Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ರಿಸ್‌ಮಸ್ ಸೆಲೆಬ್ರೇಷನ್ ಫೋಟೊ ಶೇರ್ ಮಾಡಿದ ರಾಧಿಕಾ ಪಂಡಿತ್: ಎಲ್ಲರೂ ಕೇಳಿದ್ದು ಅದೇ ಪ್ರಶ್ನೆ!
ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ರಾಧಿಕಾ ಪ್ರತಿ ಹಬ್ಬದ ಸಂಭ್ರಮಾಚರಣೆ ಫೋಟೊಗಳನ್ನು ಶೇರ್ ಮಾಡಿ ಶುಭಾಶಯ ಕೋರುತ್ತಾರೆ. ಈ ಬಾರಿ ರಾಕಿಂಗ್ ಜೋಡಿ ಮನೆಯಲ್ಲಿ ಕ್ರಿಸ್‌ಮಸ್ ಸಂಭ್ರಮ ಕೂಡ ಜೋರಾಗಿತ್ತು.
ಮನೆಯಲ್ಲಿ ಮಕ್ಕಳು ಇರುವುದರಿಂದ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ಕ್ರಿಸ್‌ಮಸ್ ಟ್ರೀ ಅಲಂಕರಿಸಿ, ಸಾಂತಾ ಟೋಪಿ ತೊಟ್ಟು ಗಿಫ್ಟ್ ಬಾಕ್ಸ್ ಓಪನ್ ಮಾಡಿ ನೋಡಿ ರಾಧಿಕಾ, ಐರಾ, ಯಥರ್ವ್ ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊವೊಂದನ್ನು ರಾಧಿಕಾ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜೊತೆಗೆ ಕ್ರಿಸ್‌ಮಸ್ ಹಬ್ಬ ಶುಭಾಶಯ ಕೋರುತ್ತಿದ್ದಾರೆ.
Mr
&
Mrs
ರಾಮಾಚಾರಿಗೆ
8
ವರ್ಷ:
ಅಭಿಮಾನಿಗಳಿಂದ
8
ದಿನ
'ಯಶ್
ಟೈಮ್ಸ್'
ಸಂಭ್ರಮ!
ಇನ್ನು ಫೋಟೊ ಶೇರ್ ಮಾಡಿರುವ ನಟಿ ರಾಧಿಕಾ ಪಂಡಿತ್ "ಹಬ್ಬಗಳು ಅಂದರೆ ಬರೀ ಒಳ್ಳೆಯ ಆಹಾರ, ಪಾರ್ಟಿ ಮತ್ತು ಉಡುಗೊರೆ ಅಷ್ಟೆ ಅಲ್ಲ. ಬಹಳ ಅದ್ಭುತವಾದ ಹಾಗೂ ಸಂತಸವನ್ನು ಹರಡುವ ಸಮಯ. ಎಲ್ಲರೂ ಬಹಳ ಚೆನ್ನಾಗಿ ಹಬ್ಬ ಆಚರಿಸಿದ್ದೀರಿ ಎಂದು ಆಶಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಎಲ್ಲಾ ಸರಿ ಯಶ್ ಸರ್ ಎಲ್ಲಿ ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಕೇಳುತ್ತಿದ್ದಾರೆ. "ಫೋಟೊದಲ್ಲಿ ನಿಮ್ಮ ಸಾಂತಾ ಮಿಸ್ ಆಗಿದ್ದಾರೆ ಅಲ್ವಾ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

8 ವರ್ಷಗಳ ಹಿಂದೆ ಕ್ರಿಸ್‌ಮಸ್ ಹಬ್ಬದ ದಿನವೇ ಯಶ್- ರಾಧಿಕಾ ಜೋಡಿಯ 'Mr & Mrs ರಾಮಾಚಾರಿ' ಸಿನಿಮಾ ರಿಲೀಸ್ ಆಗಿ ಹಿಟ್ ಆಗಿತ್ತು. ಇನ್ನು ಯಶ್ 'KGF ಚಾಪ್ಟರ್- 2' ನಂತರ ಯಾವ ಸಿನಿಮಾದಲ್ಲಿ ನಟಿಸ್ತಾರೆ ಎನ್ನುವ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ಜನವರಿ 8ಕ್ಕೆ ರಾಕಿಂಗ್ ಸ್ಟಾರ್ ಬರ್ತ್‌ಡೇ. ಅದೇ ದಿನ ಯಶ್19 ಸಿನಿಮಾ ಘೋಷಣೆ ಆಗಬಹುದು ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ "ನನ್ನ ಮುಂದಿನ ಸಿನಿಮಾ ಬಗ್ಗೆ ನಾನೇ ಹೇಳ್ತೀನಿ, ಅಲ್ಲಿವರೆಗೂ ಯಾವುದೇ ಊಹಾಪೋಹ ನಂಬಬೇಡಿ" ಎಂದು ಈಗಾಗಲೇ ಯಶ್ ಹೇಳಿದ್ದಾರೆ. ಜನವರಿ 8ಕ್ಕೆ ಬ್ರೇಕಿಂಗ್ ನ್ಯೂಸ್ ಸಿಗುತ್ತಾ ಕಾದು ನೋಡಬೇಕು.