»   » 'ಯಶ್ ಜೊತೆ ಮದುವೆ ಆಗ್ಲಾ' ಎಂದ ಯುವತಿಗೆ ರಾಧಿಕಾ ಕೊಟ್ಟ ಉತ್ತರ

'ಯಶ್ ಜೊತೆ ಮದುವೆ ಆಗ್ಲಾ' ಎಂದ ಯುವತಿಗೆ ರಾಧಿಕಾ ಕೊಟ್ಟ ಉತ್ತರ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಹುಡುಗಿಯರ ಸಿಕ್ಕಾಪಟ್ಟೆ ಲವ್. ಅವರಿಗೆ ಮದುವೆ ಆಗಿದ್ದರೂ ಅವರ ಮೇಲಿನ ಪ್ರೀತಿ ಮಾತ್ರ ಸ್ವಲ್ಪವೂ ಕಮ್ಮಿ ಆಗಿಲ್ಲ. ಯಶ್ ಅವರ ಸ್ಟೈಲ್, ಅವರ ಸಿನಿಮಾ ನೋಡಿಯೇ ಅದೆಷ್ಟೋ ಹುಡುಗಿಯರು ಇನ್ನು ಮದುವೆ ಆಗುವ ಕನಸು ಕಾಣುತ್ತಿರುತ್ತಾರೆ ಅಂದ್ರೆ ನಂಬಲೇಬೇಕು.

ವರ್ಷದ ಸಂಭ್ರಮದಲ್ಲಿ ಯಶ್-ರಾಧಿಕಾ ಪಂಡಿತ್ ಜೋಡಿ

ಇಂತಹ ಅಭಿಮಾನಿಯೊಬ್ಬರು 'ನಾನು ಯಶ್ ಅವರನ್ನು ಮದುವೆ ಆಗ್ಲಾ..?' ಎಂದು ನೇರವಾಗಿ ರಾಕಿಂಗ್ ಸ್ಟಾರ್ ಪತ್ನಿ ರಾಧಿಕಾ ಪಂಡಿತ್ ಅವರನ್ನ ಕೇಳಿ ಬಿಟ್ಟಿದ್ದಾರೆ.

Radhika Pandit crazy gave replay to Yash fan comment

ಹೌದು, ರಾಧಿಕ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪತಿ ಯಶ್ ಜೊತೆಗಿರುವ ಮುದ್ದಾದ ಫೋಟೋ ಹಾಕಿಕೊಂಡಿದ್ದಾರೆ. ಆ ಫೋಟೋ ನೋಡಿದ ಯಶ್ ಅಭಿಮಾನಿಯೊಬ್ಬರು 'ನಾನು ಯಶ್ ಮದುವೆ ಆಗ್ಲಾ..?' ಎಂದು ಕಾಮೆಂಟ್ ಮಾಡಿದ್ದರು.

Radhika Pandit crazy gave replay to Yash fan comment

ಯಶ್ ಅಭಿಮಾನಿಯ ಈ ಕ್ರೇಜಿ ಪ್ರಶ್ನೆಗೆ ರಾಧಿಕಾ ಪಂಡಿತ್ ಕೂಡ ತಮಾಷೆಯಿಂದ ಉತ್ತರಿಸಿದ್ದಾರೆ. 'ಇದಕ್ಕೆ ಯಶ್ ಒಪ್ಪಿಗೆ ಕೊಟ್ಟರೆ ಮದುವೆ ಆಗಿ..' ಎಂದು ಹೇಳುವ ಮೂಲಕ ರಾಧಿಕಾ ಪಂಡಿತ್ ಫನ್ನಿ ಆಗಿ ಟಾಂಗ್ ಕೊಟ್ಟಿದ್ದಾರೆ.

English summary
Actress Radhika Pandit gave crazy replay to Yash fan comment in instagram.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada