»   » ಕುಮಾರಸ್ವಾಮಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ರಾಧಿಕಾ ಖಡಕ್ ಉತ್ತರ

ಕುಮಾರಸ್ವಾಮಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ರಾಧಿಕಾ ಖಡಕ್ ಉತ್ತರ

Posted By:
Subscribe to Filmibeat Kannada

ನಟಿ ರಾಧಿಕಾ ಮತ್ತು ಹೆಚ್.ಡಿ ಕುಮಾರಸ್ವಾಮಿ ದಂಪತಿಯ ಮಧ್ಯೆ ಎಲ್ಲವೂ ಸರಿಯಿಲ್ಲ, ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ, ಹೀಗಾಗಿ, ಪರಸ್ಪರ ಬೇರೆ ಬೇರೆ ಇದ್ದಾರೆ ಎಂಬ ಸುದ್ದಿಗಳು ಇತ್ತೀಚೆಗೆ ಹೆಚ್ಚಾಗಿತ್ತು.

ಇನ್ನು ರಾಧಿಕಾ ಅವರ ಜೊತೆ ಕುಮಾರಸ್ವಾಮಿ ಅವರ ಹೆಸರನ್ನ ಬಳಸಬಾರದಂತೆ ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು.

ಹಾಗಿದ್ರೆ, ನಿಜಕ್ಕೂ ರಾಧಿಕಾ ಮತ್ತು ಕುಮಾರಸ್ವಾಮಿ ಅವರ ದಾಂಪತ್ಯ ಜೀವನ ಉತ್ತಮವಾಗಿದ್ಯಾ? ಇಬ್ಬರು ಒಟ್ಟಿಗೆ ಇದ್ದಾರ? ಈ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರೇ ಸ್ವತಃ ಮಾತನಾಡಿದ್ದು ಟೀಕಾಕಾರರಿಗೆ, ಗಾಸಿಪ್ ರೂವಾರಿಗಳಿಗೆ ಬೆಂಡತ್ತಿದ್ದಾರೆ.

ನಾವು ಒಟ್ಟಿಗೆ ಇದ್ದೇವೆ

''ನಾನು ಅವರು ಬೇರೆಯಾಗಿದ್ದೇವೆ ಎಂದು ಹೇಳಿದ್ದು ಯಾರು? ನಾನು ಹೇಳಿದ್ನಾ..? ಅವರು ಹೇಳಿದ್ರಾ..? ಎಲ್ಲವನ್ನೂ ಊಹೆ ಮಾಡಿಕೊಳ್ಳುತ್ತೀರಿ. ಬರೆಯುತ್ತೀರಿ. ನಾನೂ ಅವರು ದೂರವಾಗಿಲ್ಲ'' - ರಾಧಿಕಾ ಕುಮಾರಸ್ವಾಮಿ, ನಟಿ

ಹೊಸ ಮದುವೆ ಗುಲ್ಲು: ನಟಿ ರಾಧಿಕಾ ಕುಮಾರಸ್ವಾಮಿ ಬಾಯ್ಬಿಟ್ಟ ಸತ್ಯ ಏನು?

ಎಲ್ಲ ಶುದ್ಧ ಸುಳ್ಳು

''ಏನೇನೋ ಗಾಳಿ ಸುದ್ದಿಗಳಿವೆ. ನಾನು ಬೆಂಗಳೂರಿನಲ್ಲಿ ಇಲ್ಲ. ಲಂಡನ್‍ನಲ್ಲಿದ್ದೇನೆ, ಮಂಗಳೂರಿನಲ್ಲಿದ್ದೇನೆ ಅನ್ನೋ ಸುದ್ದಿಯಿದೆ. ಅಷ್ಟೇ ಯಾಕೆ, ನನಗೆ ಮೂವರು ಮಕ್ಕಳು. ಒಬ್ಬರನ್ನು ಲಂಡನ್‍ನಲ್ಲಿ, ಮತ್ತೊಬ್ಬರನ್ನು ಯಾರಿಗೋ ಕೊಟ್ಟು ಮಂಗಳೂರಿನಲ್ಲಿ ಸಾಕಿಸುತ್ತಿದ್ದೇನೆ, ಒಂದು ಮಗುವನ್ನು ಮಾತ್ರ ನಾನು ಸಾಕುತ್ತಿದ್ದೇನೆ ಎಂದೆಲ್ಲ ಸುಳ್ಳು ಸುದ್ದಿಗಳಿವೆ. ಏನು ಹೇಳೋದು. ನಾನು ಈಗಲೂ ಬೆಂಗಳೂರಿನಲ್ಲೇ ಇದ್ದೇನೆ. ನಮಗೆ ಇರುವುದು ಒಂದೇ ಮಗು'' - ರಾಧಿಕಾ ಕುಮಾರಸ್ವಾಮಿ, ನಟಿ

ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹಬ್ಬಿದ ಗಾಸಿಪ್ ಸುಳ್ಳು!

ನಮ್ಮ ಕುಟುಂಬ ಚೆನ್ನಾಗಿದೆ

''ನಾನೂ, ಅವರು ದೂರವಾಗಿಲ್ಲ. ನನ್ನ ಮಗಳು ಸ್ಕೂಲ್ ಗೆ ಹೋಗುತ್ತಿದ್ದಾಳೆ. ಅದು ಅವರಿಗೆ ಗೊತ್ತಿದೆ. ಹೀಗಾಗಿ ನಾವೂ ಕುಟುಂಬದವರ ಹಾಗೆಯೇ ಇದ್ದೇವೆ'' - ರಾಧಿಕಾ ಕುಮಾರಸ್ವಾಮಿ, ನಟಿ

ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?

ನಾನೂ ಯಾವತ್ತಿದ್ರೂ ರಾಧಿಕಾ ಕುಮಾರಸ್ವಾಮಿ

''ನನ್ನ ಹೆಸರು ಸಾಯುವ ತನಕ ಅವರ ಹೆಸರಿನ ಜೊತೆ ಇರುತ್ತೆ. ನನ್ನನ್ನು ಬರೀ ರಾಧಿಕಾ ಎಂದು ಬರೆಯಬೇಡಿ. ರಾಧಿಕಾ ಕುಮಾರಸ್ವಾಮಿ ಎಂದೇ ಬರೆಯಿರಿ'' - ರಾಧಿಕಾ ಕುಮಾರಸ್ವಾಮಿ, ನಟಿ

ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?

ಕಾಂಟ್ರ್ಯಾಕ್ಟ್ ಚಿತ್ರದಲ್ಲಿ ನಟನೆ

ರುದ್ರತಾಂಡವ ಚಿತ್ರದ ನಂತರ ರಾಧಿಕಾ ಕುಮಾರಸ್ವಾಮಿ ಬೇರೆ ಯಾವ ಚಿತ್ರದಲ್ಲಿ ನಟಿಸಿರಲಿಲ್ಲ. ಸ್ಟಾರ್ ಸುರ್ವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದಾರೆ. ಈಗ ಕಾಂಟ್ರ್ಯಾಕ್ಟ್ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ರೀಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ 'ರಿಯಲ್' ಲೈಫ್ ಸ್ಟೋರಿ.?

English summary
Radhika Kumaraswamy Talk About her Husband hd Kumaraswamy and Clears all Gossip Around her Family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada