For Quick Alerts
  ALLOW NOTIFICATIONS  
  For Daily Alerts

  'ಚೇಸ್' ಮೂಲಕ ಒಟ್ಟಿಗೆ ಬರ್ತಿದ್ದಾರೆ ಶೀತಲ್ ಶೆಟ್ಟಿ ಮತ್ತು ರಾಧಿಕಾ ನಾರಾಯಣ್

  |

  ನಿರೂಪಕಿಯಾಗಿ ಖ್ಯಾತಿಗಳಿಸಿದ್ದ ಶೀತಲ್ ಶೆಟ್ಟಿ ನಂತರ ನಾಯಕಿಯಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡರು. ಕಳೆದ ವರ್ಷ 'ಪತಿ ಬೇಕು. com' ಚಿತ್ರದಲ್ಲಿ ಮಿಂಚಿದ್ದ ಶೀತಲ್ ನಂತರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ವರ್ಷದ ಬಳಿಕ ಈಗ ಶೀತಲ್ 'ಚೇಸ್' ಚಿತ್ರದ ಮೂಲಕ ಚಿತ್ರಾಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಶೀತಲ್ ಗೆ ಇಲ್ಲಿ ನಟಿ ರಾಧಿಕಾ ನಾರಾಯಣ ಸಾಥ್ ನೀಡಿದ್ದಾರೆ.

  ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ 'ಚೇಸ್' ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ 'ಚೇಸ್' ಚಿತ್ರದ ಟೀಸರ್ ಅನ್ನು ಇತ್ತೀಚಿಗಷ್ಟೆ ಚಿತ್ರರಂಗದ ದಿಗ್ಗಜರಾದ ಎಸ್.ಕೆ ಭಗವಾನ್, ಓಂ ಸಾಯಿ ಪ್ರಕಾಶ್ ಹಾಗೂ ಬರಗೂರು ರಾಮಚಂದ್ರಪ್ಪ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  ಹಿಮಾಚಲ ಪ್ರದೇಶದ ಶೀತದಲ್ಲಿ ಶೀತಲ್ ಶೆಟ್ಟಿ ಏನ್ ಮಾಡ್ತಿದ್ದಾರೆ?ಹಿಮಾಚಲ ಪ್ರದೇಶದ ಶೀತದಲ್ಲಿ ಶೀತಲ್ ಶೆಟ್ಟಿ ಏನ್ ಮಾಡ್ತಿದ್ದಾರೆ?

  ಕ್ರೈಂ, ಥ್ರಿಲ್ಲರ್, ಮಿಸ್ಟ್ರಿ ಕಥೆ ಇರುವ 'ಚೇಸ್' ಚಿತ್ರದಲ್ಲಿ ಶೀತಲ್ ಶೆಟ್ಟಿ ಮತ್ತು ನಟಿ ರಾಧಿಕಾ ನಾರಾಯಣ್ ಸೇರಿದಂತೆ ಬಾಲಿವುಡ್ ನಟ ಸುಶಾಂತ್ ಪೂಜಾರಿ, ಅವಿನಾಶ್ ನರಸಿಂಹರಾಜು, ಅರ್ಜುನ್ ಯೋಗಿ, ಅರವಿಂದ ರಾವ್, ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ ಸೇರಿದಂತೆ ಕಲಾವಿದರ ದಂಡೆ ಚಿತ್ರದಲ್ಲಿದೆ.

  'ಚೇಸ್' ನಿರ್ದೇಶಕ ವಿಲೋಕ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಮೂಲಕ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಮೂವರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಪುಟ್ಟ ಟೀಸರ್ ಮೂಲಕ ಚಿತ್ರಾಭಿಮಾನಿಗಳ ಮನ ಸೆಳೆದಿರುವ 'ಚೇಸ್' ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.

  English summary
  Kannada actress Radhika Narayana and Sheetal Shetty starrer Chase movie teaser released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X