»   » ವಾವ್....ಮದುವೆ ಬಳಿಕ ರಾಧಿಕಾ ಪಂಡಿತ್ ಮೊದಲ ಸಿನಿಮಾ ಶುರು.!

ವಾವ್....ಮದುವೆ ಬಳಿಕ ರಾಧಿಕಾ ಪಂಡಿತ್ ಮೊದಲ ಸಿನಿಮಾ ಶುರು.!

Posted By:
Subscribe to Filmibeat Kannada

ನಟಿ ರಾಧಿಕಾ ಪಂಡಿತ್ ಮದುವೆ ಬಳಿಕ ಸಿನಿಮಾಗಳಿಂದ ದೂರ ಇದ್ದರು. ರಾಕಿಂಗ್ ಸ್ಟಾರ್ ಯಶ್ ಕೈ ಹಿಡಿದ ಮೇಲೆ ರಾಧಿಕಾ ಪಂಡಿತ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಈಗ ರಾಧಿಕಾ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ.

ಬಂಗಾರಪೇಟೆ ಪಾನಿಪೂರಿ ತಿಂದ ಯಶ್ 'ತಿಂಡಿಪೋತ' ಪತ್ನಿ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಅವರ ಆಪ್ತ ಮೂಲಗಳ ಮಾಹಿತಿಯ ಪ್ರಕಾರ ಅವರು ಈಗ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಂದ್ಹಾಗೆ, ರಾಧಿಕಾ ಪಂಡಿತ್ ನಟಿಸುತ್ತಿರುವ ಹೊಸ ಸಿನಿಮಾದ ಎಕ್ಸ್ ಕ್ಲೂಸಿವ್ ಮಾಹಿತಿ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ಸಿಕ್ಕಿದೆ. ಮುಂದೆ ಓದಿ...

ಮದುವೆಯ ನಂತರ ಮೊದಲ ಚಿತ್ರ

ರಾಧಿಕಾ ಪಂಡಿತ್ ಮದುವೆಯ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಚಿತ್ರದ ಕಥೆ ತುಂಬ ಇಷ್ಟ ಆಗಿದ್ದು, ರಾಧಿಕಾ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ರಾಕ್ ಲೈನ್ ವೆಂಕಟೇಶ್ ನಿರ್ಮಾಣ

ರಾಧಿಕಾ ಪಂಡಿತ್ ಅವರ ಹೊಸ ಸಿನಿಮಾಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಲಿದ್ದಾರಂತೆ.

ಮಿಸಸ್ ರಾಮಾಚಾರಿ ರಾಧಿಕಾ ಪಂಡಿತ್ ಇದೇ ವಿಷಯಕ್ಕೆ ಈಗ ಸದ್ದು ಮಾಡುತ್ತಿದ್ದಾರೆ

ತಮಿಳು ನಿರ್ದೇಶಕಿ ಆಕ್ಷನ್ ಕಟ್

ತಮಿಳಿನ ಖ್ಯಾತ ನಿರ್ದೇಶಕರಾದ ಮಣಿರತ್ನಂ ಅವರ ಜೊತೆ ಕೆಲಸ ಮಾಡಿದ್ದ ನಿರ್ದೇಶಕಿ ಪ್ರಿಯಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ತಮಿಳಿನಲ್ಲಿ ಅವರು ಮೂರು ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರದ ಕಥೆ ಏನು?

ರಾಧಿಕಾ ಅವರ ಹೊಸ ಸಿನಿಮಾದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಅವರು ಈ ಹಿಂದೆ ಯಾವ ರೀತಿಯ ಸಿನಿಮಾ ಮಾಡುತ್ತಿದ್ದರೋ ಅದೇ ಮಾದರಿಯಲ್ಲಿ ಈ ಚಿತ್ರ ಕೂಡ ಇರಲಿದೆಯಂತೆ.

ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ರಾಧಿಕಾ ಪಂಡಿತ್!

ಹೀರೋ ಯಾರು?

ಈ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿಯಾಗಿದ್ದು, ಹೀರೋ ಯಾರು ಎಂಬುದು ಇನ್ನು ಬಹಿರಂಗವಾಗಿಲ್ಲ.

ಮಹಿಳಾ ಪ್ರಧಾನ ಸಿನಿಮಾ ಅಲ್ಲ

ರಾಧಿಕಾ ಪಂಡಿತ್ ಅವರ ಈ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿಲ್ಲವಂತೆ. ಅವರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಹೀರೋ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆಯಂತೆ.

'ಸಂತು ಸ್ಟ್ರೈಟ್ ಫಾರ್ವರ್ಡ್' ನಂತರ....

ರಾಧಿಕಾ ಪಂಡಿತ್ ಮದುವೆಯ ಸಂದರ್ಭದಲ್ಲಿ 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರದಲ್ಲಿ ನಟಿಸಿದ್ದರು. ಆದರೆ ಈಗ ವರ್ಷದ ಬಳಿಕ ಮತ್ತೆ ರಾಧಿಕಾ ಪಂಡಿತ್ ಸಿನಿಮಾ ಮಾಡುತ್ತಿದ್ದಾರೆ.

English summary
According to Sources, Kannada Actress Radhika Pandit to act in A New Film, Produced By Rockline Venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada