For Quick Alerts
  ALLOW NOTIFICATIONS  
  For Daily Alerts

  ಗೂಗಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಮೇಲೆ ಎಲ್ಲರ ಕಣ್ಣು.!

  By Harshitha
  |
  ರಾಧಿಕಾ ಕುಮಾರಸ್ವಾಮಿ ಬೆನ್ ಹಿಂದೆ ಬಿದ್ದಿದ್ದಾರೆ ನೆಟ್ಟಿಗರು | Filmibeat Kannada

  ಕರ್ನಾಟಕ ವಿಧಾನಸಭೆ ಚುನಾವಣೆ 2018 ರ ಫಲಿತಾಂಶ ಬಂದಿದ್ದಾಯ್ತು. ಸ್ಪಷ್ಟ ಬಹುಮತ ಸಿಗದೇ ಇದ್ದರೂ, ಮುಖ್ಯಮಂತ್ರಿ ಆಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ, ರಾಜೀನಾಮೆ ನೀಡಿದ್ದೂ ಆಯ್ತು. ಈಗ ಎಚ್.ಡಿ.ಕುಮಾರಸ್ವಾಮಿ ಸರದಿ.

  ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಿರುವಾಗ, ಗೂಗಲ್ ಹಾಗೂ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಬೇಕಾದವರು ಎಚ್.ಡಿ.ಕುಮಾರಸ್ವಾಮಿ. ಆದ್ರೆ, ಅದಾಗಿಲ್ಲ.!

  ಆನ್ ಲೈನ್ ಲೋಕದಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿ ಇರುವವರು ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ.! ಕಳೆದ ಒಂದು ವಾರದಿಂದ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ಸೆಲೆಬ್ರಿಟಿಗಳ ಪೈಕಿ ರಾಧಿಕಾ ಕುಮಾರಸ್ವಾಮಿ ಕೂಡ ಒಬ್ಬರು.! ಮುಂದೆ ಓದಿರಿ...

  ಗೂಗಲ್ ಟ್ರೆಂಡ್ ನೋಡಿ...

  ಗೂಗಲ್ ಟ್ರೆಂಡ್ ನೋಡಿ...

  ಮೇ 15 ರ ಬಳಿಕ ಗೂಗಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ 'ರುದ್ರತಾಂಡವ' ಹೇಗಿದೆ ಅನ್ನೋದಕ್ಕೆ ಸ್ಪಷ್ಟ ಸಾಕ್ಷಿ ಇಲ್ಲಿದೆ ನೋಡಿ... ಕಳೆದ ಒಂದು ವಾರದಲ್ಲಿ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಮೊರೆ ಹೋಗಿರುವವರ ಸಂಖ್ಯೆ ಸಿಕ್ಕಾಪಟ್ಟೆ.!

  ಹೊಸ ಮದುವೆ ಗುಲ್ಲು: ನಟಿ ರಾಧಿಕಾ ಕುಮಾರಸ್ವಾಮಿ ಬಾಯ್ಬಿಟ್ಟ ಸತ್ಯ ಏನು?ಹೊಸ ಮದುವೆ ಗುಲ್ಲು: ನಟಿ ರಾಧಿಕಾ ಕುಮಾರಸ್ವಾಮಿ ಬಾಯ್ಬಿಟ್ಟ ಸತ್ಯ ಏನು?

  ಒಳ್ಳೆಯ ಕಾರಣಕ್ಕಾಗಿ ಅಲ್ಲ.!

  ಒಳ್ಳೆಯ ಕಾರಣಕ್ಕಾಗಿ ಅಲ್ಲ.!

  ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಕುಮಾರಸ್ವಾಮಿ ಒಳ್ಳೆಯ ಕಾರಣಕ್ಕಾಗಿ ಟ್ರೆಂಡ್ ಆಗಿಲ್ಲ. ಬದಲಾಗಿ, ಟ್ರೋಲ್ ಆಗುತ್ತಿದ್ದಾರೆ. ವೈಯುಕ್ತಿಕ ವಿಚಾರವಾಗಿ ರಾಧಿಕಾ ಕುಮಾರಸ್ವಾಮಿ ಯನ್ನ ಲೇವಡಿ ಮಾಡುವವರ ಸಂಖ್ಯೆ ಕಳೆದ ಒಂದು ವಾರದಲ್ಲಿ ಹೆಚ್ಚಾಗಿದೆ.

  ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?

  ರಾಧಿಕಾ ಬಗ್ಗೆ ಅಪಹಾಸ್ಯ

  ರಾಧಿಕಾ ಬಗ್ಗೆ ಅಪಹಾಸ್ಯ

  ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ಮೊದಲ ಮದುವೆ ಆದ ವರ್ಷದಲ್ಲಿ ಜನಿಸಿದ್ದ ರಾಧಿಕಾ ಕುಮಾರಸ್ವಾಮಿ, ಇದೀಗ ಈಗ ಅದೇ ಮುಖ್ಯಮಂತ್ರಿಗೆ ಎರಡನೇ ಪತ್ನಿ ಆಗಿದ್ದಾರೆ ಅಂತೆಲ್ಲ ನೆಟ್ಟಿಗರು ಅಪಹಾಸ್ಯ ಮಾಡುತ್ತಿದ್ದಾರೆ.

  ಮುಖ್ಯಮಂತ್ರಿಗಳ ಹೆಸರಿಗೆ ಕರಿ ಮಸಿ

  ಮುಖ್ಯಮಂತ್ರಿಗಳ ಹೆಸರಿಗೆ ಕರಿ ಮಸಿ

  ರಾಧಿಕಾ ಅವರ ವಿಚಾರವನ್ನಿಟ್ಟುಕೊಂಡು ಕೆಲ ಕಿಡಿಗೇಡಿಗಳು ಆನ್ ಲೈನ್ ನಲ್ಲಿ ಮುಖ್ಯಮಂತ್ರಿಗಳ ಹೆಸರಿಗೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು.

  ರಾಧಿಕಾ ಯಾರು.?

  ರಾಧಿಕಾ ಯಾರು.?

  ಮಂಗಳೂರು ಮೂಲದ ರಾಧಿಕಾ ಕುಮಾರಸ್ವಾಮಿ 2002 ರಲ್ಲಿ ಬಿಡುಗಡೆ ಆದ 'ನೀಲ ಮೇಘ ಶ್ಯಾಮ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಪದಾರ್ಪಣೆ ಮಾಡಿದರು. 'ನಿನಗಾಗಿ', 'ತವರಿಗೆ ಬಾ ತಂಗಿ', 'ಆಟೋ ಶಂಕರ್', 'ಮಂಡ್ಯ', 'ಹಠವಾದಿ', 'ಸ್ವೀಟಿ ನನ್ ಜೋಡಿ', 'ರುದ್ರತಾಂಡವ' ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿ ಆಗಿ ಅಭಿನಯಿಸಿದ್ದಾರೆ.

  ಹೆಣ್ಮಗುವಿನ ತಾಯಿ

  ಹೆಣ್ಮಗುವಿನ ತಾಯಿ

  ಸ್ವತಃ ನಟಿ ರಾಧಿಕಾ ಹೇಳಿಕೊಂಡಿರುವ ಪ್ರಕಾರ, 2006 ರಲ್ಲಿ ಅವರು ಮುಖ್ಯಮಂತ್ರಿಯೊಬ್ಬರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರ ದಾಂಪತ್ಯದ ಫಲವಾಗಿ ಅವರಿಗೆ ಶಮಿಕಾ ಎಂಬ ಮುದ್ದಾದ ಮಗಳು ಇದ್ದಾಳೆ.

  English summary
  After Karnataka Election results - 2018: Kannada Actress Radhika Kumaraswamy is Trending in Google. Why is she in news now.? Read this article.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X