For Quick Alerts
  ALLOW NOTIFICATIONS  
  For Daily Alerts

  ಮಾರ್ಗಿ ಮನೆಯಲ್ಲಿ ಮಾವಿನ ಅಡುಗೆ ಘಮ ಘಮ

  By Pavithra
  |

  ಕನ್ನಡ ಸಿನಿಮಾರಂಗದ ಮಾರ್ಗಿ ರಾಧಿಕಾ ಪಂಡಿತ್ ಸದ್ಯ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಚಿತ್ರದ ಬಗ್ಗೆ ಅಷ್ಟೇನೂ ಮಾಹಿತಿ ಮಾತ್ರ ಬಿಟ್ಟುಕೊಟ್ಟಿಲ್ಲ. ಮದುವೆ ಆದ ನಂತ್ರ ಚಿತ್ರರಂಗ ಹಾಗೂ ಸಂಸಾರ ಎರಡನ್ನೂ ಸರಿಯಾಗಿ ತೂಗಿಸಿಕೊಂಡು ಹೋಗುತ್ತಿರುವ ರಾಧಿಕಾ ಆಗಾಗ ಹಬ್ಬದ ಸಂಭ್ರಮ, ಮನೆಯ ಸಂಪ್ರದಾಯದ ಬಗ್ಗೆ ಅಭಿಮಾನಿಗಳ ಜೊತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  ಸದ್ಯ ಮಾರ್ಗಿ ಮನಿಯಿಂದ ಮಾನಿನ ಅಡುಗೆಯ ಘಮ ಘಮ ಪರಿಮಳ ಅಕ್ಕ ಪಕ್ಕದ ಮನೆಯವರ ಬಾಯಲ್ಲಿ ನೀರು ತರಿಸುತ್ತಿದೆಯಂತೆ. ಹೌದು ರಾಧಿಕಾ ಇತ್ತೀಚಿಗಷ್ಟೇ ಮಾನಿನ ಹಣ್ಣುಗಳನ್ನ ಬಳಸಿಕೊಂಡು ಅಂಬೆ ಖೋಲು ಎನ್ನು ಖಾದ್ಯವನ್ನ ತಯಾರಿಸಿದ್ದಾರೆ.

  'ರಿಯಾ'ಳನ್ನ ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್'ರಿಯಾ'ಳನ್ನ ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್

  ಈ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲಾ ತಮ್ಮ ಫೇಸ್ ಬುಕ್ ಹಾಗೂ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಯಲ್ಲಿ ಅಡುಗೆ ಬಗೆಗಿನ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.

  "ನಾನು ಮತ್ತು ನನ್ನ ಅಂಬೆ ಖೋಲು, ಅಂಬೆ ಖೋಲು ಇದು ಕೊಂಕಣಿಯ ಖಾದ್ಯ. ಇದನ್ನು ಸಣ್ಣ ಮಾವಿನ ಹಣ್ಣಿನಿಂದ ಮಾಡಲಾಗುತ್ತದೆ. ಚಿಕ್ಕ ವಯಸ್ಸಿನಿಂದ ಈ ಹುಳಿಯಾದ ರುಚಿಯಾದ ಖಾದ್ಯವನ್ನು ತಿಂದು ಬೆಳೆದಿದ್ದೇನೆ. ಎಂದಿದ್ದಾರೆ ಅಷ್ಟೇ ಅಲ್ಲದೆ ಮಾವಿನಹಣ್ಣಿನಲ್ಲಿ ಮಾಡುವ ಯಾವ ಅಡುಗೆ ಇಷ್ಟ" ಎನ್ನುವುದನ್ನ ಕೇಳಿದ್ದಾರೆ.

  ಒಟ್ಟಾರೆ ಹತ್ತು ವರ್ಷಕ್ಕೂ ಹೆಚ್ಚಿನ ಕಾಲದಿಂದ ಕನ್ನಡ ಸಿನಿಮಾರಂಗದಲ್ಲಿ ಪರ್ಫೆಕ್ಟ್ ಕಲಾವಿದೆ ಎನ್ನಿಸಿಕೊಂಡಿರುವ ರಾಧಿಕಾ ಪಂಡಿತ್ ಪರ್ಫೆಕ್ಟ್ ಹೆಂಡತಿ , ಸೊಸೆ ಕೂಡ ಎನ್ನುವುದು ಪಕ್ಕಾ ಆಗಿದೆ.

  English summary
  Kannada actor Radhika Pandit has made a Konkani dish Ambe Kholu using Mango fruits Radhika share the cuisine photo with short story on the social networking site.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X