For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ ಮುದ್ದು ಮಗನ ಹೆಸರು ಬಹಿರಂಗ

  |

  ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಗನ ಹೆಸರು ಬಹಿರಂಗವಾಗಿದೆ. ಯಶ್ ಮತ್ತು ರಾಧಿಕಾ ಮಗನ ನಾಮಕರಣದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ರಾಕಿಂಗ್ ಸ್ಟಾರ್ ಪುತ್ರನಿಗೆ ಏನು ಹೆಸರಿಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಮಗನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹೊಂಚಿಕೊಂಡರೆ ಸಾಕು ಅಭಿಮಾನಿಗಳು ಹೆಸರಿನ ಬಗ್ಗೆ ಚರ್ಚೆ ಮಾಡುತ್ತಿದ್ದರು. ಇದೀಗ ಯಶ್ ದಂಪತಿಯ ಎರಡನೇ ಮಗುವಿನ ಹೆಸರನ್ನು ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮುಂದೆ ಓದಿ..

  ಮುದ್ದು ಮಗನಿಗೆ ಹೆಸರು ಹುಡುಕಿದ ರಾಧಿಕಾ-ಯಶ್ ದಂಪತಿ

   ಯಶ್ ಮುದ್ದು ಮಗನ ಹೆಸರು ಯಥರ್ವ್

  ಯಶ್ ಮುದ್ದು ಮಗನ ಹೆಸರು ಯಥರ್ವ್

  ಅಂದ್ಹಾಗೆ ಯಶ್ ಮತ್ತು ರಾಧಿಕಾ ದಂಪತಿಯ ಮುದ್ದು ಮಗನಿಗೆ "ಯಥರ್ವ್ ಯಶ್" ಎಂದು ನಾಮಕರಣ ಮಾಡಿದ್ದಾರೆ. ಯಶ್ ಪುತ್ರಿಗೆ ಐರಾ ಎಂದು ನಾಮಕರಣ ಮಾಡಿದ್ದರು. ಈ ಹೆಸರಿನಲ್ಲಿ ಯಶ್ ಮತ್ತು ರಾಧಿಕಾ ಹೆಸರಿನ ಮೊದಲ ಅಕ್ಷರ ಇತ್ತು. ಹಾಗೆ ಪುತ್ರನ ಹೆಸರಿನಲ್ಲಿಯೂ ಸಹ Y ಮತ್ತು R ಅಕ್ಷರವಿದೆ.

  ಯಥರ್ವ ಎಂದರೇನು?

  ಯಥರ್ವ ಎಂದರೆ ಸಂಪೂರ್ಣ ಎಂದು ಅರ್ಥ. ಮಗನ ನಾಮಕರಣ ವಿಡಿಯೋವನ್ನು ಶೇರ್ ಮಾಡಿ ಯಶ್ ದಂಪತಿ "ನಮ್ಮನ್ನು ಪೂರ್ಣಗೊಳಿಸಿದವನು" ಎಂದು ಬರೆದುಕೊಂಡಿದ್ದಾರೆ ಜೊತೆಗೆ "ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ" ಎಂದು ಹೇಳಿದ್ದಾರೆ.

   ನಾಮಕರಣದ ವಿಡಿಯೋ ಹಂಚಿಕೊಂಡ ಯಶ್ ದಂಪತಿ

  ನಾಮಕರಣದ ವಿಡಿಯೋ ಹಂಚಿಕೊಂಡ ಯಶ್ ದಂಪತಿ

  ಮಗನ ನಾಮಕರಣದ ಸಂಭ್ರಮದಲ್ಲಿ ಕುಟುಂಬದವರು ಮಾತ್ರ ಭಾಗಿಯಾಗಿದ್ದಾರೆ. ಹೂವಿನಿಂದ ಅಲಂಕರಿಸಿದ ಸುಂದರ ಮಂಟಪ ದಲ್ಲಿ ಯಶ್ ಇಬ್ಬರ ಮಕ್ಕಳು ರಾರಾಜಿಸುತ್ತಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಯಶ್ ಮತ್ತು ರಾಧಿಕಾ ಕಂಗೊಳಿಸುತ್ತಿದ್ದಾರೆ. ರಾಧಿಕಾ ಪೋಷಕರು ಮತ್ತು ಯಶ್ ಪೋಷಕರು ಹಾಗೂ ತೀರಾ ಆಪ್ತರು ಮಾತ್ರ ನಾಮಕರಣ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

   ಹೆಸರು ಹುಡುಕಿರುವುದಾಗಿ ಹೇಳಿದ್ದ ರಾಧಿಕಾ ಪಂಡಿತ್

  ಹೆಸರು ಹುಡುಕಿರುವುದಾಗಿ ಹೇಳಿದ್ದ ರಾಧಿಕಾ ಪಂಡಿತ್

  ಮಗನಿಗೆ ಹೆಸರು ಹುಡುಕಿರುವ ಬಗ್ಗೆ ರಾಧಿಕ ಪಂಡಿತ್ ಕೆಲವು ದಿನಗಳ ಹಿಂದೆ ಹೇಳಿದ್ದರು. ಪೋಸ್ಟ್ ಹಾಕುವ ಮೂಲಕ 'ನನ್ನ ಪ್ರತಿದಿನ ಮುಂಜಾನೆಯ ಖುಷಿಯ ಔಷಧ' ಎಂದು ಬರೆದುಕೊಂಡು 'ಮಗನಿಗೆ ಮುದ್ದಾದ ಹೆಸರು ಹುಡುಕಿದ್ದೇವೆ. ಕೆಲವೇ ದಿನಗಳಲ್ಲಿ ಅದನ್ನು ಬಹಿರಂಗಪಡಿಸುತ್ತೇವೆ' ಎಂದಿದ್ದರು ಇದೀಗ ಹೆಸರು ಬಹಿರಂಗವಾಗಿದೆ.

  English summary
  Rocking star Yash and Radhika Pandith Son Name Revealed. Yash and Radhika Pandith's Son Name is Yatharva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X