For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನಿಗೆ ತಂಗಿ ರಾಧಿಕಾ ಕುಮಾರಸ್ವಾಮಿ ಭರ್ಜರಿ ಗಿಫ್ಟ್

  By Rajendra
  |

  ತೆರೆಯ ಮೇಲೆ ಇವರಿಬ್ಬರದ್ದೂ ಎಂಥಾ ಜೋಡಿ ಅಂತೀರಾ. ಜನುಮದ ಜೋಡಿಯನ್ನೂ ಮೀರಿಸಿದ ಅಣ್ಣ ತಂಗಿ ಜೋಡಿ. "ಅಣ್ಣ ತಂಗಿಯ ಅನುಬಂಧ ಜನುಮ ಜನುಮದ ಸಂಬಂಧ" ಎಂದು ಹಾಡಿ ಅಣ್ಣ ತಂಗಿಯರ ಬಾಂಧವ್ಯಕ್ಕೆ ಹೊಸ ಸ್ಪರ್ಶ ನೀಡಿ ಎಂಟು ವರ್ಷಗಳೇ ಉರುಳೀ ಹೋಗಿವೆ.

  ಈಗ ಮತ್ತೊಮ್ಮೆ ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ಬಂದಿದೆ. ತೆರೆಯ ಮೇಲೆ ಅಣ್ಣತಂಗಿಯಾಗಿ ಅಭಿನಯಿಸಿದ ಜೋಡಿ ನಿಜಜೀವನದಲ್ಲೂ ಅಣ್ಣತಂಗಿಯಾಗಿಯೇ ಉಳಿದಿದ್ದಾರೆ. ಪ್ರೀತಿಯ ಅಣ್ಣನಿಗೆ ರಾಧಿಕಾ ಉಡುಗೊರೆ ನೀಡಲು ಸಿದ್ಧವಾಗಿದ್ದಾರೆ.

  ಸುಮಾರು 17 ಗ್ರಾಂ ತೂಕದ ಚಿನ್ನದ ರಾಖಿಯನ್ನು ಮಂಗಳವಾರ (ಆ.20) ಶಿವಣ್ಣನಿಗೆ ಕಟ್ಟಲಿದ್ದಾರೆ. ಸಾಯಿಗೋಲ್ಡ್ ಪ್ಯಾಲೇಸ್ ತಯಾರಿಸಿರುವ ಈ ರಾಖಿ ಬೆಲೆ ರು.55 ಸಾವಿರ ಎನ್ನುತ್ತವೆ ಮೂಲಗಳು. ರಕ್ಷಾಬಂಧನದ ದಿನ ತಂಗಿಯಿಂದ ಶಿವಣ್ಣ ಈ ರಾಖಿ ಕಟ್ಟಿಸಿಕೊಳ್ಳಲಿದ್ದಾರೆ.

  ಸ್ವೀಟಿ ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ರಾಧಿಕಾ ಅವರು ಮಾತನಾಡುತ್ತಾ, "ಶಿವಣ್ಣ ಜೊತೆ ನಾನು ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ (ಅಣ್ಣ ತಂಗಿ, ರಿಷಿ, ತವರಿಗೆ ಬಾ ತಂಗಿ). ಆ ಮೂರು ಚಿತ್ರಗಳು ಶತದಿನೋತ್ಸವ ಆಚರಿಸಿಕೊಂಡಿವೆ. ಈಗ ಸೂಕ್ತವಾದ ಕತೆ ಸಿಕ್ಕಿದರೆ ಮತ್ತೊಮ್ಮೆ ಅಭಿನಯಿಸುತ್ತೇನೆ. ಅದು ತಂಗಿ ಪಾತ್ರವಾದರೂ ಸರಿ" ಎಂದಿದ್ದರು.

  ಬಹುಶಃ ಈಗ ಅದಕ್ಕೆ ಕಾಲ ಕೂಡಿಬಂದಿರಬಹುದೇನೋ? ಇನ್ನೊಂದು ಅಂದಾಜಿನ ಪ್ರಕಾರ, ರಕ್ಷಾ ಬಂಧನದ ದಿನವೇ ಶಿವಣ್ಣ ರಾಧಿಕಾ ಜೋಡಿಯ ಅಣ್ಣ ತಂಗಿ ಚಿತ್ರದ ಸೆಟ್ಟೇರುವ ಸಾಧ್ಯತೆಗಳಿವೆ. ಪ್ರೇಕ್ಷಕರ ಕೈಗೆ ಕರವಸ್ತ್ರ ಕೊಡಲು ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿದೆಯೇ? (ಒನ್ಇಂಡಿಯಾ ಕನ್ನಡ)

  English summary
  Kannada actress Radhika Kumaraswamy tying a rakhi (sacred thread) to Hat trick Hero Shivrajkumar wrist on Wednesday (20th August Raksha Bandhan). The specially designed rakhi thread contains 17 gm gold and costs Rs.55 thousand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X