»   » ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?

ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?

Posted By:
Subscribe to Filmibeat Kannada

ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಸದ್ದು ಮಾಡಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಸ್ಯಾಂಡಲ್ ವುಡ್ ನಿಂದ ಇದ್ದಕ್ಕಿದ್ದಂತೆ ಗಾಯಬ್ ಆಗಿದ್ದ 'ಸ್ವೀಟಿ' ರಾಧಿಕಾ ಈಗ ಸುದ್ದಿಯಲ್ಲಿದ್ದಾರೆ.

'ಓಹ್....ರಾಧಿಕಾ ಮೇಡಂ ಮತ್ತೆ ಬಣ್ಣ ಹಚ್ಚುತ್ತಿರಬೇಕು' ಅಂತ ಸಿನಿ ರಸಿಕರು ಭಾವಿಸಬೇಕಾಗಿಲ್ಲ. ಯಾಕಂದ್ರೆ, ನಟಿ ರಾಧಿಕಾ ಕುಮಾರಸ್ವಾಮಿ ಇನ್ಮುಂದೆ ಸಿನಿಮಾ ಮಾಡಲ್ಲ ಎಂಬ ಶಾಕಿಂಗ್ ನ್ಯೂಸ್ ಈಗಾಗಲೇ ಬ್ರೇಕ್ ಆಗಿದೆ. [ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?]

ಬೆಂಗಳೂರಿನಿಂದ ಗಂಟು-ಮೂಟೆ ಕಟ್ಟಿಕೊಂಡು ಕರಾವಳಿ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದ್ದ ರಾಧಿಕಾ ಕುಮಾರಸ್ವಾಮಿ ಈಗೆಲ್ಲಿದ್ದಾರೆ.? ಏನ್ಮಾಡ್ತಿದ್ದಾರೆ? ಅಂತ ಹುಡುಕ್ಕೊಂಡು ಹೊರಟಾಗ ಅಚ್ಚರಿ ವಿಷಯ ಬಯಲಾಗಿದೆ..! ಮುಂದೆ ಓದಿ.....

ಅಚ್ಚರಿ ಸಂಗತಿ ಏನು.?

ಆಕ್ಟಿಂಗ್ ಗೆ ಗುಡ್ ಬೈ ಹೇಳಿರುವ ನಟಿ ರಾಧಿಕಾ ಕುಮಾರಸ್ವಾಮಿ ಹೊಸ ವ್ಯವಹಾರಕ್ಕೆ ಕೈ ಹಾಕಿದ್ದಾರೆ. ಆ ಬಿಜಿನೆಸ್ ಯಾವುದು ಅಂತ ಹೇಳ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಇಟ್ಟಿಗೆ ಬಿಜಿನೆಸ್ ಮಾಡ್ತಾರೆ ನಟಿ ರಾಧಿಕಾ ಕುಮಾರಸ್ವಾಮಿ.!

ಗಾಂಧಿನಗರದ ಅಂಗಳದಲ್ಲಿ ಸದ್ಯ ಸ್ಫೋಟಕಗೊಂಡಿರುವ ಸುದ್ದಿ ಅಂದ್ರೆ ಇದೇ.! ನಟಿ ರಾಧಿಕಾ ಕುಮಾರಸ್ವಾಮಿ ಇಟ್ಟಿಗೆ ಬಿಜಿನೆಸ್ ಶುರುಮಾಡಿದ್ದಾರೆ. [ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹಬ್ಬಿದ ಗಾಸಿಪ್ ಸುಳ್ಳು!]

ಇಟ್ಟಿಗೆ ಫ್ಯಾಕ್ಟರಿ ಕೊಂಡುಕೊಂಡಿರುವ ರಾಧಿಕಾ.!

ಮೂಲಗಳ ಪ್ರಕಾರ, ಮಾಗಡಿ ತಾಲೂಕಿನ ಸೋಲೂರು ಎಂಬಲ್ಲಿ ಇಟ್ಟಿಗೆ ಫ್ಯಾಕ್ಟರಿ ಗುತ್ತಿಗೆ ಪಡೆದಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ. [ರಾಧಿಕಾ ಕುಮಾರಸ್ವಾಮಿ ಬಗ್ಗೆ ನಟಿ ರಮ್ಯಾ ಮಾಡಿದ ಕಾಮೆಂಟ್ ಏನು?]

ಕೋಟಿ ಕೊಟ್ಟು ಇಟ್ಟಿಗೆ ಫ್ಯಾಕ್ಟರಿ ಗುತ್ತಿಗೆ

ಬರೋಬ್ಬರಿ ಒಂದು ಕೋಟಿ ರೂಪಾಯಿ ಕೊಟ್ಟು ನಟಿ ರಾಧಿಕಾ ಕುಮಾರಸ್ವಾಮಿ ಸೋಲೂರು ಬಳಿ ಇರುವ ಇಟ್ಟಿಗೆ ಫ್ಯಾಕ್ಟರಿ ಗುತ್ತಿಗೆ ಪಡೆದಿದ್ದಾರೆ ಎನ್ನಲಾಗಿದೆ.

ಸಹೋದರನ ಮುಖಾಂತರ ಫ್ಯಾಕ್ಟರಿ ಗುತ್ತಿಗೆ.!

ಅಸಲಿಗೆ, ಇಟ್ಟಿಗೆ ಫ್ಯಾಕ್ಟರಿ ರಘು ಎಂಬುವರ ಒಡೆತನದಲ್ಲಿತ್ತು. ರಾಧಿಕಾ ಸಹೋದರ ರವಿರಾಜ್ ಗೆ ರಘು ಹಳೇ ಪರಿಚಯ. ರವಿರಾಜ್ ಸಲಹೆ ಮೇರೆಗೆ ರಾಧಿಕಾ, ರಘು ರವರ ಇಟ್ಟಿಗೆ ಫ್ಯಾಕ್ಟರಿ ಗುತ್ತಿಗೆ ಪಡೆದಿದ್ದಾರಂತೆ.

ಪೂಜೆ ಮುಗಿದಿದೆ.!

ವರದಿಗಳ ಪ್ರಕಾರ, ನಿನ್ನೆ (ಸೋಮವಾರ ಜೂನ್ 6) ಇಟ್ಟಿಗೆ ಫ್ಯಾಕ್ಟರಿಗೆ ಆಗಮಿಸಿ, ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಕುಟುಂಬದವರು ಪೂಜೆ ನೆರವೇರಿಸಿ, ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಮಾಗಡಿ ಬಳಿ ಜಮೀನು ಖರೀದಿ?

ಸೋಲೂರು ಬಳಿ ಇಟ್ಟಿಗೆ ಫ್ಯಾಕ್ಟರಿ ಖರೀದಿ ಮಾಡಿರುವ ಸುದ್ದಿ ಬಯಲಾಗುತ್ತಿದ್ದಂತೆ, ನಟಿ ರಾಧಿಕಾ ಕುಮಾರಸ್ವಾಮಿ ಮಾಗಡಿ ಬಳಿ ಜಮೀನು ಖರೀದಿಸಲಿದ್ದಾರೆ ಅಂತ ಗುಲ್ಲೆದ್ದಿದೆ.

ಚಿತ್ರರಂಗಕ್ಕೆ ಗುಡ್ ಬೈ ಗ್ಯಾರೆಂಟಿ.?

ನಟಿ ರಾಧಿಕಾ ಕುಮಾರಸ್ವಾಮಿ ರವರ ಈ ನಡೆ ನೋಡಿದ್ರೆ, ಇನ್ಮುಂದೆ ಅವರು ನಟಿಸುವುದು ಡೌಟ್ ಎಂಬುದು ಗಾಂಧಿನಗರದ ಪಂಡಿತರ ಅಭಿಪ್ರಾಯ. [ನಟನೆಗೆ ಗುಡ್ ಬೈ ಹೇಳ್ತಾರಂತೆ ನಟಿ ರಾಧಿಕಾ ಕುಮಾರಸ್ವಾಮಿ.!]

'ನಮಗಾಗಿ' ಚಿತ್ರವೇ ಕೊನೆ.!

ಮೂಲಗಳ ಪ್ರಕಾರ, ರಾಧಿಕಾ ಕುಮಾರಸ್ವಾಮಿ ಅಭಿನಯಿಸುವ ಕೊನೆಯ ಚಿತ್ರ 'ನಮಗಾಗಿ'.

ನಿರ್ಮಾಪಕಿ ಆಗಿ ಮುಂದುವರಿಯುತ್ತಾರಾ.?

ನಟನೆಗೆ ಪೂರ್ಣ ವಿರಾಮ ಇಡಲು ನಿರ್ಧರಿಸಿರುವ ರಾಧಿಕಾ ಕುಮಾರಸ್ವಾಮಿ ನಿರ್ಮಾಪಕಿ ಆಗಿ ಸ್ಯಾಂಡಲ್ ವುಡ್ ನಲ್ಲಿ ಮುಂದುವರಿಯುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

English summary
Kannada Actress cum Producer Radhika Kumaraswamy has decided to start Bricks Making Business. According to the reports, Radhika Kumaraswamy has paid Rs.1 Crore for Bricks Factory in Soluru, Near Magadi Taluk in terms of lease.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada