For Quick Alerts
  ALLOW NOTIFICATIONS  
  For Daily Alerts

  ಬುಕ್ ಹಿಡಿದು ಓದುತ್ತಿರುವ ಐರಾ ಯಶ್: ಅನು ಪ್ರಭಾಕರ್ ಗೆ ಧನ್ಯವಾದ ತಿಳಿಸಿದ ರಾಧಿಕಾ

  |

  ರಾಧಿಕಾ ಪಂಡಿತ್ ಸದಾ ಸಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಸುಂದರವಾದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಮುದ್ದು ಮಕ್ಕಳಾದ ಐರಾ ಮತ್ತು ಜೂ.ಯಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

  Madagaja ಚತ್ರೀಕರಣ ನಡೆದಿದ್ದು ಹೇಗೆ , ನಿರ್ದೇಶಕ Mahesh ಹೇಳ್ತಾರೆ ಕೇಳಿ | Filmibeat Kannada

  ಇದೀಗ ರಾಧಿಕಾ ಮಗಳ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಐರಾ ಯಶ್ ಪುಸ್ತಕ ಹಿಡಿದು ಕುಳಿತ್ತಿದ್ದಾರೆ. ಪುಸ್ತಕ ಓದುತ್ತಿರುವ ಐರಾ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟುಕೊಳ್ಳುತ್ತಿದ್ದಾರೆ. ಈಗಿನ ಮಕ್ಕಳು ಟಿವಿ, ಮೊಬೈಲ್, ಗೇಮ್ ಅಂತ ಬ್ಯುಸಿಯಾಗಿರುತ್ತಾರೆ. ಆದರೆ ಐರಾ ಬುಕ್ ಓದಲು ಶುರು ಮಾಡಿಕೊಂಡಿದ್ದಾರೆ. ಇಷ್ಟು ಬೇಗ ಐರಾ ಓದಲು ಪ್ರಾರಂಭಿಸಿದ್ರಾ..? ರಾಧಿಕಾ, ಅನು ಪ್ರಭಾಕರ್ ಗೆ ಧನ್ಯವಾದ ತಿಳಿಸಿದ್ದೇಕೆ? ಮುಂದೆ ಓದಿ..

  ಕೊರೊನಾ ಲಾಕ್ ಡೌನ್ ನಿಂದ ರಾಧಿಕಾ ಪಂಡಿತ್ ಇದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆಕೊರೊನಾ ಲಾಕ್ ಡೌನ್ ನಿಂದ ರಾಧಿಕಾ ಪಂಡಿತ್ ಇದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ

  ಮಗಳ ಕೈಗೆ ಪುಸ್ತಕ ನೀಡಿದ ರಾಧಿಕಾ

  ಮಗಳ ಕೈಗೆ ಪುಸ್ತಕ ನೀಡಿದ ರಾಧಿಕಾ

  ಅಂದ್ಹಾಗೆ ಮಗಳ ಕೈಗೆ ಬುಕ್ ನೀಡಿರುವುದು ತಾಯಿ ರಾಧಿಕಾ. ಈಗಿನಿಂದನೆ ಪುಸ್ತಕದ ಅಭ್ಯಾಸ ಮಾಡಿದರೆ ಓದುವ ಕಡೆ ಆಸಕ್ತಿ ಬರುತ್ತೆ ಎಂದು ಐರಾ ಕೈಗೆ ಪುಸ್ತಕ ನೀಡಿದ್ದಾರೆ. ಫೋಟೋ ಜೊತೆಗೆ ರಾಧಿಕಾ "ಪರೀಕ್ಷೆ ಸಮಯದಲ್ಲಿಯೂ ನಾನು ಈ ರೀತಿ ಏಕಾಗ್ರತೆಯಿಂದ ಓದಿರಲಿಲ್ಲ. ಫೋನ್ ಮತ್ತು ಟಿವಿ ಬದಲಿಗೆ ಮಗಳ ಕೈಗೆ ಪುಸ್ತಕ ನೀಡಲು ಬಯಸುತ್ತೇನೆ. ಅವಳಿಗೆ ಮನರಂಜನೆಗಾಗಿ ಪುಸ್ತಕವನ್ನು ನೀಡಿದ್ದೀನಿ. ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತಾಳೆ. ಖಂಡಿತ ಈಗ ಅವಳು ಚಿತ್ರಗಳನ್ನು ನೋಡುತ್ತಿದ್ದಾಳೆ." ಎಂದು ಬರೆದುಕೊಂಡಿದ್ದಾರೆ.

  ಅನು ಪ್ರಭಾಕ್ ದಂಪತಿ ನೀಡಿರುವ ಗಿಫ್ಟ್

  ಅನು ಪ್ರಭಾಕ್ ದಂಪತಿ ನೀಡಿರುವ ಗಿಫ್ಟ್

  ಇನ್ನೂ ರಾಧಿಕಾ ಐರಾ ಗೆಳತಿ ನಂದನಾ ಪ್ರಭಾಕರ್ ಮುಖರ್ಜಿ, ಅನು ಪ್ರಭಾಕರ್ ಮತ್ತು ರಘು ಮುಖರ್ಜಿಗೆ ಧನ್ಯವಾದ ತಿಳಿಸಿದ್ದಾರೆ. ಐರಾ ಹುಟ್ಟುಹಬ್ಬಕ್ಕೆ ಅನು ಪ್ರಭಾಕರ್ ದಂಪತಿ ಐರಾಗೆ ನೀಡಿರುವ ಗಿಫ್ಟ್ ಇದು. ಹಾಗಾಗಿ ರಾಧಿಕಾ ಧನ್ಯವಾದ ತಿಳಿಸಿದ್ದಾರೆ.

  ವಯಸ್ಸಿನ ಬಗ್ಗೆ ಅಣುಕಿಸಿದವನಿಗೆ ತಿರುಗೇಟು ನೀಡಿದ ಅನು ಪ್ರಭಾಕರ್ವಯಸ್ಸಿನ ಬಗ್ಗೆ ಅಣುಕಿಸಿದವನಿಗೆ ತಿರುಗೇಟು ನೀಡಿದ ಅನು ಪ್ರಭಾಕರ್

  ನಂದನಾ ಸಹ ಬುಕ್ ಹಿಡಿದು ಕುಳಿತುಕೊಳ್ಳುತ್ತಾಳೆ

  ನಂದನಾ ಸಹ ಬುಕ್ ಹಿಡಿದು ಕುಳಿತುಕೊಳ್ಳುತ್ತಾಳೆ

  ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಪುತ್ರಿ ನಂದನಾ ಸಹ ಬುಕ್ ಹಿಡಿದು ಕುಳಿತಿರುವ ಫೋಟೋವನ್ನು ರಘು ಮುಖರ್ಜಿ ಶೇರ್ ಮಾಡಿದ್ದರು. ಓದಲು ಪುಸ್ತಕವನ್ನು ಹಿಡಿದು ಕುಳಿತುಕೊಳ್ಳುತ್ತಾಳೆ. ಅವಳು ಹೀಗೆ ಪುಸ್ತಕ ಹಿಡಿದು ಕೂರುವುದು ಕಲಿಕೆಗೆ ಉತ್ತಮ ಆರಂಭವಾಗಲಿದೆ" ಎಂದು ಬರೆದುಕೊಂಡಿದ್ದರು. ಈಗ ನಂದನಾ ಗೇಳತಿ ಐರಾ ಸಹ ಓದಲು ಶುರುಮಾಡಿಕೊಂಡಿದ್ದಾರೆ.

  ಬೀಚ್ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಎಂದಿದ್ದ ರಾಧಿಕಾ

  ಬೀಚ್ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಎಂದಿದ್ದ ರಾಧಿಕಾ

  ಇತ್ತೀಚಿಗೆ ರಾಧಿಕಾ ಲಾಕ್ ಡೌನ್ ನಿಂದ ಏನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಬೀಚ್, ಸ್ನೇಹಿತರನ್ನು ಭೇಟಿಯಾಗುವುದು, ಮಕ್ಕಳನ್ನು ಪಾರ್ಕ್ ಗೆ ಕರೆದುಕೊಂಡು ಹೋಗುವುದು ಹೀಗೆ ಸಾಕಷ್ಟು ವಿಚಾರಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ಜೊತೆಗೆ ಅಭಿಮಾನಿಗಳಿಗೆ ಏನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಅಭಿಮಾನಿಗಳು ಐರಾಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೀವಿ. ದಯವಿಟ್ಟು ಫೋಟೋ ಶೇರ್ ಮಾಡಿ ಎಂದು ಕಾಮೆಂಟ್ ಮಾಡಿದ್ದರು. ಇದೀಗ ಐರಾ ಬುಕ್ ಹಿಡಿದು ದರ್ಶನ ನೀಡಿದ್ದಾರೆ.

  English summary
  Radhika Pandit shares her daughter Ayra reading book photo. This book is gifted by Anu Prabhakar Mukherjee.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X