ಜಿಮ್,ಡ್ಯಾನ್ಸ್ ನಲ್ಲಿ ರಾಧಿಕಾ ಕುಮಾರಸ್ವಾಮಿ ನಿರತ

ಸದ್ಯಕ್ಕೆ ರಾಧಿಕಾ ಜಿಮ್, ಡ್ಯಾನ್ಸ್ ಅಂತೆಲ್ಲಾ ನಟನೆಗೆ ಬೇಕಾದ ತಾಲೀಮು ಮಾಡಿಕೊಳ್ಳುತ್ತಿದ್ದರೆ, ಇತ್ತ ರಾಧಿಕಾ ಸಿನಿಮಾಹೀಗಿರುತ್ತಂತೆ ಚಿತ್ರದ ಟೈಟಲ್ ಹಾಗಂತೆ ಹೀಗಂತೆ ಎಂಬ ಅಂತೆ-ಕಂತೆಗಳು ಹೊರಬೀಳುತ್ತಲೇ ಇದೆ.
ಸದ್ಯದ ಸುದ್ದಿ ಏನಪ್ಪಾ ಅಂದ್ರೆ ರಾಧಿಕಾ ನಟಿಸಲಿರುವ ಹೊಸ ಚಿತ್ರದ ಹೆಸರು ಚಿಕ್ಕದಾಗಿ ಚೊಕ್ಕದಾಗಿ ಇರುತ್ತದೆ ಎಂಬುದು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ನೀಡಿರುವ ಹೇಳಿಕೆ.
ಹೀಗಾಗಿ ಕ್ಯಾಚಿ ಟೈಟಲ್‍ನ ಹುಡುಕಾಟದಲ್ಲಿದೆ ಚಿತ್ರತಂಡ. ರಾಧಿಕಾ ಈ ಹಿಂದೆ ನಿರ್ಮಿಸಿದ ಲಕ್ಕಿ ಚಿತ್ರದ ಶೀರ್ಷಿಕೆ ರೀತಿಯೇ ಚಿಕ್ಕದಾಗಿರಲಿ ಎಂಬುದು ರಾಧಿಕಾ ಸೂಚನೆ ಕೊಟ್ಟಿದ್ದಾರೆ. ಅದರಣತಿಯಂತೆಯೇ ಟೈಟಲ್ ಹುಡುಕಾಟದಲ್ಲಿದ್ದಾರೆ ನಿರ್ದೇಶಕಿ ಸಿಂಗ್.
ರಾಧಿಕಾ ಜೊತೆ ಆದಿತ್ಯ ನಟಿಸುತ್ತಿದ್ದಾರೆ. ಈ ಹಿಂದೆ ಈಶ್ವರ್ ಎಂಬ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಆ ಚಿತ್ರ ಇನ್ನೂ ಡಬ್ಬಾದಲ್ಲೇ ಇದೆ. ಅಂದಹಾಗೆ ರಾಧಿಕಾ ನಟಿಸಲಿರುವ ಹೊಸ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಬಿ.ಎ.ಮಧು ಸಂಭಾಷಣೆ ಬರೆಯುವುದು ಮಾತ್ರ ಪಕ್ಕಾ ಆಗಿದೆ.


Click it and Unblock the Notifications











