For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಕುಮಾರಸ್ವಾಮಿ ಪುತ್ರಿ ಶಮಿಕಾಗೆ ಇರುವ ಆಸೆ ಏನ್ಗೊತ್ತಾ.?

  By Harshitha
  |
  ರಾಧಿಕಾ ಮಗಳಿಗೆ ಇದೆ ದೊಡ್ಡ ಆಸೆ..! | Filmibeat Kannada

  ಮದುವೆ ಆಗಿ ಒಂದು ಮಗುವಿನ ತಾಯಿ ಆಗಿದ್ದರೂ, ನಟಿ ರಾಧಿಕಾ ಕುಮಾರಸ್ವಾಮಿಯ ಗ್ಲಾಮರ್ ಕೊಂಚ ಕೂಡ ಕಡಿಮೆ ಆಗಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಧಿಕಾ ಕುಮಾರಸ್ವಾಮಿ ಕೈಯಲ್ಲಿ ಈಗಲೂ ಬೇಜಾನ್ ಚಿತ್ರಗಳಿವೆ.

  'ಕಾಂಟ್ರ್ಯಾಕ್ಟ್', 'ಭೈರಾ ದೇವಿ', 'ದಮಯಂತಿ', 'ರಾಜೇಂದ್ರ ಪೊನ್ನಪ್ಪ' ಚಿತ್ರಗಳ ಶೂಟಿಂಗ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಬಿಜಿಯಾಗಿದ್ದಾರೆ. ಒಂದು ಕಡೆ ಚಿತ್ರೀಕರಣ, ಇನ್ನೊಂದು ಕಡೆ ಬಿಸಿನೆಸ್... ಈ ಎರಡರ ನಡುವೆ ಪುತ್ರಿ ಶಮಿಕಾಗೂ ರಾಧಿಕಾ ಕುಮಾರಸ್ವಾಮಿ ಸಮಯ ನೀಡುತ್ತಿದ್ದಾರೆ.

  ನಟಿ ವಿಜಯಲಕ್ಷ್ಮಿಗೆ ಮಾನಸಿಕ ಸ್ಥೈರ್ಯ ತುಂಬಿದ ರಾಧಿಕಾ ಕುಮಾರಸ್ವಾಮಿ ನಟಿ ವಿಜಯಲಕ್ಷ್ಮಿಗೆ ಮಾನಸಿಕ ಸ್ಥೈರ್ಯ ತುಂಬಿದ ರಾಧಿಕಾ ಕುಮಾರಸ್ವಾಮಿ

  ಅಂದ್ಹಾಗೆ, ಪುಟಾಣಿ ಶಮಿಕಾ ಮನಸ್ಸಿನಲ್ಲಿ ಇರುವ ಆಸೆ ಏನ್ಗೊತ್ತಾ.? ''ತಾಯಿಯಂತೆ ಮಗಳು'' ಎನ್ನುವ ಹಾಗೆ 'ನಟಿ'ಯಾಗಬೇಕು ಎಂಬ ಬಯಕೆ ಶಮಿಕಾಗೆ ಕಾಡುತ್ತಿದೆ. ಹಾಗಂತ ಸ್ವತಃ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

  ಜನಪ್ರಿಯ ನಟಿಯಾಗಬೇಕು ಎಂಬ ಬೆಟ್ಟದಷ್ಟು ಆಸೆ ಹೊತ್ತು ರಾಧಿಕಾ ಕುಮಾರಸ್ವಾಮಿ ಚಿತ್ರರಂಗ ಪ್ರವೇಶಿಸಿದರು. ವಿಜಯ ರಾಘವೇಂದ್ರ, ಉಪೇಂದ್ರ, ಶಿವರಾಜ್ ಕುಮಾರ್, ದರ್ಶನ್, ರವಿಚಂದ್ರನ್ ಜೊತೆಗೆ ತೆರೆ ಹಂಚಿಕೊಂಡು ರಾಧಿಕಾ ಕುಮಾರಸ್ವಾಮಿ ಯಶಸ್ವಿ ಹಾಗೂ ಬಹುಬೇಡಿಕೆಯ ನಾಯಕಿ ಆಗಿದ್ದಾರೆ.

  ರಾಧಿಕಾ ಕುಮಾರಸ್ವಾಮಿಗೆ ಈ ಮೂರು ದೊಡ್ಡ ಆಸೆಗಳಿವೆರಾಧಿಕಾ ಕುಮಾರಸ್ವಾಮಿಗೆ ಈ ಮೂರು ದೊಡ್ಡ ಆಸೆಗಳಿವೆ

  ಅಮ್ಮನಂತೆ ಬೆಳ್ಳಿ ತೆರೆ ಮೇಲೆ ಮಿಂಚಬೇಕು ಎಂಬ ಇಚ್ಛೆ ಶಮಿಕಾಗೆ ಇದೆ. ಹೇಳಿ ಕೇಳಿ ರಾಧಿಕಾ ಕುಮಾರಸ್ವಾಮಿ ನಟಿ ಜೊತೆಗೆ ನಿರ್ಮಾಪಕಿ ಕೂಡ. ರಾಧಿಕಾ ಕುಮಾರಸ್ವಾಮಿ ಬ್ಯಾನರ್ ಮೂಲಕವೇ ಮುಂದೊಂದು ದಿನ ಶಮಿಕಾ ನಾಯಕಿ ಆಗಿ ನಿಮ್ಮೆಲ್ಲರ ಮುಂದೆ ಬಂದರೂ ಬರಬಹುದು.!

  English summary
  Kannada Actress Radhika Kumaraswamy's daughter Shamika wants to become Actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X