»   » ರಾಧಿಕಾ ಹುಟ್ಟುಹಬ್ಬದಲ್ಲಿ ಯಾರೇ ನೀ ಅಭಿಮಾನಿ?

ರಾಧಿಕಾ ಹುಟ್ಟುಹಬ್ಬದಲ್ಲಿ ಯಾರೇ ನೀ ಅಭಿಮಾನಿ?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಅತ್ಯಂತ ಪ್ರಭಾವಿ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಸಹ ಒಬ್ಬರು. ಬುಧವಾರ (ನವೆಂಬರ್ 12) ತಮ್ಮ ಹುಟ್ಟುಹಬ್ಬವನ್ನು ಅವರು ಸ್ವಲ್ಪ ಅದ್ದೂರಿಯಾಗಿಯೇ ಆಚರಿಸಿಕೊಂಡರು. ಪ್ರತಿ ಬಾರಿ ಅವರ ಹುಟ್ಟುಹಬ್ಬ ಸಮಾರಂಭ ಸರಳವಾಗಿ ನಡೆದುಹೋಗುತ್ತಿತ್ತು.

ಆದರೆ ಈ ಸಲ ಮಾತ್ರ ಅವರ ಡಾಲರ್ಸ್ ಕಾಲೋನಿ ಮನೆ ಅಭಿಮಾನಿಗಳು, ಹಿತೈಷಿಗಳು, ಬಂಧು ಬಳಗದಿಂದ ತುಂಬಿ ಹೋಗಿತ್ತು. ಈ ಸಾವಿರಾರು ಜನರ ನಡುವೆ ರಾಧಿಕಾರ ಅಭಿಮಾನಿಯೊಬ್ಬ ಎಲ್ಲರ ಗಮನಸೆಳೆದರು.

ವಿಶೇಷವೆಂದರೆ ಈತ ಮಾಜಿ ಮುಖ್ಯಮಂತ್ರಿ ಹಾಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರತಿನಿಧಿಸಿದ್ದ ರಾಮನಗರ ಮೂಲದವರು. ಈತನ ಇನ್ನೊಂದು ವಿಶೇಷ ಎಂದರೆ ಮೈಮೇಲೆಲ್ಲಾ ರಾಧಿಕಾ ಕುಮಾರಸ್ವಾಮಿ ಅವರ ಹೆಸರು, ಚಿತ್ರಗಳನ್ನು ಹಚ್ಚೆ ಹಾಕಿಸಿಕೊಂಡಿರುವುದು.

ರಾಧಿಕಾ ಕುಮಾರಸ್ವಾಮಿ ಸ್ಪೆಷಲ್ ಅಭಿಮಾನಿ

'ತವರಿಗೆ ಬಾ ತಂಗಿ' ಚಿತ್ರದಿಂದಲೂ ಈತ ರಾಧಿಕಾ ಅಭಿಮಾನಿ. ಈ ಅಭಿಮಾನಿಯನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎಂದು ರಾಧಿಕಾ, ತಮ್ಮ ನೆಚ್ಚಿನ ತಾರೆಯನ್ನು ಕಾಣಬೇಕು ಎಂದು ಅಭಿಮಾನಿ ಹಂಬಲಿಸುತ್ತಿದ್ದ. ಕಡೆಗೆ ಇಬ್ಬರೂ ಭೇಟಿಯಾಗುವ ಸುಸಂದರ್ಭ ಬಂದೇ ಬಂತು.

ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದ

ಈತನ ಹೆಸರು ವೆಂಕಟೇಶ್ ಎಂದು. ಹಲವಾರು ವರ್ಷಗಳಿಂದ ರಾಧಿಕಾರನ್ನು ಭೇಟಿಯಾಗಬೇಕು ಎಂದು ಕನವರಿಸುತ್ತಾ ತಮ್ಮ ಕೈ ಮತ್ತು ಮೈ ಮೇಲೆಲ್ಲಾ ಹಚ್ಚೆ ಹಾಕಿಸಿಕೊಂಡು ಓಡುತ್ತಿದ್ದ. ಈತನನ್ನು ಎರಡು ವರ್ಷಗಳ ಹಿಂದೆ ಭೇಟಿಯಾಗಿದ್ದೆ.

ಭೇಟಿಯಾಗಲು ಪ್ರಯತ್ನಿಸಿ ವಿಫಲನಾಗಿದ್ದ

ಆಗ ಆತನ ಬಳಿ ಮೊಬೈಲ್ ಇರಲಿಲ್ಲ. ಸ್ವತಃ ರಾಧಿಕಾ ಅವರೇ ದುಡ್ಡು ಕೊಟ್ಟು ಮೊಬೈಲ್ ತೆಗೆದುಕೊಳ್ಳಲು ಹೇಳಿದ್ದರು. ಕಡೆಗೆ ಈತ ರಾಧಿಕಾ ಅವರ ಮನೆಗೂ ಬಂದಿದ್ದನಂತೆ. ಆದರೆ ಸೆಕ್ಯುರಿಟಿಯವರು ಈತನನ್ನು ಒಳಗೆ ಬಿಡದೆ ಹಾಗೆಯೇ ಕಳುಹಿಸಿದ್ದರಂತೆ.

ಅಣ್ಣನ ಮೂಲಕ ಭೇಟಿಯಾಗುವ ಸುವರ್ಣಾವಕಾಶ

ಇದು ರಾಧಿಕಾಗೆ ಗೊತ್ತಾಗಿ ಬಹಳ ಬೇಸರವಾಗಿದೆ. ಕಡೆಗೆ ತಮ್ಮ ಅಣ್ಣನ ಮೂಲಕ ಈ ಅಭಿಮಾನಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಎಂದು ತಮ್ಮ ಹುಟ್ಟುಹಬ್ಬ ಸಂದರ್ಭದಲ್ಲಿ ನೆನಪಿಸಿಕೊಂಡರು.

ರಾಧಿಕಾ ಅಭಿನಯಕ್ಕೆ ಫಿದಾ ಆದ ಅಭಿಮಾನಿ

ವೆಂಕಟೇಶನ ಅಭಿಮಾನವೋ, ಅತಿರೇಕವೋ ರಾಧಿಕಾ ಹೆಸರು ಸೇರಿದಂತೆ ಆಕೆ ಅಭಿನಯಿಸಿದ 25 ಚಿತ್ರಗಳ ಹೆಸರನ್ನು ಮೈತುಂಬಾ ಹಚ್ಚಿ ಹಾಕಿಸಿಕೊಂಡಿದ್ದಾನೆ. ರಾಧಿಕಾ ಅವರ ನಟನೆ ಎಂದರೆ ನನಗೆ ತುಂಬಾ ಇಷ್ಟ ಎನ್ನುತ್ತಾನೆ ವೆಂಕಟೇಶ.

English summary
Sandalwood's most influenced actress Radhika Kumaraswamy meets a special fan on her 29th birthday on 12th November. The fan Venkatesh from Ramanagar inked Radhika acted 25 movies on his hand and body.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada