»   » ಯಶ್ ಬಗ್ಗೆ ಫೇಸ್ ಬುಕ್ ನಲ್ಲಿ ರಾಧಿಕಾ ಪಂಡಿತ್ ಹೇಳಿದ್ದೇನು?

ಯಶ್ ಬಗ್ಗೆ ಫೇಸ್ ಬುಕ್ ನಲ್ಲಿ ರಾಧಿಕಾ ಪಂಡಿತ್ ಹೇಳಿದ್ದೇನು?

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದ ಈಗಿನ ಜಮಾನದ ನಾಯಕ ನಾಯಕಿಯರುಗಳಲ್ಲಿ ಅತ್ಯುತ್ತಮ ಜೋಡಿ ಯಾವುದು ಎಂದಾಗ ನಿಸ್ಸಂದೇಹವಾಗಿ ಮೊದಲು ಬರುವ ಹೆಸರು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರದ್ದು.

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇಬ್ಬರೂ, ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಈ ಜೋಡಿಗಳ 'ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ' ಚಿತ್ರ ಯಾವ ರೀತಿ ಬಾಕ್ಸಾಫೀಸ್ ಧೂಳೆಬ್ಬಿಸಿತು ಎನ್ನುವುದು ಗೊತ್ತಿರುವ ವಿಚಾರ.

ಜೊತೆಗೆ ಈ ಚಿತ್ರದಲ್ಲಿ ಇಬ್ಬರ ನಡುವಿನ ಆನ್ ಸ್ಕ್ರೀನ್ ಕೆಮೆಸ್ಟ್ರಿ ಹೆಂಗಿತ್ತೆಂದರೆ ಇಬ್ಬರೂ ನಿಜವಾದ ಪ್ರೇಮಿಗಳು ಎನ್ನುವ ರೀತಿಯಲ್ಲಿತ್ತು ಎಂದು ಚಿತ್ರ ನೋಡಿ ಹೊರಬಂದವರ ಅಂಬೋಣ.

ಇವರಿಬ್ಬರ ನಡುವೆ ಗುಸುಗುಸು ಸುದ್ದಿಗಳು ಸ್ವೇಚ್ಚವಾಗಿ ಹರಿದಾಡುತ್ತಲೇ ಇದೆ. ಈಗಲೂ ಇವರಿಬ್ಬರು ವಾರಕ್ಕೆರಡು ಬಾರಿ ಮಲ್ಲೇಶ್ವರಂನ ಎಂಇಎಸ್ ಕಾಲೇಜು ಪಕ್ಕದ ಕಾಫಿ ಡೇಯಲ್ಲಿ ಪಕ್ಕಾ ಪ್ರೇಮಿಗಳಂತೆ ಗಂಟೆಗಟ್ಟಲೆ ಕಳೆಯುತ್ತಾರೆ ಎಂದೆಲ್ಲಾ ಸುದ್ದಿಯಾಗಿತ್ತು.

ರಾಧಿಕಾ ಹಲವು ಬಾರಿ ಯಶ್ ಒಬ್ಬ dedicated ನಟ ಎಂದು ಹೊಗಳಿದ್ದುಂಟು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಇಟೆಲಿಯಲ್ಲಿ ಚಿತ್ರೀಕರಣ ಮುಗಿಸಿ ಬಂದಿರುವ ರಾಧಿಕಾ ಮತ್ತೊಮ್ಮೆ, ಯಶ್ ಬಗ್ಗೆ ಸಾಮಾಜಿಕ ತಾಣದಲ್ಲಿ ಹೆಮ್ಮೆಯ ಮಾತನ್ನಾಡಿದ್ದಾರೆ.

ಗಾಸಿಪ್ ಸುದ್ದಿಗಳು

ಯಶ್ ಮತ್ತು ರಾಧಿಕಾ ಪಂಡಿತ್ ನಡುವೆ ಪ್ರೀತಿ ಜೋರಾಗಿದೆ, ಇನ್ನೇನು ಮದುವೆ ಕೂಡ ಆಗ್ತಾರಂತೆ ಇತ್ತೀಚೆಗಷ್ಟೇ ಭಾರೀ ಸುದ್ದಿಯಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ರಾಧಿಕಾ ಕುಟುಂಬದ ಜೊತೆ ಯಶ್ ಗೋವಾಗೂ ಪ್ರಯಾಣಿಸಿದ್ದರು.

ಫೇಸ್ ಬುಕ್ ನಲ್ಲಿ

ಯಶ್ ಒಬ್ಬ ಹಾರ್ಡ್ ವರ್ಕರ್. ನಾನು ಯಶ್ ಜೀವನದ ಪ್ರತಿ ಕ್ಷಣಗಳನ್ನು ನೋಡಿದ್ದೇನೆ. ಯಶ್ ತನ್ನ ಕೆಲಸದ ಮೇಲೆ ತೋರುವ ವಿಶೇಷ ಕಾಳಜಿ ಬಗ್ಗೆ ನನಗೆ ವಿಶೇಷ ಒಲವು ಇದೆ ಎಂದು ರಾಧಿಕಾ ತನ್ನ ಫೇಸ್ ಬುಕ್ ಟೈಂ ಲೈನ್ ನಲ್ಲಿ ಬರೆದು ಕೊಂಡಿದ್ದಾರೆ. ಇನ್ನೂ ಇದೆ. (Photo: Radhika Pandit FB timeline)

ಕಿರುತೆರೆ ಮೂಲಕ ಚಿತ್ರೋದ್ಯಮಕ್ಕೆ

ನಾನು ಹಾಗೂ ಯಶ್ ಕಿರುತೆರೆ ಮೂಲಕ ಚಿತ್ರೋದ್ಯಮಕ್ಕೆ ಬಂದವರು. ಶಶಾಂಕ್ ಸರ್ ನಿರ್ದೇಶನದ ಮೊಗ್ಗಿನ ಮನಸು ಚಿತ್ರದ ಮೊಲಕ ನಾವಿಬ್ಬರೂ ಪೂರ್ಣ ಪ್ರಮಾಣದ ಹೀರೋ/ಹೀರೋಯಿನ್ ಗಳಾಗಿದ್ದು - ರಾಧಿಕಾ ಪಂಡಿತ್

ಅದರಲ್ಲಿ ಯಶ್ ಕೂಡಾ ಒಬ್ಬ

ಒಳ್ಳೆ ವ್ಯಕ್ತಿಗಳಿಂದ ಒಳ್ಳೆ ನಟನೆ ಹೊರಹೊಮುತ್ತೆ, ಸಹಜವಾಗಿಯೂ ಅವರು ಒಳ್ಳೆ ವ್ಯಕ್ತಿಗಳಾಗಿರುತ್ತಾರೆ. ಅದರಲ್ಲಿ ಯಶ್ ಕೂಡಾ ಒಬ್ಬ. ನಾನು ಅವನ ಬೆಸ್ಟ್ ಫ್ರೆಂಡ್ ಎಂದು ರಾಧಿಕಾ ಯಶ್ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ.

ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರ

ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರ ನೀಡುವ ಮೂಲಕ ಸದ್ಯ ಯಶಸ್ಸಿನಲಿ ಉತ್ತುಂಗದಲ್ಲಿರುವ ಯಶ್ ಗೆ ನಾನು ಆತನ ಬೆಸ್ಟ್ ಫ್ರೆಂಡ್ ಆಗಿ ಶುಭಾಶಯ ಕೋರುತ್ತೇನೆ ಅಂತಾ ರಾಧಿಕಾ ಪಂಡಿತ್ ತನ್ನ ಟೈಮ್ ಲೈನಿನಲ್ಲಿ ಬರೆದಿದ್ದಾರೆ.

English summary
Radhika Pandit written about Yash in her face book timeline.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada