ಯಾವುದೇ ಪಕ್ಷದ ಚುನಾವಣಾ ಪ್ರಚಾರಕ್ಕೆ ಹೋಗಲ್ವಂತೆ ನಟಿ ರಾಧಿಕಾ ಕುಮಾರಸ್ವಾಮಿ

By Harshitha

Recommended Video

ರಾಧಿಕಾ ಕುಮಾರಸ್ವಾಮಿ ಈ ಬಾರಿ ಯಾರಿಗೆ ಪ್ರಚಾರ ಮಾಡ್ತಾರೆ ಗೊತ್ತಾ ? | Filmibeat Kananda

ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಹತ್ತಿರ ಬಂತು. ಎಲೆಕ್ಷನ್ ಗೆ ದಿನಗಣನೆ ಶುರುವಾಗಿರುವಾಗಲೇ, ಪ್ರಮುಖ ರಾಜಕೀಯ ಪಕ್ಷಗಳು ಸ್ಟಾರ್ ನಟ-ನಟಿಯರನ್ನ ಪ್ರಚಾರಕ್ಕೆ ಕರೆ ತರುವ ಪ್ರಯತ್ನ ನಡೆಸಿವೆ.

ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ, ರಾಧಿಕಾ ಕುಮಾರಸ್ವಾಮಿ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಇದ್ದಾರೆ. ಹಾಗಾದ್ರೆ, ಚುನಾವಣಾ ಅಭ್ಯರ್ಥಿಗಳ ಪ್ರಚಾರಕ್ಕೆ ರಾಧಿಕಾ ಕುಮಾರಸ್ವಾಮಿ ಬರ್ತಾರಾ.?

ಈ ಪ್ರಶ್ನೆಯನ್ನ ನಟಿ ರಾಧಿಕಾ ಕುಮಾರಸ್ವಾಮಿ ಮುಂದಿಟ್ಟಾಗ ಬರುವ ಉತ್ತರ ''ಇಲ್ಲ''. ಯಾಕಂದ್ರೆ, ರಾಧಿಕಾ ಬಳಿ ಸಮಯವಿಲ್ಲ.

Radhika Kumaraswamy will not take part in election campaign

ಸದ್ಯಕ್ಕೆ ಮೂರು ಚಿತ್ರಗಳ ಚಿತ್ರೀಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಬಿಜಿಯಾಗಿದ್ದಾರೆ. 'ರಾಜೇಂದ್ರ ಪೊನ್ನಪ್ಪ', 'ಕಾಂಟ್ರ್ಯಾಕ್ಟ್' ಹಾಗೂ 'ಭೈರಾ ದೇವಿ' ಚಿತ್ರಗಳ ಶೂಟಿಂಗ್ ನಲ್ಲಿ ತೊಡಗಿರುವ ರಾಧಿಕಾ ಕುಮಾರಸ್ವಾಮಿಗೆ ಬಿಡುವಿಲ್ಲ. ಫ್ರೀ ಟೈಮ್ ಸಿಕ್ಕರೆ, ಮಗಳ ಜೊತೆಗೆ ಕಾಲ ಕಳೆಯಲು ಬಯಸುವ ರಾಧಿಕಾ, ಯಾವ ಪಕ್ಷದ ಪರವಾಗಲಿ, ಅಭ್ಯರ್ಥಿಗಳ ಪರವಾಗಲಿ ಪ್ರಚಾರ ಮಾಡುವುದಿಲ್ಲವಂತೆ.

'ರಾಜಕೀಯದಲ್ಲಿ ಆಸಕ್ತಿ ಇಲ್ಲ, ಸಿನಿಮಾದಲ್ಲಿ ಖುಷಿಯಾಗಿದ್ದೇನೆ' ಅಂತ ಹೇಳುವ ರಾಧಿಕಾ ಕುಮಾರಸ್ವಾಮಿ, ತಮ್ಮ ಪ್ರೊಡಕ್ಷನ್ ಹೌಸ್ ನಿಂದ ಹೊಸಬರಿಗೆ ಅವಕಾಶ ನೀಡುವ ಮನಸ್ಸು ಮಾಡಿದ್ದಾರೆ.

More from Filmibeat

English summary
Kannada Actress Radhika Kumaraswamy makes it clear that she will not take part in election campaign for Upcoming Karnataka Assembly Elections 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X