲ್ಲಿ ನನಗೆ ಫೋನ್ ಮಾಡಿ ವಿಶ್ ಮಾಡಿದ್ರು. ನಾನು ಗೆಲ್ಲಬೇಕು ಅನ್ನುವುದು ಅವರ ಆಸೆಯಾಗಿತ್ತು'' - ನಟಿ ರಮ್ಯಾ

  ನಟಿಸುವುದು ಕಷ್ಟ!

  ನಟಿಸುವುದು ಕಷ್ಟ!

  ''ಮತ್ತೆ ಸಿನಿಮಾ ರಂಗಕ್ಕೆ ನಟಿಯಾಗಿ ಬರುವ ಆಸೆಯಂತೂ ಇಲ್ಲ. ನಾನು ಯಾವುದೇ ಸಮಾರಂಭಕ್ಕೆ ಹೋಗಲಿ, ಅಭಿಮಾನಿಗಳು ಸಿನಿಮಾ ಮಾಡುವಂತೆ ಒತ್ತಾಯಿಸುತ್ತಾರೆ. ಆದ್ರೆ, ನನಗೆ ಟೈಮ್ ಸಿಗುತ್ತಿಲ್ಲ. ನಾನು ಸೋತಿದ್ದರೂ ಕೂಡ ಹಳ್ಳಿ ಹಳ್ಳಿ ತಿರುಗುತ್ತಿದ್ದೇನೆ. ರೈತರ ಕಷ್ಟಗಳನ್ನು ಕೇಳುತ್ತಿದ್ದೇನೆ. ಈ ಮಧ್ಯೆ ನಟಿಸುವುದು ಕಷ್ಟ. ಸಿನಿಮಾ ಒಪ್ಪಿಕೊಂಡರೆ, ಪೂರ್ಣ ಮುಗಿಸುವ ತನಕ ನಾನಲ್ಲಿ ಇರಬೇಕು. ಸದ್ಯ ನನ್ನಿಂದ ಆಗದು'' - ನಟಿ ರಮ್ಯಾ

  ನಟಿಸಲು ಪುರುಸೊತ್ತು ಇಲ್ಲ!

  ನಟಿಸಲು ಪುರುಸೊತ್ತು ಇಲ್ಲ!

  ''ಈಗಲೂ ನನಗೆ ಸಾಕಷ್ಟು ಬೇಡಿಕೆ ಇದೆ. 'ದೊಡ್ಮನೆ ಹುಡುಗ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುವಂತೆ ಕೇಳಿಕೊಂಡರು. ನಾನು ಒಪ್ಪಿಕೊಂಡಿಲ್ಲ. ನಟಿಸಲು ನನಗೆ ಪುರುಸೊತ್ತು ಇಲ್ಲ'' - ನಟಿ ರಮ್ಯಾ

  ಲಂಡನ್ ಗೆ ಹೋಗಿದ್ದು ಯಾಕೆ?

  ಲಂಡನ್ ಗೆ ಹೋಗಿದ್ದು ಯಾಕೆ?

  ''ಇಂಟರ್ ನ್ಯಾಷನಲ್ ರಿಲೇಷನ್ ಮತ್ತು ಪಬ್ಲಿಕ್ ಪಾಲಿಸಿ ಬಗ್ಗೆ ಸ್ಟಡಿ ಮಾಡಲು ಲಂಡನ್ ಗೆ ಹೋಗಿದ್ದೆ. ನಾನು ರಾಜಕಾರಣದಲ್ಲೇ ಮುಂದುವರೆಯಬೇಕು ಅನ್ನುವ ನಿರ್ಧಾರ ತೆಗೆದುಕೊಂಡಿದ್ದರಿಂದ, ಅದನ್ನು ಸ್ಟಡಿ ಮಾಡಿದೆ'' - ನಟಿ ರಮ್ಯಾ

  ಚಿತ್ರ ನಿರ್ಮಾಣ ಮಾಡ್ತೀರಾ?

  ಚಿತ್ರ ನಿರ್ಮಾಣ ಮಾಡ್ತೀರಾ?

  ''ಪ್ರೊಡ್ಯೂಸ್ ಮಾಡಬೇಕು ಅನ್ನುವ ಆಸೆ ಇದೆ. ಆದ್ರೆ, ಅದಕ್ಕೆ ದುಡ್ಡು ಬೇಕಲ್ಲ? ನನ್ನ ಹತ್ತಿರ ಸದ್ಯ ದುಡ್ಡಿಲ್ಲ. ನನ್ನ ಹತ್ತಿರ ಇದ್ದ ದುಡ್ಡನ್ನು ನನ್ನದೇ ಟ್ರಸ್ಟ್ ಮೂಲಕ ಜನಪರ ಕೆಲಸಗಳಿಗೆ ಹಾಕುತ್ತಿದ್ದೇನೆ. ಹೀಗಾಗಿ ಸದ್ಯಕ್ಕಂತೂ ನಿರ್ಮಾಣಕ್ಕೆ ಮುಂದಾಗಲ್ಲ'' - ನಟಿ ರಮ್ಯಾ

  ಸಂಪೂರ್ಣ ಸಂದರ್ಶನ ಇಲ್ಲಿದೆ...

  ಸಂಪೂರ್ಣ ಸಂದರ್ಶನ ಇಲ್ಲಿದೆ...

  'ವಿಜಯ ಕರ್ನಾಟಕ' ದಿನಪತ್ರಿಕೆಗೆ ನಟಿ ರಮ್ಯಾ ನೀಡಿರುವ ಸಂಪೂರ್ಣ ಸಂದರ್ಶನದ ಲಿಂಕ್ ಇಲ್ಲಿದೆ ಓದಿ...

  English summary
  Kannada Actress, EX MP Ramya aka Divya Spandana has spoken about her friendship with Actress cum Producer Radhika Kumaraswamy during her interview for Leading Daily 'Vijaya Karnataka'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X