ರಾಧಿಕಾ ಕುಮಾರ ಸ್ವಾಮಿ ವಿಡಿಯೋ ವೈರಲ್: ಕಮ್ ಬ್ಯಾಕ್ ಬಗ್ಗೆ ಸೂಚನೆ!

ರಾಧಿಕಾ ಕುಮಾರಸ್ವಾಮಿ ಇತ್ತೀಚೆಗೆ ಅಷ್ಟಾಗಿ ಸಿನಿಮಾ ಮಾಡುತ್ತಿಲ್ಲ. ಸಿನಿಮಾಗಳಿಗಿಂತಲೂ ರಾಧಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ಡೇಟ್‌ಗಳನ್ನು ಕೊಡುತ್ತಾ ಇರುತ್ತಾರೆ. ಜೊತೆಗೆ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಇತ್ತೀಚೆಗೆ ರಾಧಿಕಾ ಅವರು ವಿಡಿಯೋ ಒಂದನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕನ್ನಡದ ಮೆಲೋಡಿ ಹಾಡಿಗೆ ರಾಧಿಕಾ ರೀಲ್ಸ್ ಮಾಡಿ ವಿಡಿಯೋ ಶೇರ್ ಮಾಡಿದ್ದಾರೆ. ಈ ಹಿಂದೆ ರಾಧಿಕಾ ಮಾಡಿದ್ದ ಡ್ಯಾನ್ಸ್ ವಿಡಿಯೋಗಳು ಸೂಪರ್ ಹಿಟ್ ಆಗಿದ್ದವು. ಈಗ ರಾಧಿಕಾ ಅವರು ಮತ್ತೊಂದು ವಿಡಿಯೋ ಅಪ್ಲೋಡ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಸಿಂಪಲ್ ಗೌನ್ ತೊಟ್ಟು ಬೋಟ್‌ನಲ್ಲಿ ಪ್ರಯಾಣ ಮಾಡುತ್ತಾ ಇದ್ದಾರೆ.

ಚಲಿಸುವ ಬೋಟ್‌ನಲ್ಲಿ ರಾಧಿಕಾ ಸುಂದರವಾಗಿ ಕಾಣುತ್ತಿದ್ದಾರೆ ಅವರ ಸ್ಟೈಲಿಶ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಧಿಕಾ ಕುಮಾರಸ್ಟಾಮಿ ಮತ್ತೆ ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡುವ ಸೂಚನೆ ಕೊಟ್ಟಿದ್ದಾರೆ.

ಈ ಹಿಂದೆ ರಾಧಿಕಾ ಕಪ್ಪು ಬಣ್ಣದ ಗೌನ್ ತೊಟ್ಟು ಹಿಂದಿಯ 'ಮೇರ ಯಾರ್' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಾಧಿಕಾ ಅವರ ಈ ವಿಡಿಯೋ ಕೂಡ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ವಿಡಿಯೋ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರ ಅಭಿಮಾನಿ ಬಳಗವನ್ನು ಈ ರೀತಿಯಾಗಿ ರಂಜಿಸುತ್ತಾ ಇರುತ್ತಾರೆ.

Radhika Kumaraswamy New Video Goes Viral

ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಅಭಿನಯ ಮಾತ್ರ ಅಲ್ಲ, ಅವರಿಗೆ ಡಾನ್ಸ್‌ನಲ್ಲೂ ಅಷ್ಟೇ ಹೆಚ್ಚಿನ ಆಸಕ್ತಿ ಇದೆ. ಇದೀಗ ಹರೆಯದ ಹುಡುಗಿರು ಕೂಡ ನಾಚುವಂತೆ ಡಾನ್ಸ್ ಮಾಡಿದ್ದಾರೆ. ಸಿಕ್ಕಾ ಪಟ್ಟೆ ಎನರ್ಜಿ ಇಂದ ರಾಧಿಕಾ ಈ ವಿಡಿಯೋದಲ್ಲಿ ಡಾನ್ಸ್ ಮಾಡಿದ್ದಾರೆ. ಅವರ ಎನರ್ಜಿ ಬಗ್ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಇನ್ನು ರಾಧಿಕಾ ಮುಂದೆ ಯಾವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಆದರೆ ಅವರು ಆದಷ್ಟು ಬೇಗ ಮತ್ತೊಂದು ಸಿನಿಮಾ ಮಾಡಲಿ ಅನ್ನುವುದ ಅಭಿಮಾನಿಗಳ ಆಸೆ. ಅದನ್ನು ಕೂಡ ಸಾಕಷ್ಟು ಮಂದಿ ಕಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.

More from Filmibeat

English summary
Radhika Kumaraswamy New Video Goes Viral, Soon Radhika Kumaraswamy will Comeback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X