»   » ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ನಾಯಕ ಯಾರು?

ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ನಾಯಕ ಯಾರು?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಪತ್ನಿ, ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರ ಮುಂದಿನ ಚಿತ್ರ ಯಾವುದು ಎಂದು ಘೋಷಣೆ ಆಗಿದೆ. ರಾಧಿಕಾ ಅವರ ಮುಂದಿನ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕುತ್ತಿದ್ದಾರೆ ಎಂದು ಸ್ವತಃ ರಾಧಿಕಾ ಅವರೇ ತಮ್ಮ Instagram ಸ್ಪಷ್ಟಪಡಿಸಿದ್ದಾರೆ.

ಈ ಚಿತ್ರದ ನಾಯಕ ಯಾರು ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿತ್ತು. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ರಾಧಿಕಾ ಪಂಡಿತ್ ಅವರ ಹೊಸ ಚಿತ್ರದಲ್ಲಿ 'ರಂಗಿತರಂಗ' ಖ್ಯಾತಿಯ ನಿರೂಪ್ ಭಂಡಾರಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ವಾವ್....ಮದುವೆ ಬಳಿಕ ರಾಧಿಕಾ ಪಂಡಿತ್ ಮೊದಲ ಸಿನಿಮಾ ಶುರು.!

Radhika pandit Next With Nirup Bhandari

'ರಂಗಿತರಂಗ' ಚಿತ್ರದ ನಂತರ 'ರಾಜರತ್ನ' ಚಿತ್ರದಲ್ಲಿ ಅಭಿನಯಿಸುತ್ತಿರುವ ನಿರೂಪ್ ಭಂಡಾರಿ ತಮ್ಮ ಚೊಚ್ಚಲ ಚಿತ್ರದಲ್ಲಿಯೇ ಭರವಸೆ ಮೂಡಿಸಿದ್ದರು. ಮದುವೆಗೆ ಮುಂಚೆ ಯಶ್ ಜೊತೆ 'ಸಂತು ಸ್ಟ್ರೈಟ್ ಫಾರ್ವಡ್' ಚಿತ್ರದಲ್ಲಿ ರಾಧಿಕಾ ಕೊನೆಯದಾಗಿ ಅಭಿನಯಿಸಿದ್ದರು.

ಅದು ರಾಧಿಕಾ 'ಕಮ್ ಬ್ಯಾಕ್' ಸಿನಿಮಾ ಅಂತ ಕರೆಯಬೇಡಿ ಎಂದ ಯಶ್.!

ಇನ್ನು ಈ ಚಿತ್ರವನ್ನ ಮಣಿರತ್ನ ಅವರ ಬಳಿ ಸಹಾಯಕ ನಿರ್ದೇಶಕಿ ಆಗಿದ್ದ ಪ್ರಿಯಾ ಅವರು ನಿರ್ದೇಶನ ಮಾಡಲಿದ್ದಾರಂತೆ. ನಿರೂಪ್ ಭಂಡಾರಿ ಸಹೋದರ ಅನೂಪ್ ಭಂಡಾರಿ ಸಂಗೀತ ಒದಗಿಸಲಿದ್ದು, ಪ್ರೀತಾ ಜಯರಾಂ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆಯಂತೆ.

English summary
Rocking Star Yash Wife Radhika Pandit Announced her Next Film With Rockline Venkatesh. Rangitharanga Fame Nirup Bhandari Hero For This Project.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada