»   » ಅಜೇಯ್ ರಾವ್ ಜತೆ ರಾಧಿಕಾ ಅಥವಾ ಅಮೂಲ್ಯಾ ಡ್ಯುಯೆಟ್

ಅಜೇಯ್ ರಾವ್ ಜತೆ ರಾಧಿಕಾ ಅಥವಾ ಅಮೂಲ್ಯಾ ಡ್ಯುಯೆಟ್

Posted By:
Subscribe to Filmibeat Kannada

ಈ ವರ್ಷದ ಬ್ಲಾಕ್ ಬಾಸ್ಟರ್ ಹಿಟ್ 'ಕೃಷ್ಣ ಲೀಲಾ' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ಅಜೇಯ್ ರಾವ್ ತಮ್ಮ ಮುಂದಿನ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಅನಿಲ್ ಕುಮಾರ್ ಅವರೊಂದಿಗೆ 'ಕೃಷ್ಣ' ಅಜೇಯ್ ಮುಂದಿನ ಪ್ರಾಜೆಕ್ಟ್ ತಯಾರಾಗುತ್ತಿದೆ.

'ಕೃಷ್ಣನ್ ಲವ್ ಸ್ಟೋರಿ' ನಿರ್ಮಾಪಕ ಉದಯ್ ಮೆಹ್ತಾ ಹಾಗೂ ಅಜೇಯ್ ರಾವ್ 5 ವರ್ಷಗಳ ನಂತರ ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗಷ್ಟೆ ತೆರೆ ಕಂಡು 100 ದಿನಗಳನ್ನು ಪೂರೈಸಿ ಯಶಸ್ವಿಯಾಗಿರುವ 'ಕೃಷ್ಣ ಲೀಲಾ' ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡಬೇಕಿತ್ತು, ಆದರೆ ಕಾರಣಾಂತರಗಳಿಂದ ಅಜೇಯ್ ನಿರ್ಮಾಣ ಮಾಡುವಂತಾಗಿತ್ತು.[ಜುಲೈನಲ್ಲಿ ಐಂದ್ರಿತಾ ರೇ ಮನಸಿನ ಮಾತು]

Radhika Pandit or Amoolya likely to pair with Ajai Rao

ಇದೀಗ ಲೇಟೆಸ್ಟ್ ಸುದ್ದಿ ಪ್ರಕಾರ ಇನ್ನೂ ಹೆಸರಿಡದ ಅಜೇಯ್ ರಾವ್ ಚಿತ್ರಕ್ಕೆ ನಾಯಕಿಯರು ಯಾರೆಂಬುದು ಇನ್ನೂ ಫೈನಲ್ ಆಗಿಲ್ಲ. ಸದ್ಯಕ್ಕೆ ರಾದಿಕಾ ಪಂಡಿತ್, ಅಮೂಲ್ಯ ಹೆಸರು ಕೇಳಿ ಬರುತ್ತಿದ್ದು, ಇವರಿಬ್ಬರಲ್ಲಿ ಯಾರದರೊಬ್ಬರು, ತಪ್ಪಿದರೆ ಹೊಸ ನಾಯಕಿ ಎಂಟ್ರಿ ಆಗುವ ಸಾಧ್ಯತೆಗಳಿವೆ.[ಚಿತ್ರದುರ್ಗದಲ್ಲಿ ಕೃಷ್ಣನ ಲೀಲೆಗಳನ್ನು ತೆರೆದಿಟ್ಟ ಶಶಾಂಕ್]

ಸುಮಂತ್, ರಾಧಿಕಾ ಪಂಡಿತ್ ಒಂದಾಗಿ ಕಾಣಿಸಿಕೊಂಡಿದ್ದ 'ದಿಲ್ ವಾಲಾ' ಚಿತ್ರದ ಮೂಲಕ ನಿರ್ದೇಶನ ಪ್ರಾರಂಭ ಮಾಡಿದ ಅನಿಲ್ ಕುಮಾರ್ ಅಜೇಯ್ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರ ಅಗಸ್ಟ್ ತಿಂಗಳಿನಲ್ಲಿ ಸೆಟ್ಟೇರುತ್ತಿದೆ.

English summary
Ajay's new film being produced by Uday Mehta has not been titled yet and the film is likely to be launched in the month of August. Kannada Actress Amoolya, Radhika Pandit or a new heroine will be playing the female lead opposite Ajai Rao. The Movie is directed by Anil kumar of "Dilwala' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada